ಇಂಡೋನೇಷ್ಯಾ ಬ್ಯಾಡ್ಮಿಂಟನ್ ಟೂರ್ನಿ : ಲಕ್ಷ್ಯ ಸೇನ್ ಗೆ ಸೋಲು

1 min read
lakshya-sen saaksha tv

ಇಂಡೋನೇಷ್ಯಾ ಬ್ಯಾಡ್ಮಿಂಟನ್ ಟೂರ್ನಿ : ಲಕ್ಷ್ಯ ಸೇನ್ ಗೆ ಸೋಲು lakshya-sen saaksha tv

ಬಾಲಿ: ಭಾರತದ ಭರವಸೆಯ ಆಟಗಾರ ಲಕ್ಷ್ಯ ಸೇನ್ ಅವರು ಇಲ್ಲಿ ನಡೆಯುತ್ತಿರುವ ಇಂಡೋನೇಷ್ಯಾ ಬ್ಯಾಡ್ಮಿಂಟನ್ ಟೂರ್ನಿಯ ಪುರಷರ ಸಿಂಗಲ್ಸ್ ನಲ್ಲಿ ನಿರಾಸೆ ಅನುಭವಿಸಿದ್ದಾರೆ.

ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಲಕ್ಷ್ಯ 21-23, 15-21 ರಿಂದ ಜಪಾನ್ ನ ಕೆಂಟೋ ಮೊಮೋಟೊ ವಿರುದ್ಧ ಸೋಲು ಕಂಡರು ಆಘಾತ ಅನುಭವಿಸಿದರು.

ಪುರಷರ ಡಬಲ್ಸ್ ಪಂದ್ಯದಲ್ಲಿ ಎಂ.ಆರ್ ಅರ್ಜುನ್ ಮತ್ತು ದೃವ್ ಕಪಿಲ್ ಜೋಡಿ 20-22, 13-21 ರಿಂದ ದಕ್ಷಿಣ ಕೋರಿಯಾ ಜೋಡಿ ವಿರುದ್ಧ ಸೋಲು ಕಂಡಿತು.

lakshya-sen saaksha tv

ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಪರುಪಳ್ಳಿ ಕಶ್ಯಪ್ 11-21, 14-21 ರಿಂದ ಲೋ ಕಿನ್ ಯುವ ವಿರುದ್ಧ, ಮಿಶ್ರ ಡಬಲ್ಸ್ ನಲ್ಲಿ ವೆಂಕಟ್ ಗೌರವ್ ಪ್ರಸಾದ್ ಮತ್ತು ಜೂಹಿ ದೇವಾಂಗನ್ ಜೋಡಿ ಪರಾಜಯ ಕಂಡಿತು.

ಬುಧವಾರ ನಡೆಯಲಿರುವ ಮಹಿಳೆಯರ ಸಿಂಗಲ್ಸ್ ನಲ್ಲಿ ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ ಸಿಂಧು, ಭರವಸೆಯ ಆಟಗಾರ ಕೆ.ಶ್ರೀಕಾಂತ್ ಸೇರಿದಂತೆ ಸ್ಟಾರ್ ಆಟಗಾರರು ಅಖಾಡ ಪ್ರವೇಶಿಸಲಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd