ಭಾರತೀಯ ಷೇರುಪೇಟೆಯಲ್ಲಿ ಮತ್ತಷ್ಟು ಕುಸಿತ: ಸೆನ್ಸೆಕ್ಸ್ ನಲ್ಲಿ 500 ಪಾಯಿಂಟ್ಸ್ ಇಳಿಕೆ
ನವದೆಹಲಿ: ಭಾರತೀಯ ಷೇರುಪೇಟೆಯಲ್ಲಿ ಗುರುವಾರ ದಿನದ ವಹಿವಾಟಿನಲ್ಲಿ ಮತ್ತಷ್ಟು ಕುಸಿತ ಕಂಡಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಬೆಳಿಗ್ಗೆ 10.50ರ ಸುಮಾರಿಗೆ 478 ಪಾಯಿಂಟ್ಸ್ಗಳು ಇಳಿಕೆಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 133 ಪಾಯಿಂಟ್ಸ್ ಇಳಿಕೆಗೊಂಡಿದೆ.
ಬಿಎಸ್ಇ ಸೂಚ್ಯಂಕ ಸೆನ್ಸೆಕ್ಸ್ಶೇಕಡಾ 1.01ರಷ್ಟು ಇಳಿಕೆಗೊಂಡು 46,955 ಪಾಯಿಂಟ್ಸಗಳನ್ನು ತಲುಪಿದೆ. ಎನ್ ಎಸ್ ಇ ಸೂಚ್ಯಂಕ ನಿಫ್ಟಿ ಶೇಕಡಾ 1ರಷ್ಟು ಅಥವಾ 133 ಪಾಯಿಂಟ್ಸ್ ಕುಸಿದು 13,843 ಪಾಯಿಂಟ್ಸ್ಗೆ ತಲುಪಿದೆ.
ಭಾರತ ವಾಯುನೆಲೆಗೆ ಬಂದು ಲ್ಯಾಂಡ್ ಆದ 3 ರಫೇಲ್ ಯುದ್ಧ ವಿಮಾನಗಳು..!
ಇಂದು ಆರಂಭಿಕ ವಹಿವಾಟಿನಲ್ಲಿ 1,178 ಷೇರುಗಳು ಏರಿಕೆಗೊಂಡಿವೆ, 1,113 ಷೇರುಗಳು ಕುಸಿತ ಕಂಡಿದ್ದು 101 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಬ್ಯಾಂಕಿಂಗ್, ಫಾರ್ಮಾ ಷೇರುಗಳು ಮತ್ತು ಐಟಿ ಷೇರುಗಳು ಶೇಕಡಾ 1.2ರಷ್ಟು ಇಳಿಕೆಗೊಂಡಿದ್ದು, ಆಟೊಮೊಬೈಲ್ ಷೇರುಗಳು ಶೇಕಡಾ 0.8ರಷ್ಟು ಇಳಿಕೆಗೊಂಡಿವೆ.
ಲಾಲಾ ಲಜಪತ ರಾಯ್ ಜನ್ಮ ದಿನಾಚರಣೆ – ಪಂಜಾಬ್ ಸಿಂಹದ ಬಗ್ಗೆ ಹೆಚ್ಚು ತಿಳಿದಿಲ್ಲದ ಸಂಗತಿಗಳು
ಟೆಕ್ ಮಹೀಂದ್ರಾ ಶೇಕಡಾ 2.8ರಷ್ಟು ಇಳಿಕೆಗೊಂಡು 969.20 ರೂಪಾಯಿಗೆ ತಲುಪಿದೆ. ವಿಪ್ರೋ ಷೇರುಗಳು ಶೇಕಡಾ 1.9ರಷ್ಟು ಇಳಿದು 437.75 ರೂಪಾಯಿಗೆ ಇಳಿಕೆಯಾಗಿದೆ. ಇದರ ನಡುವೆ ಯುಪಿಎಲ್, ಸನ್ಫಾರ್ಮಾ, ಟಾಟಾ ಮೋಟಾರ್ಸ್, ಹಿಂದೂಸ್ತಾನ್ ಯುನಿಲಿವರ್ , ಆಯಕ್ಸಿಸ್ ಬ್ಯಾಂಕ್ ಷೇರುಗಳು ಏರಿಕೆ ದಾಖಲಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel