ನೌಕಾಪಡೆಯ ನೇವಲ್ ಡಾಕ್ಯಾರ್ಡ್ ನಿಂದ 338 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಅಹ್ವಾನ
ಭಾರತೀಯ ನೌಕಾಪಡೆಯ ನೇವಲ್ ಡಾಕ್ಯಾರ್ಡ್ ಮುಂಬೈ ಅಡಿಯಲ್ಲಿ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಐಟಿಐ ಆದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. 338 ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಅಧಿಕೃತ ವೆಬ್ಸೈಟ್: @dasapprenticembi.recttindia.in ಮೂಲಕ ಅರ್ಹ ಮತ್ತು ಸೂಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 11 ಆಗಿದೆ.
ಹುದ್ದೆಗಳ ವಿವರ – ಎಲೆಕ್ಟ್ರಿಷಿಯನ್, ಎಲೆಕ್ಟ್ರೋಪ್ಲೇಟರ್, ಮೆರೈನ್ ಇಂಜಿನ್ ಫಿಟ್ಟರ್, ಫೌಂಡ್ರಿ ಮ್ಯಾನ್, ಪ್ಯಾಟರ್ನ್ ಮೇಕರ್, ಮೆಕ್ಯಾನಿಕ್ ಡೀಸೆಲ್, ಇನ್ಸ್ಟ್ರುಮೆಂಟ್ ಮೆಕ್ಯಾನಿಕ್, ಮೆಷಿನಿಸ್ಟ್, ಮೆಕ್ಯಾನಿಕ್ ಮೆಷಿನ್ ಟೂಲ್ ಮೇಂಟೆನೆನ್ಸ್ (ಜಿನೆನ್ಸ್, ಪೇಂಟರ್) ಹುದ್ದೆಗಳಿಗೆ ಅರ್ಹರಾಗಿರುತ್ತಾರೆ. ಮೆಟಲ್ ವರ್ಕರ್, ಪೈಪ್ ಫಿಟ್ಟರ್, ಮೆಕ್ಯಾನಿಕ್ ರೆಫ್ & ಎಸಿ, ಟೈಲರ್ (ಜನರಲ್), ವೆಲ್ಡರ್ (ಗ್ಯಾಸ್ ಮತ್ತು ಎಲೆಕ್ಟ್ರಿಕ್), ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಶಿಪ್ ರೈಟ್ ವುಡ್, ಫಿಟ್ಟರ್, ಮೇಸನ್ ಬಿಲ್ಡಿಂಗ್ ಕನ್ಸ್ಟ್ರಕ್ಟರ್, ಐ & ಸಿಟಿಎಸ್ಎಮ್, ಶಿಪ್ ರೈಟ್ ಸ್ಟೀಲ್, ರಿಗ್ಗರ್, ಫೋರ್ಜರ್ ಮತ್ತು ಹೀಟ್ ಟ್ರೀಟರ್. ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಹತೆ: ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಯೂ ಅಂಗೀಕೃತ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ 10ನೇ ತರಗತಿ ಜೊತೆಗೆ ಐಟಿಐ ಪದವಿಯನ್ನು ಶೇ 60ರಷ್ಟು ಫಲಿತಾಂಶದಲ್ಲಿ ಪಾಸ್ ಆಗಿರಬೇಕು.
ವಯೋಮಿತಿ: ಭಾರತೀಯ ನೌಕ ಸೇನೆಯ ಅನುಸಾರ ವಯೋಮಿತಿ ಹೊಂದಿರತಕ್ಕದ್ದು.
ಅಯ್ಕೆ ವಿಧಾನ
ಪರೀಕ್ಷೆ ಮತ್ತು ಸಂದರ್ಶನ
ಪ್ರಮುಖ ದಿನಾಂಕಗಳು
ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ: ಜೂನ್ 21, 2022
ಆನ್ಲೈನ್ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ: ಜುಲೈ 11, 2022
ಅಧಿಕೃತ ವೆಬ್ಸೈಟ್: @dasapprenticembi.recttindia.in
ಭಾರತೀಯ ನೌಕಾಪಡೆಯ ಅಪ್ರೆಂಟಿಸ್ ನೇಮಕಾತಿಗೆ ಅಪ್ಲೆ ಮಾಡುವ ವಿಧಾನ
ಅಧಿಕೃತ ವೆಬ್ಸೈಟ್: @dasapprenticembi.recttindia.in ಗೆ ತಲುಪಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು
ಹಂತ 1: ಲಾಗಿನ್ ಐಡಿ ಮತ್ತು ಪಾಸ್ವರ್ಡ್ ರಚಿಸಲು ಆನ್ಲೈನ್ನಲ್ಲಿ ನೋಂದಾಯಿಸಿ
ಹಂತ 2: ಹಂತ 1 ರಲ್ಲಿ ರಚಿಸಲಾದ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಬಳಸಿ ಲಾಗಿನ್ ಮಾಡಿ
ಹಂತ 3: ವಿವರವಾದ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಫೋಟೋ ಮತ್ತು ಸಹಿ ಸೇರಿದಂತೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಿ ಮತ್ತು ಅರ್ಜಿಯನ್ನು ಸಲ್ಲಿಸಿ