ಆ ಕಾಡು ಮಹಿಳೆಯರಿಗೆ ಮಾತ್ರ.. ನಗ್ನವಾದರೇ ಮಾತ್ರ ಪ್ರವೇಶ.. ಪುರುಷರು ಬಂದರೆ ಗೋವಿಂದಾ!
ಇಂಡೋನೇಷ್ಯಾದ ಪಪುವಾ ಪ್ರಾಂತ್ಯದ ಜೈಪುರದಲ್ಲಿರುವ ಅರಣ್ಯಕ್ಕೆ ಒಂದು ವಿಶೇಷತೆ ಇದೆ. ಆ ಅರಣ್ಯಕ್ಕೆ ಮಹಿಳೆಯರಿಗೆ ಮಾತ್ರ ಪ್ರವೇಶ. ಆ ಕಾಡಿಗೆ ಯಾರಾದರೂ ಪುರುಷರು ಹೆಜ್ಜೆ ಇಟ್ಟರೇ ಅಲ್ಲಿನ ಮಹಿಳೆಯರು ಸಹಿಸುವುದಿಲ್ಲ. ಹಾಗಾದ್ರೆ ಮಹಿಳೆಯರು ಅಲ್ಲಿಗೆ ಏಕೆ ಹೋಗುತ್ತಾರೆ? ಅಲ್ಲಿ ಪ್ರವೇಶಿಸುವ ಪುರುಷರಿಗೆ ಯಾವ ಶಿಕ್ಷೆ ಬೀಳುತ್ತೆ? ಈ ವಿಚಾರವಾಗಿ ಅಲ್ಲಿನವರು ಏನ್ ಹೇಳಿದ್ದಾರೆ..? ಮುಂದೆ ಓದಿ
ಬಿಬಿಸಿ ಇಂಡೋನೇಷ್ಯಾದೊಂದಿಗೆ ಮಾತನಾಡಿದ ಆಡ್ರಿಯಾನಾ ಮಾರೌಡ್, ತುಂಬಾ ವರ್ಷಗಳಿಂದ ಈ ಅರಣ್ಯ ಮಹಿಳೆಯರಿಗೆ ಸಿಮೀತವಾಗಿದೆ. ಇಲ್ಲಿಗೆ ಭೇಟಿ ನೀಡಬೇಕಿದ್ದರೇ ಉಡುಗೆ ತೊಡುವಂತಿಲ್ಲ. ಅಂದ್ರೆ ನಗ್ನವಾಗಿ ಭೇಟಿ ನೀಡಬೇಕು. ಮಹಿಳೆಯರು ಇಲ್ಲಿ ಮುಕ್ತವಾಗಿ ಸಂಚರಿಸುತ್ತಾರೆ. ಈ ಕಾಡು ಇಲ್ಲದೆ ನಮಗೆ ಜೀವನವಿಲ್ಲ.
ನಾವು ಪ್ರತಿದಿನ ಇಲ್ಲಿಗೆ ಬರುತ್ತೇವೆ. ನಮಗೆ ಬೇಕಾದುದನ್ನು ನಾವು ತೆಗೆದುಕೊಳ್ಳುತ್ತೇವೆ. ಪುರುಷನಾಗಿ ಯಾರಾದರೂ ಇಲ್ಲಿಗೆ ಪ್ರವೇಶಿಸಿದರೆ.. ಆತ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ಸುಮಾರು 69 ಅಮೆರಿಕಾ ಡಾಲರ್ ದಂಡವನ್ನು ಪಾವತಿಸಬೇಕಾಗುತ್ತದೆ. ವ್ಯಕ್ತಿಯು ಈ ಮೊತ್ತವನ್ನು ನಯಗೊಳಿಸಿದ ಕಲ್ಲುಗಳ ರೂಪದಲ್ಲಿ ಪಾವತಿಸಬೇಕು. ವಾಸ್ತವವಾಗಿ ನಾವು ಯಾವುದೇ ಹಿಸುಕುವಿಕೆಯನ್ನು ಇಲ್ಲಿ ಕೇಳಿದರೆ ತಕ್ಷಣವೇ ನಾವು ಎಚ್ಚರಗೊಳ್ಳುತ್ತೇವೆ. ಬೇರೆ ಯಾರಾದರೂ ಇಲ್ಲಿದ್ದರೆ, ಅವರು ನಮ್ಮ ಧ್ವನಿಯನ್ನು ಕೇಳಿದ ಕೂಡಲೇ ಹೊರಟು ಹೋಗುತ್ತಾರೆ ಎಂದು ವಿವರಿಸಿದ್ದಾರೆ.
ಇನ್ನು ಮತ್ತೋರ್ವ ಮಹಿಳೆ ಈ ಬಗ್ಗೆ ಮಾತನಾಡಿ, ಸಿಂಪಿ ಸಂಗ್ರಹಿಸಲು ತಾವು ಇಲ್ಲಿಗೆ ಬರುವುದಾಗಿ ತಿಳಿಸಿದ್ದಾರೆ. ನಾವು ನಮ್ಮ ಸ್ನೇಹಿತೆರನ್ನು ಸಹ ಇಲ್ಲಿಗೆ ಆಹ್ವಾನಿಸುತ್ತೇವೆ.ಅವರು ದೋಣಿ ಮೂಲಕ ಇಲ್ಲಿಗೆ ಬರುತ್ತಾರೆ. ನಾವು ಕಾಡಿನಲ್ಲಿದ್ದಾಗ ನಮ್ಮಿಷ್ಟದಂತೆ ಇರುತ್ತೇವೆ. ಒಬ್ಬ ಗಂಡು ಕೂಡ ಇಲ್ಲಿಇರಲ್ಲ. ಆದ್ದರಿಂದ ನಮಗೆ ಬೇಕಾದ ರೀತಿಯಲ್ಲಿ ನಾವಿರುತ್ತೇವೆ ಎಂದಿದ್ದಾರೆ.
ಇನ್ನು ಇಲ್ಲಿನ ಮಹಿಳೆಯರು ಸಮುದ್ರದಲ್ಲಿ ಸಂಗ್ರಹಿಸಿದ ಸಿಂಪಿಗಳನ್ನು ಹತ್ತಿರದ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ಮೂಲಕ ತಮ್ಮ ಜೀವನವನ್ನು ಸಾಗಿಸಿರುತ್ತಾರೆ.