Indian Army : J&K ದೋಡಾದಲ್ಲಿ100 ಅಡಿ ಎತ್ತರದ ರಾಷ್ಟ್ರಧ್ವಜ ಸ್ಥಾಪಿಸಿದ ಸೇನೆ…
ಆರ್ಟಿಕಲ್ 370 ತೆಗೆದ ನಂತರ ಕಾಶ್ಮೀರದ ಪರಿಸ್ಥಿತಿ ನಿಧಾನವಾಗಿ ಬದಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಕ್ರೀಡಾಂಗಣದಲ್ಲಿ 100 ಅಡಿ ಎತ್ತರದ ರಾಷ್ಟ್ರಧ್ವಜವನ್ನ ಸೇನೆ ಗುರುವಾರ ಅನಾವರಣಗೊಳಿಸಿದೆ. ಇದು ಚೆನಾಬ್ ಕಣಿವೆ ಪ್ರದೇಶದಲ್ಲಿ ಸೇನೆಯು ಹಾರಿಸಿದ ಎರಡನೇ ಹೈಮಾಸ್ಟ್ ಧ್ವಜವಾಗಿದೆ. ಕಳೆದ ವರ್ಷ ಜುಲೈನಲ್ಲಿ ಕಿಶ್ತ್ವಾರ್‌ನಲ್ಲಿ 100 ಅಡಿ ಎತ್ತರದ ಧ್ವಜವನ್ನು ಸ್ಥಾಪಿಸಲಾಗಿತ್ತು.
ಸೇನೆಯ ಡೆಲ್ಟಾ ಪಡೆಯ ಜನರಲ್ ಆಫೀಸರ್ ಕಮಾಂಡಿಂಗ್ ಮೇಜರ್ ಜನರಲ್ ಅಜಯ್ ಕುಮಾರ್ ಅವರು ರಾಷ್ಟ್ರೀಯ ರೈಫಲ್ಸ್ ಸೆಕ್ಟರ್ 9 ಕಮಾಂಡರ್ ಬ್ರಿಗೇಡಿಯರ್ ಸಮೀರ್ ಕೆ ಪಲಾಂಡೆ, ದೋಡಾ ಡೆಪ್ಯೂಟಿ ಕಮಿಷನರ್ ವಿಶೇಷ್ ಪಾಲ್ ಮಹಾಜನ್ ಮತ್ತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಬ್ದುಲ್ ಖಯೂಮ್ ಅವರೊಂದಿಗೆ ಧ್ವಜಾರೋಹಣ ಮಾಡಿದರು.
“ದೇಶದ ಏಕತೆ ಮತ್ತು ಸಮಗ್ರತೆಯನ್ನ ಕಾಪಾಡುವ ಜೊತೆಗೆ ಅಂತಿಮ ತ್ಯಾಗ ಮಾಡಿದ ಚೆನಾಬ್ ಕಣಿವೆ ಪ್ರದೇಶದ ಅಸಂಖ್ಯಾತ ಸೈನಿಕರಿಗೆ ಅತ್ಯಂತ ಎತ್ತರದ ಧ್ವಜವು ಗೌರವವಾಗಿದೆ” ಎಂದು ಮೇಜರ್ ಕುಮಾರ್ ಅವರು ತಿಳಿಸಿದ್ದಾರೆ. “ದೂರದಿಂದ ನೋಡಬಹುದಾದ ರಾಷ್ಟ್ರಧ್ವಜ ಪ್ರತಿಯೊಬ್ಬ ನಾಗರಿಕನಿಗೂ ದೇಶದ ಬಗ್ಗೆ ಹೆಮ್ಮೆಯ ಭಾವನೆ ಮೂಡಿಸುತ್ತದೆ” ಎಂದು ಅವರು ಹೇಳಿದರು.
Indian Army: The army installed a 100 feet high national flag in J&K Doda…