ವಾಯುಸೇನೆಯಲ್ಲಿ ಮಹಿಳಾ ಅಗ್ನಿವೀರ್ ನೇಮಕಾತಿಗೆ ಸೂಚನೆ…
ಮುಂದಿನ ವರ್ಷದಿಂದ ಮಹಿಳಾ ಅಗ್ನಿವೀರರನ್ನು ಸಹ ನೇಮಕಾತಿ ಮಾಡಿಕೊಳ್ಳಲು ಯೋಜಿಸುತ್ತಿದ್ದೇವೆ ಎಂದು ವಾಯುಪಡೆಯ ಮುಖ್ಯಸ್ಥ, ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಘೋಷಣೆ ಮಾಡಿದ್ದಾರೆ.
ವಾಯುಪಡೆಯ 90 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಚಂಡೀಗಢದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಗ್ನಿಪಥ್ ಯೋಜನೆ ಮೂಲಕ ವಾಯುಪಡೆಗೆ ವಾಯು ಯೋಧರನ್ನು ಸೇರ್ಪಡೆಗೊಳಿಸುವುದು ನಮಗೆಲ್ಲರಿಗೂ ಸವಾಲಾಗಿದೆ ಎಂದು ಹೇಳಿದರು. ಆದರೆ ಅದಕ್ಕಿಂತ ಮುಖ್ಯವಾಗಿ, ಭಾರತದ ಯುವಕರ ಸಾಮರ್ಥ್ಯವನ್ನು ಬಳಸಿಕೊಳ್ಳಲು ಮತ್ತು ಅದನ್ನು ರಾಷ್ಟ್ರದ ಸೇವೆಯಲ್ಲಿ ತೊಡಗಿಸಿಕೊಳ್ಳಲು ಇದು ನಮಗೆ ಒಂದು ಅವಕಾಶವಾಗಿದೆ ಎಂದು ತಿಳಿಸಿದರು.
ಇಂದು ಭಾರತೀಯ ವಾಯುಪಡೆಯ 90ನೇ ವಾರ್ಷಿಕೋತ್ಸವ. ಶತ್ರುಗಳಿಂದ ದೇಶವನ್ನು ರಕ್ಷಿಸಲು ಭಾರತೀಯ ವಾಯುಪಡೆಯು ಅನೇಕ ಸುವರ್ಣ ಯುದ್ಧಗಳನ್ನು ಮಾಡಿದೆ. 1962, 1965 ಮತ್ತು 1971 ರಲ್ಲಿ ವಾಯುಪಡೆಯ ಪರಾಕ್ರಮವನ್ನ ಹೋಲಿಸಲಾಗದು ಎಂದು ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಅವರು ಶನಿವಾರ ಚಂಡೀಗಢದಲ್ಲಿ ವಾಯುಪಡೆ ದಿನದಂದು ಮಾತನಾಡಿದರು.
ಮಹಿಳಾ ಅಗ್ನಿವೀರ್ (Indian Air Force Day)
ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆಯಲ್ಲಿ ನಾವು ಬದ್ಧತೆಯಿಂದ ಮುನ್ನಡೆಯುತ್ತಿದ್ದೇವೆ ಎಂದು ವಾಯುಪಡೆ ಮುಖ್ಯಸ್ಥರು ಹೇಳಿದರು. ಮುಂದಿನ ವರ್ಷದ ವೇಳೆಗೆ ಮಹಿಳಾ ಅಗ್ನಿವೀರ್‌ಗಳು ವಾಯುಪಡೆಗೆ ಸೇರ್ಪಡೆಯಾಗಲಿದ್ದಾರೆ. ಆದರೆ ಅಗ್ನಿಪಥ ಯೋಜನೆಯಡಿ ವಾಯು ಯೋಧರನ್ನು ನೇಮಕ ಮಾಡಿಕೊಳ್ಳುವುದು ಎಲ್ಲರಿಗೂ ಸವಾಲಾಗಿದೆ ಎಂದರು.
Indian Air Force Day: Thinking about the recruitment of women Agniveer in the Air Force…