ಅಮೆರಿಕದಲ್ಲಿನ ಉದ್ಯೋಗಿಗಳನ್ನು ಚಾರ್ಟರ್ಡ್ ವಿಮಾನದಲ್ಲಿ ಹಿಂದಕ್ಕೆ ಕರೆತಂದ ಇನ್ಫೋಸಿಸ್
ಬೆಂಗಳೂರು, ಜುಲೈ 7: ಕೊರೋನವೈರಸ್ ಬಿಕ್ಕಟ್ಟು ಮತ್ತು ವೀಸಾ ಸಮಸ್ಯೆಗಳಿಂದಾಗಿ ಅಮೆರಿಕದಲ್ಲಿ ಸಿಲುಕಿ ಹಾಕಿಕೊಂಡಿದ್ದ ಐಟಿ ದೈತ್ಯ ಇನ್ಫೋಸಿಸ್ ತನ್ನ ಕೆಲವು ಉದ್ಯೋಗಿಗಳನ್ನು ಮತ್ತು ಅವರ ಕುಟುಂಬಗಳನ್ನು ಭಾರತಕ್ಕೆ ವಾಪಸ್ ಕರೆ ತಂದಿದೆ. ಚಾರ್ಟರ್ಡ್ ವಿಮಾನದಲ್ಲಿ ಅವರನ್ನು ಹಿಂದಕ್ಕೆ ಕರೆ ತರಲಾಗಿದೆ.
200 ಮಂದಿ ಉದ್ಯೋಗಿಗಳನ್ನು ಮತ್ತು ಅವರ ಕುಟುಂಬ ಬೆಂಗಳೂರಿಗೆ ಸೋಮವಾರ ಮುಂಜಾನೆ ತಲುಪಿದ್ದಾರೆ. ಅವರು ಬೆಂಗಳೂರು ಅಥವಾ ಭಾರತದ ಇತರ ಸ್ಥಳಗಳಿಂದ ಇನ್ನು ಕೆಲಸ ಮಾಡಲಿದ್ದಾರೆ.
ಸ್ಯಾನ್ ಫ್ರಾನ್ಸಿಸ್ಕೋದಿಂದ ನೂರಾರು ಉದ್ಯೋಗಿಗಳು ಮತ್ತು ಅವರ ಕುಟುಂಬದವರು ಸೋಮವಾರ ಬೆಂಗಳೂರು ತಲುಪಿದ್ದಾರೆ ಎಂದು ಲಿಂಕ್ಡ್ ಇನ್ ಪೋಸ್ಟ್ ನಲ್ಲಿ ಇನ್ಫೊಸಿಸ್ ಲಾಜಿಸ್ಟಿಕ್ ಸಹಾಯಕ ಉಪಾಧ್ಯಕ್ಷ ಸಮೀರ್ ಗೋಸವಿ ಮಾಹಿತಿ ನೀಡಿದ್ದಾರೆ.