ಮಂಗಳೂರು : ದೇಶವು ಕೊರೊನಾ ಹೊಡೆತಕ್ಕೆ ಲಾಕ್ ಡೌನ್ ಆಗಿತ್ತು. ಇದರಿಂದಾಗಿ ಅನೇಕ ಕಾರ್ಮಿಕರು ಸಂಕಷ್ಟ ಎದುರಿಸಿದ್ದಾರೆ. ಬೇರೆ ಬೇರೆ ರಾಜ್ಯಗಳಿಗೆ ಕೆಲಸಕ್ಕೆ ಎಂದು ಹೋಗಿ ಅಲ್ಲೇ ಲಾಕ್ ಆಗಿದ್ದರು. ಮಂಗಳೂರಿನ ಕೆಲ ಕಾರ್ಮಿಕರು ಸಾಗಾರದಾಚೆಗಿನ ಪ್ರದೇಶಗಳಲ್ಲಿ ಲಾಕ್ ಆಗಿದ್ದರು. ಇದೀಗ ಕಾರ್ಮಿಕರು ಎರಡೂವರೆ ತಿಂಗಳ ಬಳಿಕ ತಾಯಿ ನಾಡಿಗೆ ಸೇರಿದ್ದಾರೆ.
ಲಕ್ಷದ್ವೀಪದ ಕಿಲ್ತಾನ್ , ಕವರತ್ತಿ ,ಅಗಟ್ಟಿ ದ್ವೀಪಗಳಲ್ಲಿ ವ್ಯಾಪಾರ, ಟೈಲ್ಸ್ ಕೆಲಸ,ಗುಜುರಿ ಸಂಗ್ರಹ ಸೇರಿದಂತೆ ವಿವಿಧ ಕೆಲಸಗಳಿಗೆ ಹೋಗಿದ್ದ ಕಾರ್ಮಿಕರು ಲಾಕ್ ಡೌನ್ ಆಗಿರುವ ಕಾರಣಕ್ಕೆ ದ್ವೀಪಗಳಲ್ಲಿ ಬಂಧಿಯಾಗಿದ್ದರು.
ಇಂಡಿಯನ್ ಕೋಸ್ಟ್ ಗಾರ್ಡ್ ಸಹಾಯದಿಂದ ಕಾರ್ಯಾಚರಣೆ ನಡೆಸಿ ಮೂವರು ಮಹಿಳೆಯರು ಸೇರಿದಂತೆ 19 ಮಂದಿ ಕಾರ್ಮಿಕರನ್ನು ಮಂಗಳೂರಿಗೆ ಕರೆ ತರಲಾಗಿದೆ. “ಅಮಿನ್ ದಿವಿ” ಹೆಸರಿನ ನೌಕೆಯಲ್ಲಿ ಕಾರ್ಮಿಕರು ಮಂಗಳೂರಿಗೆ ಬಂದಿದ್ದಾರೆ. ಬಂದ ಎಲ್ಲಾ ಕಾರ್ಮಿಕರನ್ನು ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.








