ಇಂಡೋ – ಆಫ್ರಿಕಾ ಟೆಸ್ಟ್ ಪಂದ್ಯ | ಸಿರಾಜ್ ಇಂಜೂರಿ ಬಗ್ಗೆ ಅಶ್ವಿನ್ ಪ್ರತಿಕ್ರಿಯೆ

1 min read
Ashwin saaksha tv

ಇಂಡೋ – ಆಫ್ರಿಕಾ ಟೆಸ್ಟ್ ಪಂದ್ಯ | ಸಿರಾಜ್ ಇಂಜೂರಿ ಬಗ್ಗೆ ಅಶ್ವಿನ್ ಪ್ರತಿಕ್ರಿಯೆ Ashwin saaksha tv

ಮೊಹಮ್ಮದ್ ಸಿರಾಜ್ ಹಠವಾದಿ.. ಖಚಿತವಾಗಿ ಅವರು ಮತ್ತೆ ಮೈದಾನಕ್ಕೆ ವಾಪಸ್ ಆಗುತ್ತಾರೆ ಎಂದು ಟೀಂ ಇಂಡಿಯಾದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸದ್ಯ ವೈದ್ಯಕೀಯ ಮೇಲ್ವಿಚಾರಣೆಯಲ್ಲಿರುವ ಸಿರಾಜ್ ಅವರು ಚೇತರಿಸಿಕೊಂಡು ಆಟವನ್ನು ಮುಂದುವರೆಸುತ್ತಾರೆ ಎಂದು ಅಶ್ವಿನ್ ಹೇಳಿದ್ದಾರೆ.

ವಾಂಡರರ್ಸ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ನ ಮೊದಲ ದಿನದ ಅಂಗವಾಗಿ ಸಿರಾಜ್ ಮೊಣಕಾಲು ನೋವಿನಿಂದಾಗಿ ಬಳಲಿದರು.

17ನೇ ಓವರ್‌ ನಲ್ಲಿ ಐದನೇ ಎಸೆತವನ್ನು ಎಸೆದ ಸಿರಾಜ್ ಮೊಣಕಾಲಿನ ನೋವಿಗೆ ಒಳಗಾದರು. ಕೂಡಲೇ ಫಿಸಿಯೋ ಮೈದಾನಕ್ಕೆ ಆಗಮಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದರು.

Ashwin saaksha tv

ಆದರೂ ನೋವು ತೀವ್ರವಾಗುತ್ತಿದ್ದಂತೆ ಸಿರಾಜ್ ಮೈದಾನದಿಂದ ನಿರ್ಗಮಿಸಿದರು… ಶಾರ್ದೂಲ್ ಠಾಕೂರ್ ಓವರ್ ಪೂರ್ಣಗೊಳಿಸಿದರು.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಶ್ವಿನ್, ”ಸಿರಾಜ್ ಗಾಯದ ಬಗ್ಗೆ ಮಾತನಾಡಬಹುದೇ ಎಂದು ನಮ್ಮ ಮೀಡಿಯಾ ಮ್ಯಾನೇಜರ್ ಆನಂದ್ ಅವರನ್ನು ಕೇಳಿದ್ದೆ. ಅವರು ಓಕೆ ಎಂದಿದ್ದಾರೆ. ಸಿರಾಜ್ ಈಗ ವೈದ್ಯಕೀಯ ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿದ್ದಾರೆ.

ಸಿರಾಜ್ ಅವರ ಪರಿಶ್ರಮ, ಸಂಕಲ್ಪ ದೊಡ್ಡದು. ಅವರು ಹಿಂತಿರುಗುವುದು ಮಾತ್ರವಲ್ಲ, ಅವರು ತಮ್ಮ ಅತ್ಯುತ್ತಮ ಪ್ರದರ್ಶನವನ್ನುನೀಡುತ್ತಾರೆ ಎಂದು ಅಶ್ವಿನ್ ಹೇಳಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd