Indian Economy: 2021-22ರಲ್ಲಿ ಹಣಕಾಸು ವರ್ಷದಲ್ಲಿ $418 ಬಿಲಿಯನ್ ದಾಟಿದೆ ಭಾರತದ ರಫ್ತು
1 min read
2021-22ರಲ್ಲಿ ಹಣಕಾಸು ವರ್ಷದಲ್ಲಿ $418 ಬಿಲಿಯನ್ ದಾಟಿದೆ ಭಾರತದ ರಫ್ತು
ನವದೆಹಲಿ: ಭಾರತದ ರಪ್ತು ಅಭೂತಪೂರ್ವ ಮೈಲಿಗಲ್ಲು ಸಾಧಿಸಿದ್ದು, 2021-22ನೇ ಹಣಕಾಸು ವರ್ಷದಲ್ಲಿ ಭಾರತದ ರಪ್ತು 418 ಬಿಲಿಯನ್ ದಾಡಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು ಆತ್ಮನಿರ್ಭರ ಭಾರತ ದೆಡೆಗಿನ ಪಯಣದಲ್ಲಿ ಇದೊಂದು ಪ್ರಮುಖ ಮೈಲಿಗಲ್ಲು. ಬಹುಶಃ ಆರ್ಥಿಕತೆಯ ಪ್ರತಿಯೊಂದು ವಲಯ, ರೈತರು, ಉದ್ಯಮಿಗಳು, ಎಂಎಸ್‌ಎಂಇ ಮತ್ತು ರಾಜ್ಯ ಸರ್ಕಾರಗಳು ಈ ಗುರಿಯನ್ನು ಸಾಧಿಸಲು ಒಟ್ಟಾಗಿ ಕೆಲಸ ಮಾಡಿದೆ” ಎಂದಿದ್ದಾರೆ.
2019-20ರಲ್ಲಿ ಕೇವಲ ಎರಡು ಲಕ್ಷ ಟನ್‌ಗಳಷ್ಟಿದ್ದ ಗೋಧಿಯ ರಫ್ತು 2020-21ರಲ್ಲಿ 21.55 ಲಕ್ಷ ಟನ್‌ಗಳಿಗೆ ಏರಿಕೆಯಾಗಿದೆ ಎಂದು ಸಚಿವರು ಹೇಳಿದರು. ಸಂಘರ್ಷದ ಪ್ರದೇಶಗಳಿಂದ ಸರಬರಾಜುಗಳನ್ನು ಪಡೆಯದ ದೇಶಗಳ ಅಗತ್ಯಗಳನ್ನು ಪೂರೈಸಲು ಭಾರತವು ದೊಡ್ಡ ರೀತಿಯಲ್ಲಿ ಗೋಧಿ ರಫ್ತು ಮಾಡುವುದನ್ನು ಮುಂದುವರಿಸುತ್ತದೆ ಎಂದಿದ್ದಾರೆ.
ಮಾರ್ಚ್ ತಿಂಗಳೊಂದರಲ್ಲೇ ರಫ್ತು 40 ಶತಕೋಟಿ ಡಾಲರ್ ಮೀರಿದ್ದು, ಒಂದು ತಿಂಗಳಲ್ಲೇ ಅತಿ ಹೆಚ್ಚು ರಫ್ತು ಮಾಡಿದ ಇತಿಹಾಸ ನಿರ್ಮಿಸಿದೆ ಎಂದು ಹೇಳಿದರು. ಚೀನಾದ ನಂತರ ಭಾರತವು ಎರಡನೇ ಅತಿ ದೊಡ್ಡ ಗೋಧಿ ಉತ್ಪಾದಕನಾಗಿದೆ.