ಇನ್ಫೋಸಿಸ್ ಸುಧಾಮೂರ್ತಿ ಕಂಡು ಪುಳಕಗೊಂಡ ವಿದ್ಯಾರ್ಥಿಗಳು
ಬಾಗಲಕೋಟೆ: ರಾಜ್ಯದ ಪ್ರಸಿದ್ಧ ಶಕ್ತಿಪೀಠಗಳಲ್ಲಿ ಒಂದಾದ ಜಿಲ್ಲೆಯ ಬದಾಮಿ ಬಂನಶಂಕರಿ ದೇವಸ್ಥಾನಕ್ಕೆ ಇನ್ಫೋಸಿಸ್ ಸಂಸ್ಥಾಪಕಿ ಶ್ರೀಮತಿ ಸುಧಾಮೂರ್ತಿ ಭೇಟಿಕೊಟ್ಟಿದ್ದಾರೆ.
ಸೋಮವಾರ (ಮೇ 2) ರಂದು ಬನಶಂಕರಿ ದೇವಿಯ ದರ್ಶನ ಪಡೆದಿದ್ದಾರೆ. ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಸಾಮಾನ್ಯ ಭಕ್ತರಂತೆ ದೇಗುಲಕ್ಕೆ ಸುತ್ತು ಹಾಕಿದ್ದಾರೆ. ಇದೇ ದೇಗುಲಕ್ಕೆ ಬಂದಿದ್ದ ಸಿಂದಗಿ ಭಾಗದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಆಗಮಿಸಿದ್ದಾರೆ.
ಆದರೆ ಅವರು ಶ್ರೀಮತಿ ಸುಧಾಮೂರ್ತಿಯವರು ಸುತ್ತು ಹಾಕುತ್ತಿರುವುದು ಗಮನಿಸಿಲ್ಲ. ಆಗ ಶಿಕ್ಷಕರು ಸುಧಾಮೂರ್ತಿ ಅವರು ಬಂದಿದ್ದಾರೆಂದ ಮಕ್ಕಳಿಗೆ ತಿಳಿಸುತ್ತಿದ್ದಾರೆ. ವಿಷಯ ತಿಳಿದು ಪುಳಕಗೊಂಡ ವಿದ್ಯಾರ್ಥಿಗಳು ಅವರನ್ನು ಮಾತನಾಡಿಸಿದ್ದಾರೆ. ಆಗ ಮಕ್ಕಳ ಜೊತೆ ದೇಗುಲ ಆವರಣದಲ್ಲಿ ಕುಳಿತು, ಸುಧಾಮೂರ್ತಿಯವರು ಕ್ಷೇಮಸಮಾಚಾರ ವಿಚಾರಿಸಿದ್ದಾರೆ.
ನಂತರ ಮಕ್ಕಳ ಜೊತೆ ಮಕ್ಕಳಾದ ಸುಧಾಮೂರ್ತಿಯವರು ಫೋಟೋ ತೆಗೆಸಿಕೊಳ್ಳಲು ಮುಂದಾದ ಮಕ್ಕಳ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ.