ಪಾಕಿಸ್ತಾನದ ಸುದ್ದಿ ಚಾನೆಲ್ ನಲ್ಲಿ ಭಾರತದ ತ್ರಿವರ್ಣ ಧ್ವಜ !
ಇಸ್ಲಾಮಾಬಾದ್, ಅಗಸ್ಟ್ 3: ಪಾಕಿಸ್ತಾನದ ಸುದ್ದಿ ಚಾನೆಲ್ ಡಾನ್ ನಲ್ಲಿ ಭಾನುವಾರ ಭಾರತೀಯ ತ್ರಿವರ್ಣ ಧ್ವಜ ಮತ್ತು ‘ಹ್ಯಾಪಿ ಇಂಡಿಪೆಂಡೆನ್ಸ್ ಡೇ’ ಸಂದೇಶ ಕಾಣಿಸಿಕೊಂಡಿದ್ದು, ಚಾನಲ್ ಅನ್ನು ಹ್ಯಾಕ್ ಮಾಡಲಾಗಿದೆ ಎಂದು ವರದಿಯಾಗಿದೆ.
ಪಾಕಿಸ್ತಾನದ ಪ್ರಮುಖ ಟಿವಿ ಸುದ್ದಿ ಚಾನೆಲ್ ಡಾನ್ ನಲ್ಲಿ ಭಾನುವಾರ ಹಠಾತ್ ಆಗಿ ತ್ರಿವರ್ಣ ಧ್ವಜ ಕಾಣಿಸಿಕೊಂಡಿದ್ದು ಟಿವಿ ವೀಕ್ಷಿಸುತ್ತಿದ್ದ ಪಾಕ್ ಜನರು ಶಾಕ್ ಆದರು ಸುದ್ದಿ ವಾಹಿನಿಯನ್ನು ಹ್ಯಾಕರ್ಗಳು ಹ್ಯಾಕ್ ಮಾಡಿದ್ದಾರೆ ಎಂದು ನಂತರ ಡಾನ್ ಮಾಧ್ಯಮ ಸ್ಪಷ್ಟನೆ ನೀಡಿತು. ಈ ಘಟನೆಯ ವಿಡಿಯೋ ಹಲವಾರು ಫೋಟೋಗಳು ಮತ್ತು ವಿಡಿಯೋಗಳು ಆನ್ಲೈನ್ನಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ತ್ರಿವರ್ಣ ಧ್ವಜ ಭಾನುವಾರ ಮಧ್ಯಾಹ್ನ ಚಾನೆಲ್ನಲ್ಲಿ ಕಾಣಿಸಿಕೊಂಡಿದೆ.
ಮಾಧ್ಯಮ ವರದಿಗಳ ಪ್ರಕಾರ, ಸಂದೇಶವು ಪಾಕಿಸ್ತಾನದ ಚಾನೆಲ್ ನಲ್ಲಿ ಮಧ್ಯಾಹ್ನ 3: 30 ಕ್ಕೆ ಕಾಣಿಸಿಕೊಂಡಿದೆ.
ಮಧ್ಯಾಹ್ನ ಚಾನೆಲ್ ನಲ್ಲಿ ಜಾಹೀರಾತು ಪ್ರಸಾರವಾಗುತ್ತಿದ್ದ ಸಂದರ್ಭದಲ್ಲಿ ಹಠಾತ್ ಆಗಿ ಭಾರತದ ತ್ರಿವರ್ಣ ಧ್ವಜ ಕಾಣಿಸಿತು ಮತ್ತು Happy Independence day ಎನ್ನುವ ಸಂದೇಶ ಡಾನ್ ಚಾನಲ್ ನಲ್ಲಿ ಕಾಣಿಸಿತು. ಇದರಿಂದ ತತ್ತರಿಸಿದ ಡಾನ್ ಸುದ್ದಿ ಮಾಧ್ಯಮ, ಪಾಕ್ ವೀಕ್ಷಕರು ಆಕ್ರೋಶ ವ್ಯಕ್ತಪಡಿಸಲು ಪ್ರಾರಂಭಿಸುತ್ತಿದ್ದಂತೆ, ನಮ್ಮ ಚಾನಲ್ ನ ಯೂಟ್ಯೂಬ್ ಅನ್ನು ಯಾರೋ ಹ್ಯಾಕ್ ಮಾಡಿದ್ದಾರೆ. ಆದರೆ ಅದು ಹೇಗಾಯಿತು ಎಂದು ನಮಗೆ ತಿಳಿದಿಲ್ಲ. ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿತು.
ತನ್ನ ಹೇಳಿಕೆಯಲ್ಲಿ ಡಾನ್ ನ್ಯೂಸ್ ಇದ್ದಕ್ಕಿದ್ದಂತೆ ಭಾರತೀಯ ಧ್ವಜ ಮತ್ತು ಹ್ಯಾಪಿ ಇಂಡಿಪೆಂಡೆನ್ಸ್ ಡೇ ಎಂಬ ಸಂದೇಶವು ಚಾನಲ್ ನಲ್ಲಿ ಜಾಹೀರಾತು ಪ್ರಸಾರವಾಗುತ್ತಿದ್ದ ವೇಳೆಯಲ್ಲಿ ಕಾಣಿಸಿಕೊಂಡಿದ್ದು, ಸ್ವಲ್ಪ ಸಮಯದವರೆಗೆ ಅಲ್ಲಿಯೇ ಇದ್ದು ನಂತರ ಕಣ್ಮರೆಯಾಯಿತು ಎಂದು ಹೇಳಿದೆ. ಜೊತೆಗೆ ಚಾನಲ್ ನಲ್ಲಿ ಭಾರತೀಯ ಧ್ವಜ ಮತ್ತು ಸ್ವಾತಂತ್ರ್ಯ ದಿನದ ಸಂದೇಶ ಪ್ರಸಾರಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಿದೆ ಎಂದು ಟ್ವೀಟ್ ಮಾಡಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಸಾರ್ವಜನಿಕ ಸಂಪರ್ಕ ಮಹಾನಿರ್ದೇಶಕರು ಪಾಕಿಸ್ತಾನದಿಂದ ಸ್ವಾತಂತ್ರ್ಯವನ್ನು ಕೋರಿದರು ಮತ್ತು ಇಮ್ರಾನ್ ಖಾನ್ ಆಡಳಿತವು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.
ಪಾಕಿಸ್ತಾನ ಸರ್ಕಾರದ ವೆಬ್ ಸೈಟ್ ಕೂಡ ಕೆಲವು ದಿನಗಳ ಹಿಂದೆ ಹ್ಯಾಕ್ ಆಗಿತ್ತು. ಭಾರತೀಯರೇ ಹ್ಯಾಕ್ ಮಾಡಿದ್ದಾರೆ ಎಂದು ಪಾಕ್ ಆರೋಪಿಸಿತ್ತು.