ಏಷ್ಯನ್ ಗೇಮ್ಸ್ನ ಪುರುಷರ ಹಾಕಿಯಲ್ಲಿ ಬಾರತ ತಂಡವು ಬಾಂಗ್ಲಾದೇಶ ವಿರುದ್ಧ ಭರ್ಜರಿ ಪ್ರದರ್ಶನ ತೋರಿದೆ.
ಈ ಮೂಲಕ ಭಾರತ ತಂಡ ಸೆಮಿಪೈನಲ್ ಗೆ ಲಗ್ಗೆಯಿಟ್ಟಿದೆ. ಆರಂಭದಿಂದಲೇ ಏಕಪಕ್ಷೀಯವಾಗಿ ಸಾಗಿದ್ದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮುನ್ನಡೆ ಸಾಧಿಸುತ್ತ ಸಾಗಿದರು. ನಾಯಕ ಹರ್ಮನ್ಪ್ರೀತ್ ಸಿಂಗ್ 2ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿದರೆ, 4ನೇ ನಿಮಿಷದಲ್ಲಿ ಮತ್ತೊಂದು ಗೋಲು ತಂದರು. ಆರಂಭದಲ್ಲೇ ಭಾರತ ತಂಡ ಬಾರಿಸಿದ ಗೋಲುಗಳಿಂದ ಬಾಂಗ್ಲಾದೇಶ್ ಆಟಗಾರರು ಒತ್ತಡಕ್ಕೊಳಗಾದರು.
ಇದರ ಲಾಭ ಮಾಡಿಕೊಂಡ ಮನ್ದೀಪ್ ಸಿಂಗ್ 18ನೇ ನಿಮಿಷದಲ್ಲಿ 3ನೇ ಯಶಸ್ಸು ತಂದುಕೊಟ್ಟರು. ನಂತರ 23ನೇ ನಿಮಿಷದಲ್ಲಿ ಸಿಕ್ಕ ಅತ್ಯುತ್ತಮ ಪಾಸ್ ಅನ್ನು ಗೋಲ್ ಆಗಿ ಪರಿವರ್ತಿಸುವಲ್ಲಿ ಲಲಿತ್ ಕುಮಾರ್ ಉಪಾಧ್ಯಾಯ ಯಶಸ್ವಿಯಾದರು.
4-0 ಅಂತರ ಕಂಡುಕೊಂಡಿದ್ದ ಸಮಯದಲ್ಲಿ ಮನದೀಪ್ ಸಿಂಗ್ 24ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿದರು. ಗೆಲುವು ಖಚಿತವಾಗುತ್ತಿದ್ದಂತೆ ಭಾರತೀಯ ಆಟಗಾರರು ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿ, ಗೋಲುಗಳ ಸುರಿಮಳೆಗೈದರು. ಈ ಮೂಲಕ ಭಾರತದ ಸ್ಕೋರ್ 12-0 ಕ್ಕೆ ಏರಿಕೆಯಾಗಿ, ಭಾರತ ತಂಡವು ಸೆಮಿಫೈನಲ್ ಪ್ರವೇಶಿಸಿತು. ಈ ಬಾರಿ ಏಷ್ಯನ್ ಗೇಮ್ಸ್ನಲ್ಲಿ ಭಾರತ ಹಾಕಿ ತಂಡ ಇದುವರೆಗೆ 5 ಪಂದ್ಯಗಳನ್ನಾಡಿದ್ದು, 58 ಗೋಲು ಗಳಿಸಿದೆ. ಹೊಡೆಸಿಕೊಂಡ ಗೋಲುಗಳ ಸಂಖ್ಯೆ ಕೇವಲ 5 ಆಗಿದೆ. ಹೀಗಾಗಿ ಈ ಬಾರಿ ಚಿನ್ನ ಗೆಲ್ಲುವ ಫೆವರೀಟ್ ತಂಡ ಬಾರತ ಆಗಿದೆ.