Indian Boxing ಭಾರತ ಬಾಕ್ಸಿಂಗ್ ತಂಡಕ್ಕೆ ಕನ್ನಡಿಗ ಕುಟ್ಟಪ್ಪ ಕೋಚ್
ಭಾರತ ಪುರುಷರ ಬಾಕ್ಸಿಂಗ್ ತಂಡದ ಮುಖ್ಯ ಕೋಚ್ ಆಗಿ ದ್ರೋಭಾಚಾರ್ಯ ಪ್ರಶಸ್ತಿ ವಿಜೇತ ಕನ್ನಡಿಗ ಸಿ.ಎ.ಕುಟ್ಟಪ್ಪ ಆಯ್ಕೆಯಾಗಿದ್ದಾರೆ.
ತಂಡದ ಕೋಚ್ ಆಗಿ ಇದು ಅವರ 2ನೇ ಅವಧಿಯಾಗಿದೆ. 2018ರಿಂದ 2021ರವರೆಗೂ ಕೋಚ್ ಆಗಿದ್ದ ಕುಟ್ಟಪ್ಪ ಅವರನ್ನು ಉನ್ನತ ಪ್ರದರ್ಶನ ನಿರ್ದೇಶಕ ಬೆನಾರ್ಡ್ ಡುನ್ನೆ ಅವರ ಸಲಹೆ ಮೇರೆಗೆ ಭಾರತೀಯ ಬಾಕ್ಸಿಂಗ್ ಫೆಡರೇಶನ್ (ಬಿಎಫ್ಐ) ಮತ್ತೊಮ್ಮೆ ಕೋಚ್ ಹುದ್ದೆಗೆ ನೇಮಕ ಮಾಡಿದೆ.
2021ರಿಂದ ಪ್ರಧಾನ ಕೋಚ್ ಆಘಿದ್ದ ನರೇಂದ್ರ ರಾಣಾ ಅವರ ಸ್ಥಾನವನ್ನು ಕುಟ್ಟಪ್ಪ ತುಂಬಲಿದ್ದಾರೆ. ಮುಂದಿನ 2 ವರ್ಷಗಳಲ್ಲಿ ವಿಶ್ವ ಚಾಂಪಿಯನ್ ಶಿಪ್, ಏಷ್ಯನ್ ಗೇಮ್ಸ್ ಹಾಗೂ ಒಲಿಂಪಿಕ್ಸ್ ಕೂಟಗಳಲ್ಲಿ ಕುಟ್ಟಪ್ಪ 2024ರ ಪ್ಯಾರಿಸ್ ಒಲಿಂಒಪಿಕ್ಸ್ ವರೆಗೂ ಕೋಚ್ ಹುದ್ದೆಯಲ್ಲಿರುವ ನಿರೀಕ್ಷೆಯಲ್ಲಿದ್ದಾರೆ.
ಫೆಡರೇಶ ನ್ ಆಂತರಿಕಾ ಸಭೆ ನಡೆಸಿತ್ತು ಮತ್ತು ಈ ನಿರ್ಧಾರವನ್ನು ನಿರ್ದೇಶಕರ ಸಲಹೆ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ.ಮುಖ್ಯ ಕೋಚ್ಗೆ ಖಾಯಂ ಸ್ಥಾನವಿಲ್ಲ ಎಂದು ಬಾಕ್ಸಿಂಗ್ ಫೆಡರೇಶನ್ ನ ಕಾರ್ಯದರ್ಶಿ ಹೇಮಂತಾ ಕಾಲಿತಾ ಹೇಳಿದ್ದಾರೆ.
Indian Boxing , karntaka’s kuttappa is coach