ಭಾರತದಲ್ಲಿ ಹೊಸ Omicron ಉಪ-ವೇರಿಯಂಟ್ BA.4 ಪತ್ತೆ….
ದೇಶದಲ್ಲಿ ಹೊಸ Omicron ಉಪ-ವೇರಿಯಂಟ್ BA.4 ನ ಮೊದಲ ಪ್ರಕರಣವು ಗುರುವಾರ ಹೈದರಾಬಾದ್ ನಲ್ಲಿ ಪತ್ತೆಯಾಗಿದೆ. ಹೊಸ ಕೋವಿಡ್-19 ಸಬ್‌ವೇರಿಯಂಟ್‌ನ ಪತ್ತೆಯನ್ನು ಹಲವಾರು ಮಾಧ್ಯಮಗಳು ವರದಿ ಮಾಡಿವೆ. ಆದರೂ ದೃಢೀಕರಣಕ್ಕಾಗಿ ಮಾದರಿಯನ್ನು ಕಳುಹಿಸಲಾಗಿರುವ ಭಾರತೀಯ SARS-CoV-2 ಕನ್ಸೋರ್ಟಿಯಂ ಆನ್ ಜೀನೋಮಿಕ್ಸ್ (INSACOG) ನಿಂದ ಪರಿಶೀಲನೆಯ ವರದಿಯನ್ನ ನಿರೀಕ್ಷಿಸಲಾಗಿದೆ.
ಈ ಕುರಿತು INSACOG(Indian SARS-CoV-2 Genomics Consortium) ಇನ್ನೂ ಅಧಿಕೃತ ಘೋಷಣೆಯನ್ನ ಹೊರಡಿಸಿಲ್ಲ. ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಭಾರತಕ್ಕೆ ಆಗಮಿಸಿದ ಆಫ್ರಿಕನ್ ಪ್ರಜೆಯಲ್ಲಿ ಈ ಮಾದರಿ ಪತ್ತೆಯಾಗಿದೆ ಎಂದು ವರದಿಯಾಗಿದೆ. ವ್ಯಕ್ತಿಯನ್ನ ಕರೋನಾ ಪರೀಕ್ಷೆಗೆ ಒಳಪಡಿಸಿದ ನಂತರ ಒಮಿಕ್ರಾನ್‌ನ BA.4 ಸಬ್‌ವೇರಿಯಂಟ್ ಗೆ ಒಳಗಾಗಿರುವುದು ಕಂಡುಬಂದಿದೆ.
“ಮಾಹಿತಿ ನಿನ್ನೆ ರಾತ್ರಿ ಬಂದಿತು ಮತ್ತು ಮುನ್ನೆಚ್ಚೆರಿಕೆಯ ಕ್ರಮವಾಗಿ INSACOG ಮತ್ತೊಮ್ಮೆ ಮಾದರಿಯನ್ನು ಪರಿಶೀಲಿಸುತ್ತಿದೆ. ರೋಗಿಯು ರೋಗಲಕ್ಷಣವಿಲ್ಲದ ಕಾರಣ 16.5.2022 ರಂದು ತನ್ನ ದೇಶಕ್ಕೆ ತೆರಳಿದ್ದಾರೆ. ಸಂಪರ್ಕಗಳನ್ನು ದಾಖಲಿಸಲಾಗಿದೆ ಮತ್ತು ಅವರ ಸಂಪರ್ಕಕ್ಕೆ ಬಂದ ಜನರನ್ನು ಪತ್ತೆಹಚ್ಚಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಬ್ ವೇರಿಯೆಂಟ್ BA.4 ಪತ್ತೆಗೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಸಚಿವಾಲಯ ಇದುವರೆಗೆ ಯಾವುದೇ ಅಧಿಕೃತ ದೃಢೀಕರಣವನ್ನ ನೀಡಿಲ್ಲ.