ಬಜಾಜ್ ಗ್ರೂಪ್‌ನ ಮಾಜಿ ಚೇರ್ಮನ್ ರಾಹುಲ್ ಬಜಾಜ್ ನಿಧನ
ಖ್ಯಾತ ಕೈಗಾರಿಕೋದ್ಯಮಿ ಮತ್ತು ಬಜಾಜ್ ಗ್ರೂಪ್‌ನ ಮಾಜಿ ಚೇರ್ಮನ್ ರಾಹುಲ್ ಬಜಾಜ್ ಫೆಬ್ರವರಿ 12 ರಂದು ನ್ಯೂಮೋನಿಯಾ ಮತ್ತು ಹೃದಯ ಸಮಸ್ಸೆಯಿಂದ ಪುಣೆಯಲ್ಲಿ ನಿಧನರಾಗಿದ್ದಾರೆ..
ಕಳೆದ ಒಂದು ತಿಂಗಳಿನಿಂದ ರಾಹುಲ್ ಬಜಾಜ್ ಅವರು ನ್ಯುಮೋನಿಯಾ ಮತ್ತು ಹೃದಯ ಸಮಸ್ಯೆಯಿಂದ ಬಳಲುತ್ತಿದ್ದರು. ಕಳೆದ ಒಂದು ತಿಂಗಳಿನಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ರೂಬಿ ಹಾಲ್ ಕ್ಲಿನಿಕ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಪುರವೇಜ್ ಗ್ರಾಂಟ್ ಹೇಳಿದ್ದಾರೆ. ಇಂದು ಮಧ್ಯಾಹ್ನ 2.30ಕ್ಕೆ ರಾಹುಲ್ ಬಜಾಜ್ ಕೊನೆಯುಸಿರೆಳೆದಿದ್ದಾರೆ.
ಜೂನ್ 10, 1938 ರಂದು ಜನಿಸಿದ ರಾಹುಲ್ ಬಜಾಜ್ ಅವರು 40 ವರ್ಷಗಳ ಕಾಲ ಬಜಾಜ್ ಗ್ರೂಪ್‌ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ರಾಹುಲ್ ಬಜಾಜ್ ಕಳೆದ ವರ್ಷ ಏಪ್ರಿಲ್‌ನಲ್ಲಿ ಬಜಾಜ್ ಆಟೋ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಮತ್ತು ಪ್ರಸ್ತುತ ಸಂಸ್ಥೆಯ ಎಮೆರಿಟಸ್ ಅಧ್ಯಕ್ಷರಾಗಿದ್ದರು. Industrialist Rahul Bajaj passes away at 83
ರಾಹುಲ್ ಬಜಾಜ್ ಅವರಿಗೆ 2001 ರಲ್ಲಿ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಭೂಷಣವನ್ನು ನೀಡಲಾಗಿದೆ. ಬಜಾಜ್ ಅವರು ರಾಜ್ಯಸಭಾ ಸಂಸದರಾಗಿಯೂ ಸೇವೆ ಸಲ್ಲಿಸಿದರು.