ವಾಷಿಂಗ್ಟನ್: ಭಾರತೀಯ ಮೂಲದ ಯುವಕ ಅಮೆರಿಕದಲ್ಲಿ ಹತ್ಯೆಯಾಗಿರುವ ಘಟನೆ ನಡೆದಿದೆ.
ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಗೆ ಭಾರತೀಯ ಮೂಲದ ಯುವಕ ಸಾವನ್ನಪ್ಪಿದ್ದಾನೆ. ಅಮೆರಿಕದ (America) ವಾಷಿಂಗ್ಟನ್ ಡಿಸಿಯ (Washington DC) ಗ್ಯಾಸ್ ಸ್ಟೇಷನ್ ನಲ್ಲಿ ಈ ಘಟನೆ ನಡೆದಿದೆ.
ರವಿತೇಜ (26) ಹತ್ಯೆಯಾಗಿರುವ ಯುವಕ. ರವಿತೇಜ ಹೈದರಾಬಾದ್ ನ (Hyderabad) ಆರ್.ಕೆ. ಪುರಂ ಗ್ರೀನ್ ಹಿಲ್ಸ್ ಕಾಲೋನಿಯ ನಿವಾಸಿ ಎನ್ನಲಾಗಿದೆ. ಸ್ನಾತಕೋತ್ತರ ಪದವಿ ಅಧ್ಯಯನಕ್ಕಾಗಿ 2022ರಲ್ಲೇ ಈ ಯುವಕ ಅಮೆರಿಕಕ್ಕೆ ತೆರಳಿದ್ದ. ಸದ್ಯ ಶಿಕ್ಷಣ ಪೂರ್ಣ ಮುಗಿದ್ದು, ಅಲ್ಲೇ ಉದ್ಯೋಗ ಅರಿಸುತ್ತಿದ್ದ ಎನ್ನಲಾಗಿದೆ.
ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಹತ್ಯೆ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿತ್ತು.