ದರ್ಶನ್ ಕ್ಷಮೆ ಕೇಳದೇ ಹೀಗೆ ಮುಂದುವರೆಸಿದ್ರೆ ಇನ್ನಷ್ಟು ತೇಜೋವಧೆ – ಇಂದ್ರಜಿತ್ ಲಂಕೇಶ್
ಬೆಂಗಳೂರು: ದರ್ಶನ್ ಸದ್ಯ ಕಳೆದೊಂದು ವಾರದಿಂದಲೂ ಸುದ್ದಿಯಲ್ಲಿಯೇ ಇದ್ದಾರೆ.. ಮೊದಲಿಗೆ 25 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಸುದ್ದಿಯಲ್ಲಿದ್ದ ದರ್ಶನ್ ಸುದ್ದಿಗೋಷ್ಠಿಗಳನ್ನೂ ನಡೆಸಿ ಅನೇಕ ವಿಚಾರಗಳನ್ನ ತಿಳಿಸಿದ್ದರು.. ಇದರ ಬೆನ್ನಲ್ಲೇ ದರ್ಶನ್ ಮತ್ತೊಂದು ವಿಚಾರಕ್ಕೆ ಭಾರೀ ಸುದ್ದಿಯಲ್ಲಿದ್ದಾರೆ.. ಮೈಸೂರಿನಲ್ಲಿನ ಸಂದೇಶ್ ಹೋಟೆಲ್ ನಲ್ಲಿ ಸಪ್ಲೈಯರ್ ಗೆ ಹೊಡೆದ ಬಗ್ಗೆ ನಿರ್ದೇಶಕ, ನಿರ್ಮಾಪಕ ಇಂದ್ರಜಿತ್ ಲಂಕೇಶ್ ವಿರುದ್ಧ ಗಂಭೀರವಾಗಿ ಆರೋಪ ಮಾಡಿದ್ದಾರೆ..
ಪೊಲೀಸರು ಮೈಸೂರಿನ ಹೊಟೆಲ್ ಗೂ ತೆರಳಿ ಸಪ್ಲೈಯರ್ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.. ಈ ನಡುವೆ ‘ದಾಸ’ ಅಭಿಮಾನಿಗಳು ಆಕ್ರೋಶಗೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಇಂದ್ರಜಿತ್ ಮನೆಗೆ ಪೊಲೀಸರು ಭದ್ರತೆ ಒದಗಿಸಿದ್ದಾರೆ.. ಇದೀಗ ಇಂದ್ರಜಿತ್ ಮಾತನಾಡಿ ದರ್ಶನ್ ಕ್ಷಮೆ ಕೇಳಲಿ, ಮುಂದುವರಿಸಿದ್ರೆ ಹೆಚ್ಚಿನ ತೇಜೋವಧೆ ಆಗುತ್ತೆ ಎಂದಿದ್ದಾರೆ. ಈಗಲೇ ದರ್ಶನ್ ಕ್ಷಮೆ ಕೇಳಿದರೆ ಒಳ್ಳೆಯವರಾಗುತ್ತೀರಿ. ಘಟನೆ ನಡೆದಿರುವ ಬಗ್ಗೆ ಕ್ಷಮೆ ಕೇಳಿ ನ್ಯಾಯ ಒದಗಿಸಿಕೊಡಿ ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
ಡಿ ಬಾಸ್ ವಿರುದ್ಧ ಆರೋಪ : ಇಂದ್ರಜಿತ್ ಮನೆಗೆ ಭದ್ರತೆ
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪೊಲೀಸ್ ಆಫೀಸರ್ ಮುಂದೆ ಎಲ್ಲವನ್ನೂ ಹೇಳಲು ಸಿದ್ಧ. ನಾನು ವೈಯಕ್ತಿಕವಾಗಿ ಮುಂದೆ ಬಂದು ಮಾತನಾಡಿದ್ದೇನೆ. ಈ ಪ್ರಕರಣವನ್ನು ಮತ್ತಷ್ಟು ಮುಂದುವರಿಸುವುದು ಬೇಡ. ಮತ್ತೆ ಮುಂದುವರಿಸಿದರೆ ಇನ್ನು ಹೆಚ್ಚಿನ ತೇಜೋವಧೆಯಾಗಲಿದೆ. ಸಂದೇಶ್, ಸಂದೇಶ್ ನಾಗರಾಜ್ ಅವರಲ್ಲಿ ಕ್ಷಮೆ ಕೇಳಿದ್ರೆ ಏನ್ ಕಳ್ಕೋತ್ತೀರಾ ಎಂದು ದರ್ಶನ್ ಅವರನ್ನು ಇಂದ್ರಜಿತ್ ಪ್ರಶ್ನಿಸಿದ್ದಾರೆ.
ಮೇರು ನಟ ಹೇಗಿರಬೇಕು ಎಂಬುದನ್ನು ರಾಜ್ ಕುಮಾರ್ ನೋಡಿ ಕಲಿಯಬೇಕು. ನಿಮ್ಮ ಪ್ರತಿಯೊಂದು ಹೆಜ್ಜೆಯೂ ಮುಖ್ಯವಾಗುತ್ತದೆ. ಸಾಮಾನ್ಯರ ವೈಯಕ್ತಿಕ ಜೀವನ ಫೋಕಸ್ ಆಗುವುದಿಲ್ಲ. ನಿಮ್ಮ ಜೀವನ ಹೆಚ್ಚು ಫೋಕಸ್ ಆಗಲಿದೆ. ಹಾಗಾಗಿ ನಾನು ಮಾತನಾಡುತ್ತೀದ್ದೇನೆ ಎಂದು ತಿಳಿಸಿದರು. ಅಲ್ಲದೇ ನನ್ನ ಮಾತುಗಳಿಗೆ ನಾನು ಬದ್ಧನಾಗಿದ್ದೇನೆ. ಸಮಾಜದ ಕಾಳಜಿಯಿಂದ ಮಾತನಾಡುತ್ತಿದ್ದೇನೆ. ಸಾಮಾನ್ಯ ಸಪ್ಲೈಯರಿಗೆ ಅನ್ಯಾಯವಾಗಿದೆ. ಅವರಿಗೆ ನ್ಯಾಯ ಕೊಡಿಸಲು ಮುಂದೆ ಬಂದಿದ್ದೇನೆ ಎಂದರು.
ಇದು ಜಾತಿ ವಿಷಯ ಅಲ್ಲ. ಶೋಷಿತನಿಗೆ ಅನ್ಯಾಯವಾಗಿದೆ. ಆಡಿಯೋದಲ್ಲಿ ಹೋಟೆಲ್ ಮಾಲೀಕ ತಪ್ಪೊಪ್ಪಿಕೊಂಡಿದ್ದಾರೆ. ಅವರು ವಿಸ್ತಾರವಾಗಿ ಮಾತಾಡಿದ್ದು, ಆಡಿಯೋದಲ್ಲಿ ಇರುವ ಧ್ವನಿ ನನ್ನದೆ. ಸಂದೇಶ್ ಜೊತೆ ಮಾತನಾಡಿದ್ದು ನಾನೇ. ಕೇವಲ ಅವರೊಬ್ಬರ ಜೊತೆಯಲ್ಲ ಅಲ್ಲಿನ ಸಿಬ್ಬಂದಿ ಜೊತೆಯೂ ಸಹ ಮಾತನಾಡಿದ್ದೇನೆ ಎಂದು ಹೇಳಿದರು.
ಮೈಸೂರಿನ ಮಾಧ್ಯಮದ ಮೂಲಕ ಹಲವು ವಿಚಾರದಲ್ಲಿ ನೊಂದವರು ನನಗೆ ಕರೆ ಮಾಡಿ ಮಾತನಾಡಿದ್ದಾರೆ. ನ್ಯಾಯಲಯದ ಬಗ್ಗೆ ಸಂಪೂರ್ಣ ನಂಬಿಕೆ ಇದೆ. ದರ್ಶನ್‍ನಿಂದ ಯಾವುದೇ ಕಾಲ್ ಬಂದಿಲ್ಲ. ಯಾರಿಂದಲೂ ಬೆದರಿಕೆ ಕರೆ ಬಂದಿಲ್ಲ. ರಾಜಿ ಸಂಬಂಧ ಯಾವುದೋ ಕಾಲ್ ಬಂದಿತ್ತು ಎಂದು ತಿಳಿಸಿದರು. ಕುಮಾರಸ್ವಾಮಿ ಜೊತೆಗೆ ಇದ್ದ ಫೋಟೋದ ಬಗ್ಗೆ ಪ್ರತಿಕ್ರಿಯಿಸಿ, ಹಲವಾರು ಬಾರಿ ನಾನು ಕುಮಾರಸ್ವಾಮಿ ಜೊತೆ ಭೇಟಿ ಮಾಡಿದ್ದೇನೆ. ಆ ಫೋಟೋ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ವೇಳೆಯ ಫೋಟೋ ಎಂದು ಸ್ಪಷ್ಟನೆ ನೀಡಿದರು.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.