ಕೋಟಿ ಕೋಟಿ ಜನ ಸಂಖ್ಯೆ ಹೊಂದಿರುವ ಭಾರತಕ್ಕೆ ಒಲಿಂಪಿಕ್ಸ್ ನಲ್ಲಿ ಸಿಕ್ಕಿರುವ ಪದಕಗಳು ಬರೀ 28..!

1 min read
Olympic Saakshatv

ಕೋಟಿ ಕೋಟಿ ಜನ ಸಂಖ್ಯೆ ಹೊಂದಿರುವ ಭಾರತಕ್ಕೆ ಒಲಿಂಪಿಕ್ಸ್ ನಲ್ಲಿ ಸಿಕ್ಕಿರುವ ಪದಕಗಳು ಬರೀ 28..!

136 ಕೋಟಿ ಜನ ಸಂಖ್ಯೆ ಹೊಂದಿರುವ ಭಾರತ ಒಲಿಂಪಿಕ್ಸ್ ಇತಿಹಾಸದಲ್ಲಿ ಗೆದ್ದಿದ್ದು ಬರೀ 28 ಪದಕಗಳು ಮಾತ್ರ.

1900ರ ಪ್ಯಾರಿಸ್ ಒಲಿಂಪಿಕ್ಸ್ ನಿಂದ 2016ರ ರಿಯೋ ಒಲಿಂಪಿಕ್ಸ್ ತನಕ ಭಾರತದ ಸಾಧನೆ ಒಲಿಂಪಿಕ್ಸ್ ನಲ್ಲಿ ಅಷ್ಟಕ್ಕಷ್ಟೇ. ಪದಕ ಗೆದ್ರೆ ಅದೇ ದೊಡ್ಡ ಇತಿಹಾಸ. ಇಲ್ಲದೇ ಇದ್ರೆ ಭಾಗವಹಿಸುವುದೇ ದೊಡ್ಡ ಸಾಧನೆ.

ಈ 28 ಪದಕಗಳಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಐದು ಪದಕಗಳು ಬಂದ್ರೆ, ಸ್ವಾತಂತ್ರ್ಯ ನಂತರ 23 ಪದಕಗಳು ಭಾರತಕ್ಕೆ ಲಭಿಸಿವೆ.

28 ಪದಕಗಳಲ್ಲಿ 9 ಚಿನ್ನದ ಪದಕಗಳು ಸಿಕ್ಕಿವೆ. ಅದರಲ್ಲಿ ಎಂಟು ಪದಕಗಳು ಹಾಕಿ ತಂಡದಿಂದ ಸಿಕ್ಕಿರುವುದು. 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಅಭಿನವ್ ಬಿಂದ್ರಾ ಅವರು ಶೂಟಿಂಗ್ ನಲ್ಲಿ ಚಿನ್ನ ಗೆದ್ದಿರುವುದು ವೈಯಕ್ತಿಕ ಶ್ರೇಷ್ಠ ಸಾಧನೆಯಗಿದೆ.

Olympic Saakshatv

ಇನ್ನುಳಿದಂತೆ ಆರು ಬೆಳ್ಳಿಯ ಪದಕಗಳು ಮತ್ತು 12 ಕಂಚಿನ ಪದಕಗಳು ಸಿಕ್ಕಿವೆ.

ಭಾರತದ ಹಾಕಿ ತಂಡ 1928, 1932, 1936, 1948, 1952, 1956, 19964, 1980ರಲ್ಲಿ ಚಿನ್ನದ ನಗೆ ಬೀರಿತ್ತು.

ಇನ್ನು ಒಲಿಂಪಿಕ್ಸ್ ನಲ್ಲಿ ಭಾರತದ ಶ್ರೇಷ್ಠ ಸಾಧನೆ ಹೊರಹೊಮ್ಮಿದ್ದು 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ. ಶೂಟರ್ ವಿಜಯ್ ಕುಮಾರ್, ರೆಸ್ಲರ್ ಸುಶೀಲ್ ಕುಮಾರ್ ಬೆಳ್ಳಿಯ ಪದಕ ಗೆದ್ದುಕೊಂಡಿದ್ದರು.

ಹಾಗೇ ಶೂಟಿಂಗ್ ನಲ್ಲಿ ಗಗನ್ ನರಂಗ್, ಬ್ಯಾಡ್ಮಿಂಟನ್ ನಲ್ಲಿ ಸೈನಾ ನೆಹ್ವಾಲ್, ಬಾಕ್ಸಿಂಗ್ ನಲ್ಲಿ ಮೇರಿ ಕೋಮ್, ರೆಸ್ಲಿಂಗ್ ನಲ್ಲಿ ಯೋಗೇಶ್ವರ್ ದತ್ ಅವರು ಕಂಚಿನ ಪದಕ ಗೆದ್ದಿದ್ದರು.

ಈ ನಡುವೆ 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಬ್ಯಾಡ್ಮಿಂಟನ್ ನಲ್ಲಿ ಭಾರತದ ಪಿ.ವಿ, ಸಿಂಧೂ ಬೆಳ್ಳಿ ಪದಕ ಗೆದ್ರೆ, ರೆಸ್ಲಿಂಗ್ ನಲ್ಲಿ ಒಂದು ಕಂಚಿನ ಪದಕ ಸಿಕ್ಕಿದೆ.

ಒಟ್ಟಿನಲ್ಲಿ ಒಲಿಂಪಿಕ್ಸ್ ನಲ್ಲಿ ಭಾರತದ ಸಾಧನೆ ಅಷ್ಟಕ್ಕಷ್ಟೇ. ಆದ್ರೆ ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಎಷ್ಟು ಪದಕ ಸಿಗುತ್ತೆ ಅನ್ನೋದನ್ನು ಕಾದು ನೋಡಬೇಕು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd