ನವದೆಹಲಿ: ದೇಶದಲ್ಲಿ ಕೊರೊನಾ ಆರ್ಭಟ ಮುಂದುವರಿದಿದ್ದು, ಈಗ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 2000 ಗಡಿ ದಾಟಿದೆ. ನಿನ್ನೆ ಒಂದೇ ದಿನ 386 ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಇಲ್ಲಿವರೆಗೆ ದೇಶದಲ್ಲಿ 2014 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಇದ್ರಲ್ಲಿ 1789 ಮಂದಿ ಇನ್ನೂ ಚಿಕಿತ್ಸೆ ಪಡೆಯುತ್ತಿದ್ರೆ, 169 ಜನರು ಸೋಂಕಿನಿAದ ಗುಣಮುಖರಾಗಿದ್ದಾರೆ. ಇದುವರೆಗೂ 55 ಮಂದಿ ವೈರಸ್ ಗೆ ಬಲಿಯಾಗಿದ್ದಾರೆ.
ಇನ್ನು ನಿನ್ನೆ ಒಂದೇ ದಿನ 386 ಪ್ರಕರಣಗಳು ಪತ್ತೆಯಾಗಲು ದೆಹಲಿಯ ನಿಜಾಮುದ್ದೀನ್ ಸಭೆ ಕಾರಣ ಎಂದು ಕೇಂದ್ರ ಆರೋಗ್ಯ ಇಲಾಖೆ ಆರೋಪಿಸಿದೆ. ಈ ಸಭೆಯಲ್ಲಿ ಭಾಗಿಯಾಗಿದ್ದ 154 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಅವರೆಲ್ಲಾ ದೇಶದ ಉದ್ದಗಲಕ್ಕೂ ಓಡಾಡಿದ್ದಾರೆ. ಹಾಗಾಗಿ, ಅವರ ಪತ್ತೆ ಸವಾಲಾಗಿದೆ. ಇದು ಸೋಂಕಿತರ ಸಂಖ್ಯೆ ಏರಿಕೆಯಾಗಲು ಕಾರಣ ಎಂದು ಆರೋಗ್ಯ ಇಲಾಖೆ ಹೇಳಿದೆ.








