ಬೆಂಗಳೂರು : ನಿಮ್ಮ ಅಕ್ಕ ‘ಗೌರಿ ಲಂಕೇಶ್ ಡ್ರಗ್ ಅಡಿಕ್ಟ್ ಆಗಿದ್ದರು. ಆಗ ನೀವು ಎಲ್ಲಿ ಹೋಗಿದ್ರೀ ಎಂಬ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿಕೆಗೆ ಇಂದ್ರಜಿತ್ ಲಂಕೇಶ್ “ನನ್ನ ಅಕ್ಕ ಪತ್ರಕರ್ತೆ ಗೌರಿ ಲಂಕೇಶ್ ಸಾವಿನ ಕುರಿತು ಹೇಳಿಕೆ ನೀಡಿರುವುದು ತುಂಬಾ ನೋವು ತಂದಿದೆ ಎಂದು ಕಣ್ಣೀರು ಹಾಕಿದ್ದಾರೆ.
ಇಂದು ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ಕ ಗೌರಿ ಲಂಕೇಶ್ ಅವರ ಬಗ್ಗೆ ಹೇಳಿಕೆ ನೀಡಿರುವುದು ತುಂಬಾ ದುಃಖ ತಂದಿದೆ. ಅವರ ತತ್ವ-ಸಿದ್ಧಾಂತ ಬೇರೆ ಇತ್ತು. ಅವರದ್ದು ಸೈದ್ಧಾಂತಿಕ ಕೊಲೆ. ಈ ಹಿಂದೆ ಒಬ್ಬ ನಟನ ಕುರಿತು ನಾನು ಹೇಳಿಕೆ ನೀಡಿದೆ. ಆದ್ರೆ ಸಾವಿನ ಬಳಿಕ ಈ ರೀತಿ ಹೇಳಬಾರದು ಎಂದು ನನ್ನ ಹೇಳಿಕೆಯನ್ನು ವಾಪಸ್ ತೆಗೆದುಕೊಂಡಿದ್ದೇನೆ. ನಮ್ಮಕ್ಕನ ಸಾವು ಸಾವಲ್ಲವೇ, ನಮಗೂ ತಾಯಿ ಇಲ್ಲವೇ, ಅವರು ಕ್ಯಾನ್ಸರ್ ರೋಗಿ, ಅವರಿಗೆ ನೋವಾಗುವುದಿಲ್ಲವೇ, ನಮ್ಮಕ್ಕನನ್ನು ಸಿದ್ಧಾಂತ ದೃಷ್ಟಿಯಿಂದ ಹಲವರು ಒಪ್ಪದಿರಬಹುದು. ಆದರೆ ಒಂದು ಸಾವು ತರುವಷ್ಟೂ ಸಿದ್ಧಾಂತ ಕ್ರೂರಿಯಾ ಎಂದು ಪ್ರಮೋದ್ ಮುತಾಲಿಕ್ ಹೆಸರನ್ನು ಉಲ್ಲೇಖಿಸದೆ ತಿರುಗೇಟು ನೀಡಿದ್ದಾರೆ.
ಸಿಸಿಬಿಗೆ ಸಾಕ್ಷ್ಯಾಧಾರಗಳನ್ನು ಏನೇನು ಕೊಟ್ಟಿದ್ದೇನೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ತನಿಖೆಗೆ ಸಹಾಯವಾಗಲು ಸಾಕಷ್ಟು ದಾಖಲೆ ಹಾಗೂ ಮಾಹಿತಿಗಳನ್ನು ನೀಡಿದ್ದೇನೆ. ಪೂರಕವಾಗಿ ಇನ್ನೂ ಹೆಚ್ಚಿನ ಮಾಹಿತಿ ಬೇಕಿರುವುದರಿಂದ ಇಂದು ಕರೆದಿದ್ದಾರೆ. ಹೀಗಾಗಿ ಮಾಹಿತಿ ನೀಡಲು, ಸಾಕ್ಷ್ಯಾಧಾರ ನೀಡಲು ತೆರಳುತ್ತಿದ್ದೇನೆ ಎಂದರು.
ಸಿನಿಮಾ ಇಂಡಸ್ಟ್ರಿಗೆ ಕೆಟ್ಟ ಹೆಸರು ಬರುತ್ತದೆ ಎಂಬು ಹೇಳಲಾಗುತ್ತಿದೆ. ಆದರೆ ಈ ಹಿಂದೆ ಕೆಟ್ಟ ಹೆಸರು ಬರುತ್ತಿತ್ತು. ಇದನ್ನು ಸರಿ ಪಡಿಸುವ ಉದ್ದೇಶದಿಂದ, ಚಿತ್ರರಂಗವನ್ನು ಸ್ವಚ್ಛಗೊಳಿಸಬೇಕಿದೆ. ಇದರಲ್ಲಿ ಇತ್ತೀಚಿನ ನಟ, ನಟಿಯರು ಭಾಗಿಯಾಗಿದ್ದಾರೆ. ಈ ಕುರಿತು ಫಿಲ್ಮ್ ಚೇಂಬರ್ ಎಲ್ಲ ನಟ, ನಟಿಯರನ್ನು ಕರೆಸಿ ಎಚ್ಚರಿಕೆ, ಸಲಹೆ ನೀಡಿದ್ದರೆ ಈ ಮಟ್ಟಕ್ಕೆ ದೊಡ್ಡದಾಗುತ್ತಿರಲಿಲ್ಲ. ಇದಾವುದನ್ನೂ ವಾಣಿಜ್ಯ ಮಂಡಳಿ ಮಾಡಲಿಲ್ಲ. ಈ ರೀತಿ ಸ್ವಚ್ಛವಾಗುವುದರಿಂದ ಮುಂದೆ ಬರುವ ಯುವ, ನಟ, ನಟಿಯರಿಗೆ ಸಹಕಾರಿಯಾಗಲಿದೆ. ಹನಿಟ್ರ್ಯಾಪ್ ವಿಚಾರ ಬಂದಾಗಲೂ ಯಾರೂ ಕರೆಸಿ ಮಾತನಾಡಲಿಲ್ಲ ಎಂದು ಇಂದ್ರಜಿತ್ ದೂರಿದ್ದಾರೆ.
ಕೇರಳ ಮತ್ತು ಕೊಳ್ಳೇಗಾಲದ ಮಹಾ ವಶೀಕರಣ ಮಾಂತ್ರಿಕರು ಮತ್ತು ತಾಂತ್ರಿಕರು ಪಂಡಿತ್ ಸಂತೋಷ್ ಆಚಾರ್ಯ ಗುರೂಜಿ
ಇವರು ನಿಮ್ಮ ಸಮಸ್ಯೆಗಳಾದ ವಶೀಕರಣ, ವಿವಾಹ, ಸಂತಾನ, ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಹೋಗಿದ್ರೆ, ಇಷ್ಟ ಪಟ್ಟ ಪುರುಷ ಮತ್ತು ಸ್ತ್ರಿ ನಿಮ್ಮ ವಶ ಆಗಬೇಕಾದರೆ ಮತ್ತು ಲೈಂಗಿಕ ಸಮಸ್ಯೆ, ಸಾಲಬಾಧೆ, ಗುಪ್ತ ಸಮಸ್ಯೆಗಳಿಗೆ ಕೇರಳದ ಭದ್ರಕಾಳಿ ದೇವಿ ಶಕ್ತಿಯಿಂದ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ದೂರವಾಣಿ ಸಂಖ್ಯೆ 9901005534
ಕರೆ ಅಥವಾ ವಾಟ್ಸಾಪ್ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.








