Indonesia | ನೆಚ್ಚಿನ ತಂಡ ಸೋತಿದ್ದಕ್ಕೆ ಅಭಿಮಾನಿಗಳ ಗಲಭೆ – 127 ಮಂದಿ ಸಾವು
ಜಕಾರ್ತ : ಫುಟ್ ಬಾಲ್ ಪಂದ್ಯವೊಂದರಲ್ಲಿ ಗಲಭೆ ಸಂಭವಿಸಿ ಕನಿಷ್ಠ 127 ಮಂದಿ ಮೃತಪಟ್ಟಿರುವ ಘಟನೆ ಇಂಡೋನೇಷ್ಯಾದ ಪೂರ್ವ ಜಾವಾದ ಪ್ರಾಂತ್ಯದ ಮಲಾಂಗ್ ನಲ್ಲಿ ನಡೆದಿದೆ.
ಇಲ್ಲಿನ ಕಂಜುರುಹಾನ್ ಕ್ರೀಡಾಂಗಣದಲ್ಲಿ ಫುಟ್ ಬಾಲ್ ಪಂದ್ಯವನ್ನು ಆಯೋಜನೆ ಮಾಡಲಾಗಿತ್ತು.
ಈ ಪಂದ್ಯದಲ್ಲಿ ತವರು ತಂಡವಾದ ಅರೆಮಾ ಫುಟ್ ಬಾಲ್ ಕ್ಲಬ್ ಅನ್ನು ಪ್ರತಿಸ್ಪರ್ಧಿ ತಂಡ ಪರ್ಸೆಬಾಯಾ ಸೋಲಿಸಿತು.

ಇದರಿಂದ ಬೇಸರಗೊಂಡ ಅರೆಮಾ ಫುಟ್ ಬಾಲ್ ಕ್ಲಬ್ ತಂಡದ ಅಭಿಮಾನಿಗಳು ಪಿಚ್ ಗೆ ನುಗ್ಗಿ ಸಾಮೂಹಿಕ ಗಲಭೆ ಸೃಷ್ಠಿಸಿದ್ದಾರೆ. ಈ ವೇಳೆ ಪೊಲೀಸರು ಸೇರಿದಂತೆ 127 ಮಂದಿ ಕೊನೆಯುಸಿರೆಳೆದಿದ್ದಾರೆ.
ಇತ್ತ ಜನರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ.