ಮುನಿಸು ಮರೆತ ಶಂಕರ್ – ಡಿಸೆಂಬರ್ ನಿಂದಲೇ “ಇಂಡಿಯನ್ 2”  ಚಿತ್ರೀಕರಣ ಶುರು..!  

1 min read

ಮುನಿಸು ಮರೆತ ಶಂಕರ್ – ಡಿಸೆಂಬರ್ ನಿಂದಲೇ “ಇಂಡಿಯನ್ 2”  ಚಿತ್ರೀಕರಣ ಶುರು..!

ಚೆನ್ನೈ :  ಅನಿಯನ್ , ಇಂಡಿಯನ್ , ರೋಬೋ ನಂತಹ ಸೂಪರ್ ಹಿಟ್ ಸಿನಿಮಾಗಳ ನಿರ್ದೇಶನ ಮಾಡಿರುವ ಸ್ಟಾರ್ ಡೈರೆಕ್ಟರ್ ಶಂಕರ್… ತಮಿಳು ಅಷ್ಟೇ ಅಲ್ಲದೇ ಬಹುಭಾಷಾ ಸಿನಿಮಾಗಳಲ್ಲಿ 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ದಕ್ಷಿಣ ಭಾರತದ ಸೂಪರ್ ಸ್ಟಾರ್ ಕಮಲ್ ಹಾಸನ್.. ಇವರಿಬ್ಬರ  ಕಾಂಬಿನೇಷನ್ ನಲ್ಲಿ ಮೂಡಿಬರಬೇಕಿದ್ದ ಬಹುನಿರೀಕ್ಷೆಯ ಸಿನಿಮಾ ಇಂಡಿಯನ್ ಕೆಲ ಅಡಚಣೆಗಳಿಂದಾಗಿ ನಿಂತು ಹೋಗಿತ್ತು.. ಇದ್ರಿಂದ ಇಂಡಿಯನ್ ಸಿನಿಮಾಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿತ್ತು..

ಆದ್ರೀಗ ಅಭಿಮಾನಿಗಳಿಗೆ ಭರ್ಜರಿ ಸುದ್ದಿಯೊಂದು ಸಿಕ್ಕಿದೆ.. ಅದೇನೆಂದ್ರೆ ನಿರ್ದೇಶಕ ಶಂಕರ್ ಮುನಿಸುಮರೆತಿದ್ದಾರಂತೆ.. ಅಲ್ಲದೇ ಸಿನಿಮಾದ ಶೂಟಿಂಗ್ ಡಿಸೆಂಬರ್ ನಿಂದಲೇ ಪ್ರಾರಂಭವಾಗಲಿದ್ಯಂತೆ..  ಚಿತ್ರದ ನಿರ್ದೇಶಕ ಶಂಕರ್‌ ಅವರು ಈ ಸಿನಿಮಾಗೆ ಗ್ರೀನ್‌ ಸಿಗ್ನಲ್ ಕೊಟ್ಟಿದ್ದಾರೆ. ಮರಳಿ ಸಿನಿಮಾ ತಂಡ ಸೇರಲು ಶಂಕರ್‌  ಒಪ್ಪಿದ್ದಾರೆ ಎಂದು ಹೇಳಲಾಗ್ತಿದೆ.

ಈ ಸುದ್ದಿ ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸಿದೆ. ಇಂಡಿಯನ್‌ 2 ಸಿನಿಮಾ ಹಲವು ಕಾರಣಕ್ಕೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಈಗಾಗಲೇ ಸಾಕಷ್ಟು ಬಾರಿ ಚಿತ್ರದ ಶೂಟಿಂಗ್ ಸ್ಥಗಿತಗೊಂಡಿದೆ.  ಕೆಲವು ತಿಂಗಳಿನಿಂದ ಚಿತ್ರ ತಂಡಕ್ಕೆ ಕಾನೂನಾತ್ಮಕ ಸಮಸ್ಯೆ ಎದುರಾಗಿದೆ. ಚಿತ್ರದ ನಿರ್ದೇಶಕ ಶಂಕರ್ ಮತ್ತು ನಿರ್ಮಾಣ ಸಂಸ್ಥೆಯ ಲೈಕ ಪ್ರೋಡಕ್ಷನ್ಸ್‌ ನಡುವಿನ ಭಿನ್ನಾಭಿಪ್ರಾಯ ಕೋರ್ಟ್‌ ಮೆಟ್ಟಿಲೇರಿತ್ತು. ಇದರಿಂದಾಗಿ ಚಿತ್ರದ ಶೂಟಿಂಗ್‌ ನಿಂತು ಹೋಗಿದೆ.

1996 ರಲ್ಲಿ ತೆರೆಕಂಡ ಇಂಡಿಯನ್ ಚಿತ್ರದ ಮುಂದುವರಿದ ಭಾಗ ಇಂಡಿಯನ್ 2. ಇಂಡಿಯನ್‌ ಸಿನಿಮಾ ಸೂಪರ್‌ ಹಿಟ್‌ ಆಗಿ ಸಾಲು ಸಾಲು ದಾಖಲೆ ಮಾಡಿತ್ತು.  ಹಾಗಾಗಿಯೇ ಇಂಡಿಯನ್ 2 ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.. ಇನ್ನೂ ಈ ಚಿತ್ರದಲ್ಲಿ ಕಮಲ್ ಹಾಸನ್ ಜೊತೆಗೆ ಸಿದ್ಧಾರ್ಥ, ರಕುಲ್ ಪ್ರೀತ್ ಸಿಂಗ್, ಕಾಜಲ್‌ ಅಗರ್ವಾಲ್ ,  ಪ್ರಿಯ ಭವಾನಿ ಶಂಕರ್  ಪ್ರಮುಖ ಪಾತ್ರದಲ್ಲಿ   ಅಭಿನಯಿಸುತ್ತಿದ್ದಾರೆ.  ಅನಿರುದ್ಧ ರವಿಚಂದ್ರನ್ ಸಂಗೀತ  ಚಿತ್ರಕ್ಕಿದೆ.

ಇದೀಗ ಶಂಕರ್ ಮುನಿಸು ಮರೆತು ಇಂಡಿಯನ್‌ 2 ಚಿತ್ರ ತಂಡವನ್ನು ಸೇರಲಿದ್ದಾರೆ ಎಂದು ಹೇಳಲಾಗ್ತಿದೆ. ಶಂಕರ್ ಮತ್ತು ನಿರ್ಮಾಣ ಸಂಸ್ಥೆಯ ನಡುವೆ ಒಮ್ಮತದ ಒಪ್ಪಂದ ಆಗಿದೆ. ಈ ಹೊಸ ಒಪ್ಪಂದದ ಪ್ರಕಾರ ಇಂಡಿಯನ್ 2 ಸಿನಿಮಾ ಡಿಸೆಂಬರ್‌ ತಿಂಗಳಿನಲ್ಲಿ ಚಿತ್ರೀಕರಣ ಆರಂಭ ಆಗಲಿದೆ ಎಂದು ಹೇಳಲಾಗ್ತಿದೆ.

ನಿತಿನ್ ಸಿನಿಮಾದಿಂದ ಕಾಮಿಡಿ ಕಿಂಗ್ ಬ್ರಹ್ಮಾನಂದಂ ಔಟ್…!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd