ಭಾರತೀಯ ವಾಯುಪಡೆ ಸ್ಥಾಪನೆಯಾಗಿ ಇಂದಿಗೆ 89 ವರ್ಷ – ವಾಯುನೆಲೆಯಲ್ಲಿ ಸಂಭ್ರಮಾಚರಣೆ
ಇಂದಿಗೆ ನಮ್ಮ ಹೆಮ್ಮೆಯ ಭಾರತೀಯ ವಾಯು ಪಡೆಯ ಸ್ಥಾಪನೆಯಾಗಿ 89 ವರ್ಷವಾಗಿದ್ದು, ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿರುವ ಹಿಂಡನ್ ವಾಯುನೆಲೆಯಲ್ಲಿ ಸಂಭ್ರಾಮಾಚರಣೆ ಕಾರ್ಯಕ್ರಮ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ವಾಯು ಪಡೆಯ ಮುಖ್ಯಸ್ಥರಾದ ವಿ.ಆರ್.ಚೌಧರಿ ಹಾಗೂ ಮೂರೂ ಶಸ್ತ್ರಾಸ್ತ್ರ ಪಡೆಗಳ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದಾರೆ.ಯುನೈಟೆಡ್ ಕಿಂಗ್ ಡಮ್ ನ ರಾಯಲ್ ಏರ್ ಫೋರ್ಸ್‌ಗೆ ಬೆಂಬಲವಾಗಿ 1932ರ ಅಕ್ಟೋಬರ್ 8ರಂದು ಭಾರತೀಯ ವಾಯು ಪಡೆ ಸ್ಥಾಪನೆಯಾಯಿತು.
ಭಾರತದ ವಾಯು ಪಡೆಯು ವಿಶ್ವದ 4ನೇ ಅತಿ ದೊಡ್ಡ ವಾಯು ಪಡೆಯಾಗಿದೆ. ಆರಂಭದಲ್ಲಿ ದೇಶದ ವಾಯು ಪಡೆಯನ್ನು ರಾಯಲ್ ಇಂಡಿಯನ್ ಏರ್ ಫೋರ್ಸ್ ಎಂದು ಕರೆಯಲಾಗುತ್ತಿತ್ತು. ನಂತರ ಭಾರತ ಗಣ್ಯರಾಜ್ಯವಾದ ನಂತರ ಅಂದ್ರೆ 1950ರಲ್ಲಿ ರಾಯಲ್ ಪದವನ್ನು ಕಿತ್ತುಹಾಕಿ ಹಾಕಲಾಯಿತು. 1971ರ ಯುದ್ಧದ ವೀರ ಯೋಧರಿಗೆ ಇಂದಿನ ವಾಯು ಪಡೆ ದಿನದ ಪರೇಡ್ ಮೂಲಕ ಗೌರವ ಸಲ್ಲಿಸಲಾಗುತ್ತಿದೆ. 1971ರ ಯುದ್ಧದಲ್ಲಿ ಪಾಕಿಸ್ತಾನವನ್ನು ಮಣಿಸಿದ ಭಾರತವು ಬಾಂಗ್ಲಾದೇಶದ ವಿಮೋಚನೆಗೆ ಕಾರಣವಾಯಿತು.
ಅಕ್ಟೋಬರ್ 10ವರೆಗೆ ರಾಜ್ಯದಲ್ಲಿ ಭಾರಿ ಮಳೆ
RSS ಇಲ್ಲಾ ಅಂದಿದ್ರೆ ಈ ದೇಶ ಪಾಕಿಸ್ತಾನ ಆಗಿರ್ತಿತ್ತು : ಈಶ್ವರಪ್ಪ