T20 | ಸೌತ್ ಆಫ್ರಿಕಾ ಟಿ 20 ಸಿರೀಸ್.. ಭಾರತ ತಂಡ ಪ್ರಕಟಕ್ಕೆ ಮುಹೂರ್ತ ಫಿಕ್ಸ್
ಐಪಿಎಲ್ 2022 ರ ಸೀಸನ್ ಮುಗಿದ ತಕ್ಷಣ ಟೀಂ ಇಂಡಿಯಾ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ 20 ಪಂದ್ಯಗಳನ್ನಾಡಲಿದೆ.
ಈ ಸಿರೀಸ್ ಗೆ ಟೀಂ ಇಂಡಿಯಾ ಪ್ರಕಟಕ್ಕೆ ದಿನಾಂಕ ನಿಗದಿಯಾಗಿದೆ. ಈಗಾಗಲೇ ಸರಣಿಗೆ ತಂಡದ ಆಯ್ಕೆ ಕುರಿತು ಕಸರತ್ತು ಆರಂಭಿಸಿರುವ ಆಯ್ಕೆ ಸಮಿತಿ ಇದೇ ತಿಂಗಳ 26ರಂದು ಸಂಭವನೀಯರ ಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆ ಇದೆ.
ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿ ಮೇ 23ರಂದು ಸಭೆ ಸೇರಿ ಆಟಗಾರರ ಆಯ್ಕೆ ಕುರಿತು ಚರ್ಚೆ ನಡೆಸಲಿದೆ. ಈ ಸಭೆಯಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಕೂಡ ಭಾಗವಹಿಸಲಿದ್ದಾರೆ.
ಅವರ ಅಭಿಪ್ರಾಯವನ್ನು ತೆಗೆದುಕೊಂಡ ನಂತರ ಆಟಗಾರರ ಪಟ್ಟಿಯ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ.

ತವರಿನಲ್ಲಿ ಸರಣಿ ನಡೆಯಲಿರುವುದರಿಂದ 15 ಆಟಗಾರರ ಹೆಸರನ್ನು ಮಾತ್ರ ಪರಿಗಣಿಸಲಾಗುತ್ತಿದೆಯಂತೆ.
ಯಾರಿಗೆ ತಂಡದಲ್ಲಿ ಸ್ಥಾನ ನೀಡಲಿದ್ದಾರೆ ಎಂಬುದನ್ನು ನೋಡಿದರೆ.. ಐಪಿಎಲ್‌ಗೂ ಮುನ್ನ ಶ್ರೀಲಂಕಾ ವಿರುದ್ಧ ಆಡಿದ ತಂಡ ಬಹುತೇಕ ಖಚಿತವಾದಂತಿದೆ.
ಐಪಿಎಲ್ 2022 ರ ಹೊಸ ತಾರೆಯರಾದ ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಉಮ್ರಾನ್ ಮಲಿಕ್, ತಿಲಕ್ ವರ್ಮಾ, ರಾಹುಲ್ ತೆವಾಟಿಯಾ ಮತ್ತು ಶಿವಂ ದುಬೆ ಅವರ ಹೆಸರನ್ನು ಪರಿಗಣಿಸುವ ಸಾಧ್ಯತೆಯಿದೆ. ಮತ್ತೊಂದೆಡೆ ವಿರಾಟ್ ಕೊಹ್ಲಿಗೆ ಕೋಕ್ ನೀಡುವ ಸಾಧ್ಯತೆಗಳಿವೆ.
ಭಾರತ ಮತ್ತು ಸಫಾರಿ ನಡುವಿನ ಐದು ಪಂದ್ಯಗಳ ಟಿ20 ಸರಣಿಯು ಜೂನ್ 9-20 ರವರೆಗೆ ನಡೆಯಲಿದೆ.
– ಮೊದಲ ಟಿ20: ಜೂನ್ 9 (ದೆಹಲಿ)
– ಎರಡನೇ T20: ಜೂನ್ 12 (ಕಟಕ್)
– ಮೂರನೇ T20: ಜೂನ್ 14 (ವೈಜಾಗ್)
– ನಾಲ್ಕನೇ T20: ಜೂನ್ 17 (ರಾಜ್ಕೋಟ್)
– ಐದನೇ ಟಿ20: ಜೂನ್ 19 (ಬೆಂಗಳೂರು)
indian-squad-sa-t20-series-be-announced-may-26








