ಮಹಾತ್ಮ ಗಾಂಧಿಯವರ ಬೋಧನೆಗಳಿಂದ ಪ್ರೇರಣೆಗೊಂಡು ಪೋಸ್ಟ್ಕಾರ್ಡ್ಸ್ ಆನ್‌ಲೈನ್ ಪ್ರದರ್ಶನ ಪ್ರಾರಂಭಿಸಿದ ಗೂಗಲ್
ಹೊಸದಿಲ್ಲಿ, ಅಕ್ಟೋಬರ್03: ಮಹಾತ್ಮ ಗಾಂಧಿಯವರ ಬೋಧನೆಗಳಿಂದ ಪ್ರೇರಿತವಾದ ಗೂಗಲ್ ಆರ್ಟ್ಸ್ & ಕಲ್ಚರ್ ಶುಕ್ರವಾರ ಆನ್‌ಲೈನ್ ಪ್ರದರ್ಶನವನ್ನು ಪ್ರಾರಂಭಿಸಿತು.
ಗೂಗಲ್ ಆರ್ಟ್ಸ್ & ಕಲ್ಚರ್ ಮಹಾತ್ಮ ಗಾಂಧಿಯವರ 151 ನೇ ಜನ್ಮ ದಿನಾಚರಣೆಯಂದು ಬಿ ವಾಯ್ಸಸ್ ಆಫ್ ಚೇಂಜ್ ಮೂಲಕ ಪೋಸ್ಟ್ಕಾರ್ಡ್ಸ್ ಎಂಬ ಆನ್‌ಲೈನ್ ಪ್ರದರ್ಶನವನ್ನು ಪ್ರಾರಂಭಿಸಿದೆ.
ಕೊಚ್ಚಿ ಮೂಲದ ಲೆಟರ್‌ಫಾರ್ಮ್‌ಗಳ ಸಹಯೋಗದೊಂದಿಗೆ ಆಯೋಜಿಸಲಾದ ಆನ್‌ಲೈನ್ ಪ್ರದರ್ಶನವು ಕರಕುಶಲ ಪೋಸ್ಟ್‌ಕಾರ್ಡ್‌ಗಳಲ್ಲಿ ಬರೆಯಲ್ಪಟ್ಟ ಅಥವಾ ಚಿತ್ರಿಸಿದ ಸಂದೇಶಗಳ ಮೂಲಕ ಬದಲಾವಣೆಗೆ ಜನರನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ.
ಇದು 10 ಪ್ರದರ್ಶನಗಳ ಗುಂಪನ್ನು ಒಳಗೊಂಡಿದೆ. ಪ್ರತಿಯೊಂದೂ ಪ್ರಸ್ತುತತೆ, ಶಿಕ್ಷಣ, ರಾಷ್ಟ್ರ, ಆಡಳಿತ, ಆರೋಗ್ಯ, ಸಮುದಾಯ ಕ್ರಿಯೆ, ಮಹಿಳಾ ಸಬಲೀಕರಣ, ಪರಿಸರ, ಹಕ್ಕುಗಳು ಮತ್ತು ಮಾನವೀಯತೆ ಮುಂತಾದ ರಾಷ್ಟ್ರೀಯ ಪ್ರಸ್ತುತತೆಯ ವಿಷಯಗಳ ಮೇಲೆ ವರ್ಗೀಕರಿಸಲಾಗಿದೆ. ಗೂಗಲ್ ಆರ್ಟ್ಸ್ & ಕಲ್ಚರ್ ಪ್ರತಿ ಶುಕ್ರವಾರ ಅಕ್ಟೋಬರ್ 2 ರಿಂದ ಮುಂದಿನ ಒಂಬತ್ತು ವಾರಗಳವರೆಗೆ ಪ್ರದರ್ಶನವನ್ನು ನಡೆಸಲಿದೆ.
ಈ ಯೋಜನೆಯ ಭಾಗವಾಗಿ, ಸಮಾನತೆ ಕುರಿತ ಮೊದಲ ವಿಷಯಾಧಾರಿತ ಪ್ರದರ್ಶನವನ್ನು ಗಾಂಧಿ ಜಯಂತಿಯಂದು ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್ ಪ್ರಾರಂಭಿಸಿದರು.
ಪ್ರದರ್ಶನವು ವಿವಿಧ ರೀತಿಯ ಅಸಮಾನತೆಯ ಸಮಸ್ಯೆಯ ಪರಿಹಾರ ಮತ್ತು ಎಲ್ಲಾ ಕ್ಷೇತ್ರಗಳಲ್ಲಿನ ಅಂತರವನ್ನು ಮುಚ್ಚುವ ಜನರ ಧ್ವನಿಯನ್ನು ಒಳಗೊಂಡಿದೆ.
ಪೋಸ್ಟ್‌ಕಾರ್ಡ್‌ಗಳಲ್ಲಿನ ವಿಚಾರಗಧಾರೆಗಳು ಭವಿಷ್ಯದ ನಮ್ಮ ಸಮಾಜ ಮತ್ತು ಜನರ ದೃಷ್ಟಿಕೋನವನ್ನು ನಿರೂಪಿಸುವ ಸಾಮೂಹಿಕ ಧ್ವನಿಯಾಗಿದೆ ಎಂದು ಲೆಟರ್‌ಫಾರ್ಮ್ಸ್ ಸಹ-ಸಂಸ್ಥಾಪಕ ಹೇಳಿದ್ದಾರೆ.
Our Website : https://saakshatv.com/
Subscribe Now on YouTube – https://www.youtube.com/channel/UCJKH.
Like us on Facebook: https://www.facebook.com/saakshatv/
Follow us on Twitter : https://twitter.com/SaakshaTv
Follow us on Instagram : https://www.instagram.com/saaksha_tv/ Subscribe to our Telegram Channel : https://t.me/saakshatv
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ