ರೊಮೇನಿಯಾದಿಂದ ಭಾರತೀಯರನ್ನ ಕರೆತರುತ್ತಿರುವ ಏರ್ ಇಂಡಿಯಾ – Saaksha Tv
ನವದೆಹಲಿ: ಉಕ್ರೇನ್ ನಲ್ಲಿರುವ ಭಾರತೀಯರನ್ನು ಕರೆ ತರುತ್ತಿರುವ ಏರ್ ಇಂಡಿಯಾ ವಿಮಾನ ಸಂಜೆ ವೇಳೆಗೆ ಭಾರತ ತಲುಪಲಿದೆ.
ಯುದ್ಧ ಪೀಡಿತ ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರಲು ಏರ್ ಇಂಡಿಯಾದ ಎರಡು ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ. ಇದರಲ್ಲಿ ಒಂದು ವಿಮಾನ ಈಗಾಗಲೇ ರೊಮೇನಿಯಾದಿಂದ ಹಲವಾರು ಭಾರತೀಯರನ್ನು ಹೊತ್ತು ತರುತ್ತಿದೆ. ಸಂಜೆ ವೇಳೆಗೆ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ ಎಂದು ಏರ್ ಇಂಡಿಯಾ ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ವಿಮಾನಗಳು ದೆಹಲಿಯಿಂದ ಬುಕಾರೆಸ್ಟ್ (ರೊಮೇನಿಯಾ) ಮತ್ತು ಬುಡಾಪೆಸ್ಟ್ (ಹಂಗೇರಿ)ನಿಂದ ಭಾರತೀಯರನ್ನು ಕರೆತರಲಿವೆ.
ಉಕ್ರೇನ್ನಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಭಾರತೀಯರ ಕೋವಿಡ್ ತಪಾಸಣೆಗಾಗಿ ನಿಲ್ದಾಣದಲ್ಲಿ ವಿಶೇಷ ಕಾರಿಡಾರ್ ರೂಪಿಸಲಾಗಿದೆ. ವಿಮಾನ ಲ್ಯಾಂಡ್ ಆದ ಬಳಿಕ ಕೋವಿಡ್ ತಪಾಸಣೆ ನಡೆಸುವ ಅಗತ್ಯವಿರುವ ಕಾರಣ ಈ ವಿಶೇಷ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಉಕ್ರೇನ್ ನಲ್ಲಿರುವ 240 ವಿದ್ಯಾರ್ಥಿಗಳನ್ನು ಈಗಾಗಲೇ 4 ಬಸ್ಗಳಲ್ಲಿ ಉಕ್ರೇನ್-ರೊಮೇನಿಯಾ ಗಡಿಗೆ ಸ್ಥಳಾಂತರಿಸಲಾಗುತ್ತಿದೆ . ಅಲ್ಲಿಂದ ಭಾರತೀಯ ವಿದ್ಯಾರ್ಥಿಗಳ ರಕ್ಷಣಾ ಕಾರ್ಯಾಚರಣೆ ಭಾಗವಾಗಿ 1 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಏರ್ ಇಂಡಿಯಾ ಮುಖಾಂತರ ಭಾರತಕ್ಕೆ ಕರೆತರಲು ಯೋಜನೆ ರೂಪಿಸಲಾಗಿದೆ. ಈ ಯೋಜನೆಯ ಮೊದಲ ಭಾಗವಾಗಿ ವಿಮಾನ ಬರುತ್ತಿದ್ದೆ.









