ADVERTISEMENT
Friday, July 3, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸಚಿನ್ ಹೇಳಿಕೆಯನ್ನು ಪ್ರಶ್ನೆ ಮಾಡೋಣ… ಆದ್ರೆ ಸಾಧನೆ – ವ್ಯಕ್ತಿತ್ವವನ್ನು ಪ್ರಶ್ನೆ ಮಾಡೋ ಯೋಗ್ಯತೆ ನಮಗಿದೆಯಾ ?

admin by admin
February 5, 2021
in Newsbeat, Sports, ಕ್ರೀಡೆ
Best T20 Batter

Best T20 Batter

Share on FacebookShare on TwitterShare on WhatsappShare on Telegram

Related posts

ವೈರಲ್ ಆಡಿಯೋದಿಂದ ರಾಜ್ಯ ಬಿಜೆಪಿಯಲ್ಲಿ ಸಂಚಲನ; ಡಿವಿಎಸ್ ಸ್ಪಷ್ಟನೆ

ಕಿಕ್ ಔಟ್ ಮಾಡಲು ನಾನೇನು ತಪ್ಪು ಮಾಡಿದ್ದೆ ಬಿಜೆಪಿಯಲ್ಲಿ ಆಡಿಯೋ ಬಾಂಬ್ ಸ್ಫೋಟ ಸದಾನಂದ ಗೌಡರ ನಡೆಯಿಂದ ಬೇಸತ್ತ ರಾಜ್ಯಾಧ್ಯಕ್ಷ

July 2, 2026
ನಮ್ಮ ಮೆಟ್ರೋ ಸೇವೆ ವ್ಯತ್ಯಯ; BMRCLಗೆ ತನಿಖೆಗೆ ಆದೇಶ

ನಮ್ಮ ಮೆಟ್ರೋ ಸೇವೆ ವ್ಯತ್ಯಯ; BMRCLಗೆ ತನಿಖೆಗೆ ಆದೇಶ

July 2, 2026

ಸಚಿನ್ ಹೇಳಿಕೆಯನ್ನು ಪ್ರಶ್ನೆ ಮಾಡೋಣ… ಆದ್ರೆ ಸಾಧನೆ – ವ್ಯಕ್ತಿತ್ವವನ್ನು ಪ್ರಶ್ನೆ ಮಾಡೋ ಯೋಗ್ಯತೆ ನಮಗಿದೆಯಾ ?

sachin tendulkar saakshatv cricketಕೇಂದ್ರ ಸರ್ಕಾರದ ಕೃಷಿ ಕಾಯ್ದೆಯ ವಿರುದ್ಧ ರೈತರ ಹೋರಾಟ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿರುವುದು ಗೊತ್ತಿರುವ ವಿಚಾರ.
ಈ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದ ಸೆಲೆಬ್ರಿಟಿಗಳು ಸಾಮಾಜಿಕ ಜಾಲ ತಾಣದ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದ್ರೆ ಈ ಬಗ್ಗೆ ದೇಶದ ಏಕತೆ ಮತ್ತು ಅಂತರಿಕ ವಿಚಾರದಲ್ಲಿ ಬೇರೆಯವರು ಮೂಗು ತೂರಿಸುವುದು ಸರಿಯಲ್ಲ. ನಮ್ಮ ಸಮಸ್ಯೆಯನ್ನು ನಾವೇ ಬಗೆ ಹರಿಸಿಕೊಳ್ಳುತ್ತೇವೆ ಎಂದು ಭಾರತೀಯ ಸೆಲೆಬ್ರಿಟಿಗಳು ಸಾಮಾಜಿಕ ಜಾಲ ತಾಣದಲ್ಲಿ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಅದ್ರಲ್ಲೂ ಮುಖ್ಯವಾಗಿ ಸಚಿನ್ ತೆಂಡುಲ್ಕರ್ ಹೇಳಿಕೆಗೆ ವಿರುದ್ಧವಾಗಿ ಕೆಲವರು ಸಾಮಾಜಿಕ ಜಾಲ ತಾಣದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಅಷ್ಟಕ್ಕು ಸಚಿನ್ ತೆಂಡುಲ್ಕರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇ ತಪ್ಪು ಎಂಬ ರೀತಿಯಲ್ಲಿ ಹೇಳಿದ್ದಾರೆ. ಹಾಗಂತ ಸಚಿನ್ ತೆಂಡುಲ್ಕರ್ ಎಲ್ಲೂ ಕೂಡ ರೈತರ ಹೋರಾಟ ತಪ್ಪು ಅಂತ ಹೇಳಿಲ್ಲ. ಅಂತರಿಕ ವಿಚಾರದಲ್ಲಿ ಬೇರೆಯವರು ಹೇಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಅದೊಂದೇ ಕಾರಣ ನೀಡಿ, ಸಚಿನ್ ತೆಂಡುಲ್ಕರ್ ಅವರ ವ್ಯಕ್ತಿತ್ವವನ್ನೇ ಪ್ರಶ್ನೆ ಮಾಡುತ್ತಿದ್ದಾರೆ. ಸಚಿನ್ ತೆಂಡುಲ್ಕರ್ ಸ್ವಾರ್ಥಿ, ಸಚಿನ್ ತೆಂಡುಲ್ಕರ್ ಭಾರತ ರತ್ನ ಪ್ರಶಸ್ತಿ ಕೊಟ್ಟಿರುವುದು ಯಾರು ? ರಾಜ್ಯ ಸಭೆಗೆ ಆಯ್ಕೆ ಮಾಡಿರುವುದು ಯಾರು ? ಸಚಿನ್ ತನ್ನ ಕೆರಿಯರ್ ಗೋಸ್ಕರ ಈ ರೀತಿ ಹೇಳಿಕೆ ನೀಡಿದ್ದಾರೆ ಅಂತ ಕೆಲವರು ಹೇಳಿದ್ದಾರೆ. ಹಾಗೇ ಅಂಬಾನಿ, ಅಮಿತ್ ಶಾ, ಮೋದಿಯವರನ್ನು ಒಲೈಕೆ ಮಾಡುತ್ತಿದ್ದಾರೆ ಅಂತನೂ ಹೇಳಿದ್ದಾರೆ. ಇನ್ನು ಕೆಲವರು ಸಚಿನ್ ವಿದೇಶಿ ಬ್ರಾಂಡ್ ಗಳಿಗೆ ರಾಯಭಾರಿಯಾಗಿರುವ ಬಗ್ಗೆ ಪ್ರಶ್ನೆ ಕೂಡ ಮಾಡಿದ್ದಾರೆ.
ಆದ್ರೆ ಒಂದು ಮಾತನ್ನು ನೆನಪಿಟ್ಟುಕೊಳ್ಳಿ.. ಸಚಿನ್ ನಮ್ಮ ನಿಮ್ಮಂತೆ ಭಾರತೀಯ. ಅವರಿಗೂ ಅಭಿವ್ಕಕ್ತಿ ಸ್ವಾತಂತ್ರ್ಯವಿದೆ. ತನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಹಕ್ಕು ಇದೆ. ಹೀಗಾಗಿ ತನ್ನ ಅಭಿಪ್ರಾಯ ಹೇಳಿದ್ದಾರೆ. ಅದು ಕೂಡ ರಿಹಾನಾ ಟ್ವಿಟ್ ಗೆ ಪ್ರತಿಕ್ರಿಯೆ ನೀಡಿರುವುದು.
ಇನ್ನು ರಿಯಾನ ತನ್ನ ದೇಶದಲ್ಲಿ ನಡೆಯುತ್ತಿರುವ ಸಮಸ್ಯೆಗಳ ಬಗ್ಗೆ ಮೊದಲು ಪ್ರಶ್ನೆ ಮಾಡಬೇಕು. ಆಕೆ ದೊಡ್ಡ ಸೆಲೆಬ್ರಿಟಿಯಾಗಿರಬಹುದು. ಆಕೆಗೂ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕು ಇದೆ. ಆದ್ರೆ ಬೇರೆ ದೇಶದ ಸಮಸ್ಯೆಗಳ ಬಗ್ಗೆ ಪ್ರಶ್ನೆ ಮಾಡುವ ಮೊದಲು ತನ್ನ ದೇಶದ ಅಂತರಿಕ ಸಮಸ್ಯೆಗಳನ್ನು ಬಗೆ ಹರಿಸುವತ್ತ ಮೊದಲು ಚಿತ್ತವನ್ನಿಡಲಿ.
sachin tendulkar saakshatv cricketಅದೇನೇ ಇರಲಿ, ಸಚಿನ್ ತೆಂಡುಲ್ಕರ್ ಯಾರನ್ನು ಕೇಳಿಕೊಂಡು ಕ್ರಿಕೆಟ್ ಆಡಲಿಲ್ಲ. ಯಾರನ್ನು ಒಲೈಕೆ ಮಾಡಬೇಕು ಅಂತ ಶತಕದ ಮೇಲೆ ಶತಕ ದಾಖಲಿಸಲಿಲ್ಲ. ಸ್ವಾರ್ಥಿ ಇರಬಹುದು. ಹಾಗಂತ ಈ ಮನುಕುಲದಲ್ಲಿ ಸ್ವಾರ್ಥ ಇಲ್ಲದೇ ಇರುವವರು ಯಾರಿದ್ದಾರೆ.. ಪ್ರತಿಯೊಬ್ಬರು ಸ್ವಾರ್ಥಿಗಳೇ. ಹಾಗೇ ಸಚಿನ್ ಕೂಡ ಸ್ವಾರ್ಥಿ. ತನ್ನ ಕೆರಿಯರ್ ಗೋಸ್ಕರ ಸ್ವಾರ್ಥಿಯಾಗಿ ಆಡಿಕೊಂಡು ವಿಶ್ವ ಕ್ರಿಕೆಟ್ ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ.
ಇನ್ನು ಸಚಿನ್ ತನ್ನ ಆಟವನ್ನು ನೋಡಿ ಅಂತ ಯಾರನ್ನು ಕೇಳಿಲ್ಲ. ಅಥವಾ ಆಹ್ವಾನಿಸಿಲ್ಲ. ತನ್ನ ಸಾಮಥ್ರ್ಯ ಮತ್ತು ಅದ್ಭುತ ಆಟದ ಮೂಲಕವೇ ಅಭಿಮಾನಿ ಬಳಗವನ್ನು ಕಟ್ಟಿಕೊಳ್ಳುವಂತೆ ಮಾಡಿದ್ರು. ಸ್ಫೋಟಕ ಆಟದ ಮೂಲಕ ಪ್ರೇಕ್ಷಕರನ್ನು ಮೈದಾನದೊಳಗೆ ಬರುವಂತೆ ಮಾಡಿದ್ರು. ಟಿವಿಯಲ್ಲಿ ತನ್ನ ಆಟವನ್ನು ನೋಡುವಂತೆ ಮಾಡಿಕೊಂಡ್ರು. ಅಷ್ಟೇ ಅಲ್ಲ, ಮೈದಾನದಲ್ಲಿ ಸಚಿನ್ ಸಚಿನ್ ಸಚಿನ್ ಅಂತ ಮಂತ್ರ ಘೋಷದಂತೆ ಅಭಿಮಾನಿಗಳು ಕೂಗುವಂತೆ ಮಾಡಿದ್ದು ಅವರ ಆಟವೇ ಹೊರತು ಬೇರೇನೂ ಅಲ್ಲ.
sachin tendulkar saakshatv cricketಹಾಗೇ ಸಚಿನ್ ಫಾರ್ಮ್ ನಲ್ಲಿ ಇಲ್ಲದೇ ಇದ್ದರೂ ತಂಡದಲ್ಲಿ ಭಾರತ ತಂಡದಲ್ಲಿ 24 ವರ್ಷ ಆಡಿದ್ದರು ಎಂಬ ಟೀಕೆಯೂ ಇದೆ. ಒಂದು ವೇಳೆ, ಸಚಿನ್ ಫಾರ್ಮ್ ನಲ್ಲಿ ಇಲ್ಲ ಅಂತ ಅಂದ ಮೇಲೆ ಆಯ್ಕೆ ಸಮಿತಿ ಸುಮ್ಮನೆ ತಂಡದಲ್ಲಿ ಸೇರಿಕೊಂಡಿತ್ತಾ.. ಬಿಸಿಸಿಐ ಸಚಿನ್ ತೆಂಡುಲ್ಕರ್ ಅಷ್ಟೊಂದು ಹೆದರಿಕೊಳ್ಳುತ್ತಿತ್ತಾ.. ಅಷ್ಟೇ ಅಲ್ಲ, ಸಚಿನ್ ಫಾರ್ಮ್ ನಲ್ಲಿ ಇಲ್ಲ, ಸ್ವಾರ್ಥಿಯಾಗಿರುತ್ತಿದ್ರೆ ಸಾವಿರಾರು ರನ್ ಗಳು ನೂರು ಶತಕಗಳು ಹಾಗೇ ಬಂದ್ವಾ ? ಟೀಕೆ ಮಾಡೋದು ಸುಲಭ.. ಆಡಿ ತೋರಿಸುವುದು ತುಂಬಾ ಕಷ್ಟ….
ಮತ್ತೊಂದೆಡೆ ಸಚಿನ್ ತೆಂಡುಲ್ಕರ್ ಗೆ ಭಾರತ ರತ್ನ ಕೊಟ್ಟಿರುವುದು ದೊಡ್ಡ ತಪ್ಪು ಅಂತ ಹೇಳುತ್ತಿದ್ದಾರೆ. ಆದ್ರೆ ಸಚಿನ್ ತಾನಾಗಿಯೇ ಭಾರತ ರತ್ನ ಕೊಡಿ ಅಂತ ಮನವಿ ಮಾಡಿಕೊಂಡಿರಲಿಲ್ಲ.. ಹಾಗೇ ರಾಜ್ಯ ಸಭೆಗೆ ತನ್ನನ್ನು ಆಯ್ಕೆ ಮಾಡಿ ಅಂತ ಕೇಳಿಕೊಂಡಿರಲಿಲ್ಲ. ಆದ್ರೆ ಸಚಿನ್ ನಿವೃತ್ತಿಯಾಗುತ್ತಿದ್ದಂತೆ, ಭಾರತ ರತ್ನ ಮತ್ತು ರಾಜ್ಯ ಸಭೆಗೆ ಯಾರು ಆಯ್ಕೆ ಮಾಡಿಕೊಂಡಿರುವುದು.. ಅದರ ಹಿಂದಿನ ಉದ್ದೇಶ ಏನಿತ್ತು ಎಂಬುದು ಗೊತ್ತಿಲ್ಲದ ವಿಚಾರವೇನೂ ಅಲ್ಲ.

sachin tendulkar saakshatv cricketಇನ್ನು ಮಗನ ಕೇರಿಯರ್.. ಎಲ್ಲ ಅಪ್ಪಂದಿರಂತೆ ಸಚಿನ್ ಕೂಡ ತನ್ನ ಮಗನ ಕೇರಿಯರ್ ಬಗ್ಗೆ ಯೋಚಿಸುವುದು ತಪ್ಪಾ ? ರಾಜಕೀಯ, ಉದ್ದಯ, ಸಿನಿಮಾ, ಕೃಷಿ ಸೇರಿದಂತೆ ಎಲ್ಲರು ಕೂಡ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಯೋಚನೆ ಮಾಡುತ್ತಿರುತ್ತಾರೆ. ಪ್ರತಿಯೊಂದು ಕುಟುಂಬ ರಾಜಕಾರಣವೇ. ಕುಟುಂಬ ರಾಜಕಾರಣ ಯಾವ ಮಟ್ಟದಲ್ಲಿದೆ ಎಂಬುದಕ್ಕೆ ನಮ್ಮಲ್ಲಿ ಸಾಕಷ್ಟು ನಿದರ್ಶನಗಳಿಗೆ.
ಅಂದ ಮೇಲೆ ಸಚಿನ್ ತನ್ನ ಮಗನ ಕೆರಿಯರ್ ಬಗ್ಗೆ ಯೋಚನೆ ಮಾಡುವುದರಲ್ಲಿ ತಪ್ಪೇನೂ ಇಲ್ಲ. ಹಾಗೇ ಸಚಿನ್ ಪ್ರಭಾವ ಬಳಸಿಕೊಳ್ಳುವುದಾದ್ರೆ ತನ್ನ ಮಗನನ್ನು 19 ವಯೋಮಿತಿ ತಂಡದಲ್ಲಿ ಸೇರಿಸಿಕೊಳ್ಳಬಹುದಿತ್ತು. ಆದ್ರೆ ಸಚಿನ್ ಆ ರೀತಿ ಮಾಡಿಲ್ಲ. ತನ್ನ ಮಗನ sachin tendulkar saakshatv cricketಪ್ರತಿಭೆ ಮತ್ತು ಸಾಮಥ್ರ್ಯಕ್ಕೆ ತಕ್ಕಂತೆ ಆಡಿಕೊಂಡು ಇದೀಗ ಐಪಿಎಲ್ ನಲ್ಲಿ ಆಡುವ ಅರ್ಹತೆಯನ್ನು ಪಡೆದುಕೊಂಡಿದ್ದಾನೆ ಅರ್ಜುನ್ ತೆಂಡುಲ್ಕರ್. ಅರ್ಜುನ್ ತೆಂಡುಲ್ಕರ್ ಗೆ ಸಚಿನ್ ತೆಂಡುಲ್ಕರ್ ಅನ್ನೋ ಟ್ಯಾಗ್ ಲೈನ್ ಎಷ್ಟೊಂದು ಮುಳುವಾಗುತ್ತಿದೆ ಎಂಬುದು ಆತನಿಗೆ ಮಾತ್ರ ಗೊತ್ತು. ಐಪಿಎಲ್ ನಲ್ಲಿ ಅರ್ಜುನ್ ಗೆ ಆಡಲು ಅಂಬಾನಿ ತಂಡವೇ ಆಗಬೇಕಿಲ್ಲ. ಸಚಿನ್ ಮನಸು ಮಾಡಿದ್ರೆ ಬೇರೆ ತಂಡದಲ್ಲೂ ಆಡಿಸಬಹುದು. ಆದ್ರೆ ಸಚಿನ್ ಆ ರೀತಿ ಮಾಡಿಲ್ಲ. ಅರ್ಹತೆಯ ಆಧಾರದಲ್ಲಿ ಅರ್ಹತೆ ಪಡೆದುಕೊಳ್ಳಬೇಕು. ಸುಮ್ಮನೆ ಪ್ರಭಾವ ಬಳಸಿ ತಂಡಕ್ಕೆ ಸೇರಿಕೊಂಡ್ರೆ ಕೊನೆಯಲ್ಲಿ ಮರ್ಯಾದೆ ಹೋಗುವುದು ಯಾರದ್ದು ಎಂಬುದನ್ನು ಅರ್ಥಮಾಡಿಕೊಳ್ಳದಷ್ಟು ದಡ್ಡರಲ್ಲ ಸಚಿನ್ ತೆಂಡುಲ್ಕರ್.

[contact-form][contact-field label=”Name” type=”name” required=”true” /][contact-field label=”Email” type=”email” required=”true” /][contact-field label=”Website” type=”url” /][contact-field label=”Message” type=”textarea” /][/contact-form]

ಮತ್ತೊಂದೆಡೇ ವಿದೇಶಿ ಬ್ರಾಂಡ್ ಗಳಿಗೆ ಸಚಿನ್ ರಾಯಭಾರಿಯಾಗಿರೋದು ತಪ್ಪಾಗಿದ್ರೆ, ವಿದೇಶಿ ಕಂಪೆನಿಗಳಿಗೆ ಭಾರತದಲ್ಲಿ ಅವಕಾಶಕೊಟ್ಟಿರುವುದು ಕೂಡ ತಪ್ಪು ಅಲ್ವಾ ? ಹಾಗೇ ಇವತ್ತು ಬಿಸಿಸಿಐ, ಐಪಿಎಲ್ ಆಗಿಬಹುದು ಅಥವಾ ಕ್ರಿಕೆಟಿಗರು ಆಗಿರಬಹುದು.. ಜೇಬು ತುಂಬಾ ದುಡ್ಡು ತುಂಬಿರೋದಕ್ಕೆ ಎಲ್ಲೋ ಒಂದು ಕಡೆ ಕಾರಣ ಸಚಿನ್ ತೆಂಡುಲ್ಕರ್.
ಒಟ್ಟಿನಲ್ಲಿ ಸಚಿನ್ ಒಂದು ಹೇಳಿಕೆಯನ್ನು ಮುಂದಿಟ್ಟುಕೊಂಡು ಸಾಮಾಜಿಕ ಜಾಲ ತಾಣದಲ್ಲಿ ಮನಬಂದಂತೆ ಮಾತನಾಡುವ ಹಕ್ಕು ಮತ್ತು ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ಇದೆ. ಆದ್ರೆ ಅದನ್ನು ಮುಂದಿಟ್ಟುಕೊಂಡು ಸಚಿನ್ ವ್ಯಕ್ತಿತ್ವ ಮತ್ತು ಸಾಧನೆಯನ್ನು ಪ್ರಶ್ನೆ ಮಾಡುವುದು ಎಷ್ಟರ ಮಟ್ಟಿಗೆ ಸರಿ. ಆ ಯೋಗ್ಯತೆ ನಮ್ಮಗೆ ಇದೆಯಾ ಅನ್ನೋದನ್ನು ಮೊದಲು ಯೋಚಿಸಬೇಕು.

Tags: #saakshatvBollywood starsCricketFarmers protestindiapm narendra modirihannaRihanna's TweetSachin Tendulkarteam india
ShareTweetSendShare
Join us on:

Related Posts

ವೈರಲ್ ಆಡಿಯೋದಿಂದ ರಾಜ್ಯ ಬಿಜೆಪಿಯಲ್ಲಿ ಸಂಚಲನ; ಡಿವಿಎಸ್ ಸ್ಪಷ್ಟನೆ

ಕಿಕ್ ಔಟ್ ಮಾಡಲು ನಾನೇನು ತಪ್ಪು ಮಾಡಿದ್ದೆ ಬಿಜೆಪಿಯಲ್ಲಿ ಆಡಿಯೋ ಬಾಂಬ್ ಸ್ಫೋಟ ಸದಾನಂದ ಗೌಡರ ನಡೆಯಿಂದ ಬೇಸತ್ತ ರಾಜ್ಯಾಧ್ಯಕ್ಷ

by Shwetha
July 2, 2026
0

ಕರ್ನಾಟಕ ಬಿಜೆಪಿಯಲ್ಲಿ ನಾಯಕತ್ವದ ಸಂಘರ್ಷ ಮತ್ತು ಆಂತರಿಕ ಭಿನ್ನಮತ ಈಗ ಹೊಸ ರೂಪ ಪಡೆದುಕೊಂಡಿದೆ. ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರದ್ದು ಎನ್ನಲಾದ ಆಡಿಯೋ ವೈರಲ್ ಆದ...

ನಮ್ಮ ಮೆಟ್ರೋ ಸೇವೆ ವ್ಯತ್ಯಯ; BMRCLಗೆ ತನಿಖೆಗೆ ಆದೇಶ

ನಮ್ಮ ಮೆಟ್ರೋ ಸೇವೆ ವ್ಯತ್ಯಯ; BMRCLಗೆ ತನಿಖೆಗೆ ಆದೇಶ

by Shwetha
July 2, 2026
0

ಬೆಂಗಳೂರು ನಮ್ಮ ಮೆಟ್ರೋ ಸೇವೆಗಳಲ್ಲಿ ಪದೇ ಪದೇ ಉಂಟಾಗುತ್ತಿರುವ ವ್ಯತ್ಯಯಗಳ ಕುರಿತು ತನಿಖೆ ನಡೆಸುವಂತೆ ಮೆಟ್ರೋ ರೈಲ್ವೆ ಸುರಕ್ಷತಾ ಮುಖ್ಯ ಆಯುಕ್ತರು, ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್...

ಬೆಂಗಳೂರಿನ ವಾಹನ ಸವಾರರಿಗೆ ಶಾಕ್; ನೈಸ್ ರಸ್ತೆಯ ಹೊಸ ಟೋಲ್ ದರ ಜಾರಿ

ಬೆಂಗಳೂರಿನ ವಾಹನ ಸವಾರರಿಗೆ ಶಾಕ್; ನೈಸ್ ರಸ್ತೆಯ ಹೊಸ ಟೋಲ್ ದರ ಜಾರಿ

by Shwetha
July 2, 2026
0

ಬೆಂಗಳೂರಿನ ವಾಹನ ಸವಾರರಿಗೆ ಮತ್ತೊಂದು ಬೆಲೆ ಏರಿಕೆ ಹೊರೆ ಎದುರಾಗಿದೆ. ನಗರದ ಪ್ರಮುಖ ಟೋಲ್ ಮಾರ್ಗಗಳಾದ ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ (ಹೊಸೂರು ರಸ್ತೆ) ಹಾಗೂ...

ಗೃಹಜ್ಯೋತಿಗೆ ಜಾತಿ ಭೂತ: ಉಚಿತ ವಿದ್ಯುತ್ ನೀಡಲು ಜಾತಿ ಪ್ರಮಾಣಪತ್ರ ಕಡ್ಡಾಯ ಯಾಕೆ? – ಇದು ಯಾವ ಸೀಮೆ ಗ್ಯಾರಂಟಿ ಎಂದ ಆರ್ ಅಶೋಕ್!

ಗೃಹಜ್ಯೋತಿಗೆ ಜಾತಿ ಭೂತ: ಉಚಿತ ವಿದ್ಯುತ್ ನೀಡಲು ಜಾತಿ ಪ್ರಮಾಣಪತ್ರ ಕಡ್ಡಾಯ ಯಾಕೆ? – ಇದು ಯಾವ ಸೀಮೆ ಗ್ಯಾರಂಟಿ ಎಂದ ಆರ್ ಅಶೋಕ್!

by Shwetha
July 2, 2026
0

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಜ್ಯೋತಿ ಯೋಜನೆ ಈಗ ಹೊಸ ವಿವಾದಕ್ಕೆ ನಾಂದಿ ಹಾಡಿದೆ. ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್ ನೀಡುವ ಈ ಯೋಜನೆಗೆ ಈಗ...

ಬೆಂಗಳೂರಿನ ವಾಹನ ಸವಾರರಿಗೆ ಮತ್ತೊಂದು ಶಾಕ್; ಪ್ರಮುಖ ಟೋಲ್ ರಸ್ತೆಗಳಲ್ಲಿ ದರ ಏರಿಕೆ

ಬೆಂಗಳೂರಿನ ವಾಹನ ಸವಾರರಿಗೆ ಮತ್ತೊಂದು ಶಾಕ್; ಪ್ರಮುಖ ಟೋಲ್ ರಸ್ತೆಗಳಲ್ಲಿ ದರ ಏರಿಕೆ

by Shwetha
July 2, 2026
0

ಬೆಂಗಳೂರಿನ ವಾಹನ ಸವಾರರಿಗೆ ಮತ್ತೊಂದು ಬೆಲೆ ಏರಿಕೆ ಹೊರೆ ಎದುರಾಗಿದೆ. ನಗರದ ಪ್ರಮುಖ ಟೋಲ್ ರಸ್ತೆಗಳ ಬಳಕೆಯ ಶುಲ್ಕವನ್ನು ಪರಿಷ್ಕರಿಸಲಾಗಿದ್ದು, ಇಂದಿನಿಂದ ಹೊಸ ಟೋಲ್ ದರಗಳು ಜಾರಿಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram