ಇಸ್ಲಾಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಇಂಡೋನೇಷ್ಯಾ ಸಂಸ್ಥಾಪಕ ಪಿತಾಮಹರ ಪುತ್ರಿ..!
ಇಂಡೋನೇಷ್ಯಾ : ಇಂಡೋನೇಷ್ಯಾದ ಸಂಸ್ಥಾಪಕ ಮತ್ತು ಮೊದಲ ಅಧ್ಯಕ್ಷ ಸುಕರ್ಣೋ ಅವರ ಪುತ್ರಿ ಸುಕ್ಮಾವತಿ ಸುಕರ್ಣೋ ಅವರು ಇಸ್ಲಾಂ ಧರ್ಮವನ್ನ ತೊರೆದು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವುದಾಗಿ ಘೋಷಣೆ ಮಾಡಿದ್ದಾರೆ. ಸುಕರ್ಣೋ ಅವರ 3ನೇ ಮಗಳಾಗಿರುವ ಸುಕ್ಮಾವತಿ ಅವರು ಇಂಡೋನೇಷ್ಯಾ ನ್ಯಾಷನಲ್ ಪಾರ್ಟಿ ಸಂಸ್ಥಾಪಕಿಯೂ ಆಗಿದ್ದಾರೆ. ಇವರು ತಮ್ಮ ಅಜ್ಜಿ ದಿವಂಗತ ಇಡಾ ನ್ಯೋಮನ್ ರೈ ಶ್ರಿಂಬೆನ್ ಅವರಿಂದ ಪ್ರಭಾವಿತರಾಗಿದ್ದು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಅಕ್ಟೋಬರ್ 26ರಂದು ಸುಕ್ಮಾವತಿಯವರು ಅಧಿಕೃತವಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲಿದ್ದಾರೆ. ಈ ನಿಟ್ಟಿನಲ್ಲಿ ಬಾಲಿ ಅಗುಂಗ್ ಸಿಂಗರಾಜದಲ್ಲಿ ಸುಧಿ ವಡಾನಿಯು ಹೆಸರಿನ ಹಿಂದೂ ಸಮಾರಂಭ ಆಯೋಜಿಸಲಾಗಿದ್ದು, ಇಲ್ಲೇ ಅವರು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲಿದ್ದಾರೆ ಎನ್ನಲಾಗಿದೆ.
ಅಲ್ಲದೇ ಅಧಿಕೃತ ಮತಾಂತರ ಹೊಂದುವ ದಿನದಂದೇ ಸುಕ್ಮಾವತಿ ತಮ್ಮ 70 ನೇ ಹುಟ್ಟುಹಬ್ಬವನ್ನೂ ಆಚರಿಸಲಿದ್ದಾರೆ. ಸುಕ್ಮಾವತಿ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವ ನಿರ್ಧಾರಕ್ಕೆ ಸುಕ್ಮಾವತಿ ಸಹೋದರರು ಮತ್ತು ಸಹೋದರಿ, ಮಾಜಿ ಅಧ್ಯಕ್ಷೆ ಮೇಗಾವತಿ ಸೂಕರ್ಣ ಪುತ್ರಿ, ಗುಂಟೂರು ಸೂಕರ್ಣ ಪುತ್ರ ಮತ್ತು ಗುರು ಸೂಕರ್ಣ ಪುತ್ರ ಬೆಂಬಲ ನೀಡಿರೋದಾಗಿ ತಿಳಿದುಬಂದಿದೆ.