ನವದೆಹಲಿ : ಒಡಿಶಾದ ಕೇಂದ್ರಪಾರಾ ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಯ 16 ವಿದ್ಯಾರ್ಥಿಗಳು ಸಿಡಿಲು ಬಡಿದು ಗಾಯಗೊಂಡಿರುವ ಘಟನೆ ನಡೆದಿದೆ.
ಗರಾದ್‌ಪುರ ಬ್ಲಾಕ್‌ನ ಕುದನಗರಿ ಆದರ್ಶ ವಿದ್ಯಾಲಯದ ಹತ್ತಿರ ಇರುವ 11 ಕೆವಿ ವಿದ್ಯುತ್ ತಂತಿಗೆ ಸಿಡಿಲು ಬಡಿದ ಪರಿಣಾಮ ಶಾಲೆಯ ಹಾಸ್ಟೆಲ್‌ನ ಕೊಠಡಿಯಲ್ಲಿದ್ದ ವಿದ್ಯಾರ್ಥಿಗಳಿಗೆ ಈ ಅನುಭವವಾಗಿದೆ.
ಇಬ್ಬರು ಬಾಲಕರು ಹಾಗೂ 14 ಬಾಲಕಿಯರು ಸೇರಿದಂತೆ ಎಲ್ಲರಿಗೂ ಗಾಯಗಳಾಗಿವೆ. ಅವರೆಲ್ಲರೂ 6 ಮತ್ತು 7 ನೇ ತರಗತಿಯ ವಿದ್ಯಾರ್ಥಿಗಳಾಗಿದ್ದರು.ಗಾಯಗೊಂಡ ವಿದ್ಯಾರ್ಥಿಗಳನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಿಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಚಿಕಿತ್ಸೆ ನೀಡಿದ ವೈದ್ಯ ಪ್ರಶಾಂತ್ ಕುಮಾರ್ ಜೆನಾ ತಿಳಿಸಿದ್ದಾರೆ.








