ನವದೆಹಲಿ : ಹೈಡ್ರಾಕ್ಸಿಕ್ಲೋರಿಕ್ವಿನ್ ಔಷಧಿಗಾಗಿ ಭಾರತದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಮಾತುಗಳನ್ನಾಡಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಖಂಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ‘ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಆದರೆ ಅವಶ್ಯಕ ವೈದ್ಯಕೀಯ ನೆರವು ಮೊದಲು ಭಾರತೀಯರಿಗೆ ಸಿಗುವಂತಾಗಲಿ’ ಎಂದು ಸರ್ಕಾರಕ್ಕೆ ಸಲಹೆಯನ್ನೂ ನೀಡಿದ್ದಾರೆ.ಅಲ್ಲದೇ, ಪ್ರತೀಕಾರ ತೀರಿಸಿಕೊಳ್ಳಲು ಯಾರು ಗೆಳೆತನ ಮಾಡುವುದಿಲ್ಲ. ಮಾನವೀಯ ಆಧಾರದ ಮೇಲೆ ಟ್ರಂಪ್ ಮನವಿ ಮಾಡುವುದು ಒಳಿತು ಎಂದು ತಿಳಿಸಿದ್ದಾರೆ.
ಇದೇ ವೇಳೆ ಮಾನವೀಯ ನೆರವಿನ ನೆಲೆಗಟ್ಟಿನಲ್ಲಿ ವಿದೇಶಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಯೂ ಸೇರಿದಂತೆ ಒಟ್ಟು 24 ವಿವಿಧ ಮಾತ್ರೆಗಳನ್ನು ರಫ್ತು ಮಾಡಲು ಭಾರತ ಒಪ್ಪಿಕೊಂಡಿರುವುದಕ್ಕೆ ರಾಹುಲ್ ಗಾಂಧಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.








