ತಾಯ್ನಾಡಿಗೆ ಮರಳಿದ ಉಕ್ರೇನ್ ನಲ್ಲಿ ನೆಲಸಿದ್ದ ಭಾರತೀಯರು – Saaksha Tv
ನವದೆಹಲಿ: ಉಕ್ರೇನ್ನಲ್ಲಿ ನೆಲೆಸಿದ್ದ ಭಾರತೀಯರು ಏರ್ ಇಂಡಿಯಾ ವಿಮಾನದ ಮೂಲಕ ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳದಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಿಸಿದ ಬೆನ್ನಲ್ಲೇ, ಭಾರತ ಸರ್ಕಾರ ಉಕ್ರೇನ್ನಲ್ಲಿ ನೆಲೆಸಿರುವ ಭಾರತೀಯರು ದೇಶ ತೊರೆಯುವಂತೆ ಮನವಿ ಮಾಡಿ, ವಿಶೇಷ ವಿಮಾನ ವ್ಯವಸ್ಥೆ ಮಾಡಿತ್ತು. ಅದರಂತೆ ಮೊದಲ ವಿಮಾನದಲ್ಲಿ 2 ದಿನಗಳ ಹಿಂದೆಯೇ 241 ಜನರು ಮರಳಿ ತಾಯ್ನಾಡಿಗೆ ಬಂದಿಳದಿದ್ದರು. ಅದರಂತೆ ನಿನ್ನೆ ರಾತ್ರಿಯೇ ಉಕ್ರೇನ್ನಿಂದ 2 ನೇ ವಿಶೇಷ ವಿಮಾನದ ಮೂಲಕ ಮತ್ತಷ್ಟು ಭಾರತೀಯರು ಭಾರತಕ್ಕ ಬಂದಿದ್ದಾರೆ.
‘ಉಕ್ರೇನ್ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಬಗ್ಗೆ ಮಾಹಿತಿ ತಿಳಿದ ತಕ್ಷಣವೇ ನಾವು ಅಲ್ಲಿಂದ ಹೊರಡಲು ಸಿದ್ಧವಾದೆವು. ಅದರಂತೆ ಭಾರತೀಯ ದೂತಾವಾಸ ಕಚೇರಿಯ ಅಧಿಕಾರಿಗಳನ್ನು ಸಂಪರ್ಕಿಸಿ ವಿಮಾನದ ವ್ಯವಸ್ಥೆ ಬಗ್ಗೆ ತಿಳಿದುಕೊಂಡು, ಇದೀಗ ತಾಯ್ನಾಡಿಗೆ ವಾಪಸ್ ಬಂದಿದ್ದೇವೆ’ ಎಂದು ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.
ರಷ್ಯಾ ತನ್ನ ದೇಶದ ಮೇಲೆ ಯುದ್ಧ ಘೋಷಿಸಿದ ಪರಿಣಾಮ ಉಕ್ರೇನ್ ನಾಗರಿಕ ವಿಮಾನಯಾನಕ್ಕೆ ನಿರ್ಬಂಧ ಹೇರಿದೆ. ಅಲ್ಲದೇ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಉಕ್ರೇನ್ಗೆ ಬರುವ ಮತ್ತು ಹೊರಡುವ ಎಲ್ಲ ವಿಮಾನಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕು ಎಂದು ಅಲ್ಲಿನ ಸರ್ಕಾರ ಆದೇಶಿಸಿದೆ.








