ಭಾರತೀಯ ಸುದ್ದಿ ಮಾಧ್ಯಮಗಳು ಫ್ಯಾಸಿಸ್ಟ್ ಹಿತಾಸಕ್ತಿಗಳ ಹಿಡಿತಕ್ಕೆ ಸಿಲುಕಿವೆ – ರಾಹುಲ್ ಗಾಂಧಿ
ಹೊಸದಿಲ್ಲಿ, ಜುಲೈ 14: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ದೇಶ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವಿಡಿಯೋ ಸರಣಿಯನ್ನು ಪ್ರಾರಂಭಿಸುವುದಾಗಿ ಹೇಳಿದ್ದಾರೆ. “ನಮ್ಮ ಪ್ರಸ್ತುತ ವ್ಯವಹಾರಗಳು, ಇತಿಹಾಸ ಮತ್ತು ಬಿಕ್ಕಟ್ಟಿನ ಬಗ್ಗೆ ನನ್ನ ವಿಚಾರಧಾರೆಗಳನ್ನು ಸ್ಪಷ್ಟವಾಗಿ ವಿಡಿಯೋದ ಮೂಲಕ ಹೇಳುತ್ತೇನೆ ಎಂದು ಗಾಂಧಿ ಟ್ವೀಟ್ ಮಾಡಿದ್ದಾರೆ, ಅವರು ಅದು ಮಂಗಳವಾರದಿಂದ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ.
ನಂತರದ ಟ್ವೀಟ್‌ನಲ್ಲಿ, ರಾಹುಲ್ ಗಾಂಧಿಯವರು ಭಾರತೀಯ ಸುದ್ದಿ ಮಾಧ್ಯಮಗಳಲ್ಲಿ ಬಹುಪಾಲು ಫ್ಯಾಸಿಸ್ಟ್ ಹಿತಾಸಕ್ತಿಗಳ ಹಿಡಿತಕ್ಕೆ ಸಿಲುಕಿವೆ ಎಂದು ಹೇಳಿದ್ದು, ಟೆಲಿವಿಷನ್ ಚಾನೆಲ್‌ಗಳು, ವಾಟ್ಸಾಪ್ ಫಾರ್ವರ್ಡ್ಗಳು ಮತ್ತು ಸುಳ್ಳು ಸುದ್ದಿಗಳಿಂದ ದ್ವೇಷ ತುಂಬಿದ ನಿರೂಪಣೆ ಹರಿದಾಡುತ್ತಿದೆ. ಸುಳ್ಳಿನ ಈ ನಿರೂಪಣೆಯು ಭಾರತವನ್ನು ಚೂರು ಮಾಡುತ‌್ತಿವೆ ಎಂದು ಹೇಳಿದರು.








