ನೌಕಾಪಡೆಯ ನೇವಲ್ ಡಾಕ್‌ಯಾರ್ಡ್ ನಿಂದ 338 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಅಹ್ವಾನ

1 min read
Saakshatv jobs Indian Navy SSC Officer Recruitment

ನೌಕಾಪಡೆಯ ನೇವಲ್ ಡಾಕ್‌ಯಾರ್ಡ್ ನಿಂದ 338 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಅಹ್ವಾನ

ಭಾರತೀಯ ನೌಕಾಪಡೆಯ ನೇವಲ್ ಡಾಕ್‌ಯಾರ್ಡ್  ಮುಂಬೈ ಅಡಿಯಲ್ಲಿ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಐಟಿಐ ಆದ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. 338 ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಅಧಿಕೃತ ವೆಬ್​​ಸೈಟ್: @dasapprenticembi.recttindia.in ಮೂಲಕ ಅರ್ಹ ಮತ್ತು ಸೂಕ್ತ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ​ 11 ಆಗಿದೆ.

 

ಹುದ್ದೆಗಳ ವಿವರ – ಎಲೆಕ್ಟ್ರಿಷಿಯನ್, ಎಲೆಕ್ಟ್ರೋಪ್ಲೇಟರ್, ಮೆರೈನ್ ಇಂಜಿನ್ ಫಿಟ್ಟರ್, ಫೌಂಡ್ರಿ ಮ್ಯಾನ್, ಪ್ಯಾಟರ್ನ್ ಮೇಕರ್, ಮೆಕ್ಯಾನಿಕ್ ಡೀಸೆಲ್, ಇನ್‌ಸ್ಟ್ರುಮೆಂಟ್ ಮೆಕ್ಯಾನಿಕ್, ಮೆಷಿನಿಸ್ಟ್, ಮೆಕ್ಯಾನಿಕ್ ಮೆಷಿನ್ ಟೂಲ್ ಮೇಂಟೆನೆನ್ಸ್ (ಜಿನೆನ್ಸ್, ಪೇಂಟರ್) ಹುದ್ದೆಗಳಿಗೆ ಅರ್ಹರಾಗಿರುತ್ತಾರೆ. ಮೆಟಲ್ ವರ್ಕರ್, ಪೈಪ್ ಫಿಟ್ಟರ್, ಮೆಕ್ಯಾನಿಕ್ ರೆಫ್ & ಎಸಿ, ಟೈಲರ್ (ಜನರಲ್), ವೆಲ್ಡರ್ (ಗ್ಯಾಸ್ ಮತ್ತು ಎಲೆಕ್ಟ್ರಿಕ್), ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಶಿಪ್ ರೈಟ್ ವುಡ್, ಫಿಟ್ಟರ್, ಮೇಸನ್ ಬಿಲ್ಡಿಂಗ್ ಕನ್ಸ್ಟ್ರಕ್ಟರ್, ಐ & ಸಿಟಿಎಸ್ಎಮ್, ಶಿಪ್ ರೈಟ್ ಸ್ಟೀಲ್, ರಿಗ್ಗರ್, ಫೋರ್ಜರ್ ಮತ್ತು ಹೀಟ್ ಟ್ರೀಟರ್. ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಹತೆ: ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಯೂ ಅಂಗೀಕೃತ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ 10ನೇ ತರಗತಿ ಜೊತೆಗೆ ಐಟಿಐ ಪದವಿಯನ್ನು ಶೇ 60ರಷ್ಟು ಫಲಿತಾಂಶದಲ್ಲಿ ಪಾಸ್​ ಆಗಿರಬೇಕು.

ವಯೋಮಿತಿ: ಭಾರತೀಯ ನೌಕ ಸೇನೆಯ ಅನುಸಾರ ವಯೋಮಿತಿ ಹೊಂದಿರತಕ್ಕದ್ದು.

ಅಯ್ಕೆ ವಿಧಾನ
ಪರೀಕ್ಷೆ ಮತ್ತು ಸಂದರ್ಶನ

ಪ್ರಮುಖ ದಿನಾಂಕಗಳು
ಆನ್​ಲೈನ್​ ಅರ್ಜಿ ಸಲ್ಲಿಕೆ ಪ್ರಾರಂಭ: ಜೂನ್​ 21, 2022
ಆನ್​ಲೈನ್ ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ: ಜುಲೈ 11, 2022

ಅಧಿಕೃತ ವೆಬ್​​ಸೈಟ್: @dasapprenticembi.recttindia.in

ಭಾರತೀಯ ನೌಕಾಪಡೆಯ ಅಪ್ರೆಂಟಿಸ್ ನೇಮಕಾತಿಗೆ ಅಪ್ಲೆ ಮಾಡುವ ವಿಧಾನ

ಅಧಿಕೃತ ವೆಬ್​​ಸೈಟ್: @dasapprenticembi.recttindia.in ಗೆ ತಲುಪಿ  ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು

ಹಂತ 1: ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ರಚಿಸಲು ಆನ್‌ಲೈನ್‌ನಲ್ಲಿ ನೋಂದಾಯಿಸಿ

ಹಂತ 2: ಹಂತ 1 ರಲ್ಲಿ ರಚಿಸಲಾದ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಮಾಡಿ

ಹಂತ 3: ವಿವರವಾದ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಫೋಟೋ ಮತ್ತು ಸಹಿ ಸೇರಿದಂತೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಅರ್ಜಿಯನ್ನು ಸಲ್ಲಿಸಿ

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd