India’s ‘biggest’ car thief | ಭಾರತದ ‘ದೊಡ್ಡ’ ಕಾರು ಕಳ್ಳನ ಬಂಧನ
ಭಾರತದ ‘ದೊಡ್ಡ’ ಕಾರು ಕಳ್ಳನ ಬಂಧನ
ದೆಹಲಿ ಪೊಲೀಸರ ಯಶಸ್ವಿ ಕಾರ್ಯಾಚರಣೆ
5000ಕ್ಕೂ ಕಾರುಗಳ ಕಳ್ಳತನ ಮಾಡಿದ ಭೂಪ
52 ವರ್ಷದ ಅನಿಲ್ ಚೌಹಾಣ್ ಬಂಧಿತ ಆರೋಪಿ
ದೆಹಲಿ : ಭಾರತದ ‘ದೊಡ್ಡ’ ಕಾರು ಕಳ್ಳನನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
52 ವರ್ಷದ ಅನಿಲ್ ಚೌಹಾಣ್ ಬಂಧಿತ ಆರೋಪಿಯಾಗಿದ್ದು, ಈತನಿಗೆ ಬರೋಬ್ಬರಿ 27 ವರ್ಷದ ಕಳ್ಳತನದ ಇತಿಹಾಸ ಇದೆ.
ಅನಿಲ್ ಚೌಹಾಣ್ ದೇಶದ ವಿವಿಧೆಡೆ 5 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಕಳ್ಳತನ ಮಾಡಿದ್ದಾನೆ.

ಈತನ ಹೆಸರಿನಲ್ಲಿ ದೆಹಲಿ. ಮುಂಬೈ ಮತ್ತು ಈಶಾನ್ಯ ರಾಜ್ಯಗಳಲ್ಲಿಯೂ ಆಸ್ತಿಗಳಿವೆ.
ಮೂವರನ್ನ ಮದುವೆಯಾಗಿರುವ ಅನಿಲ್ ಗೆ ಏಳು ಮಂದಿ ಮಕ್ಕಳಿದ್ದಾರೆ.
ಕದ್ದ ಕಾರುಗಳನ್ನು ಅನಿಲ್ ಚೌಹಾಣ್ ನೇಪಾಳ, ಜಮ್ಮು ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದನಂತೆ. ಈತನ ಮೇಲೆ ಒಟ್ಟು 180 ಪ್ರಕರಣಗಳು ದಾಖಲಾಗಿವೆ.
ಇತ್ತೀಚಿನ ದಿನಗಳಲ್ಲಿ ಉತ್ತರ ಪ್ರದೇಶದಿಂದ ಅಕ್ರಮ ಶಸ್ತ್ರಾಸ್ತ್ರಗಳನ್ನು ನಿಷೇಧಿತ ಸಂಘಟನೆಗಳಿಗೆ ರವಾನಿಸಿದ್ದು, ಪೊಲೀಸರು ಆರು ಪಿಸ್ತೂಲ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.