Insulin plants: ಮಧುಮೇಹಕ್ಕೆ ರಾಮಬಾಣ ಈ ಇನ್ಸುಲಿನ್ ಸಸ್ಯ – ಮನೆಯಂಗಳದಲ್ಲೇ ಬೆಳಸಬಹುದು…
ರೋಗಿಯ ದೇಹದಲ್ಲಿ ಸಕ್ಕರೆಯ ಸಮಸ್ಯೆ ಹೆಚ್ಚಾದಾಗ, ಅದಕ್ಕೆ ಇನ್ಸುಲಿನ್ ಸಹಾಯ ತೆಗೆದುಕೊಳ್ಳುವುದನ್ನ ನೀವು ನೋಡಿರುತ್ತಿರಾ . ಮಧುಮೇಹ ಹೊಂದಿರುವ ಜನರಲ್ಲಿ ಮೇದೋಜ್ಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಉತ್ಪಾದಿಸುವ ಬೀಟಾ ಕೋಶಗಳು ನಾಶವಾಗುತ್ತವೆ. ಹಾಗಾಗಿ ಇನ್ಸುಲಿನ್ ಗಾಗಿ ನಾವು ಹೊರಗಿನ ಮೂಲದ ಮೊರೆಹಹೋಗುತ್ತೇವೆ.
ಅನಾರೋಗ್ಯರ ಜೀವನ ಶೈಲಿಯಿಂದ ಇತ್ತೀಚೆಗೆ ಮಧುಮೇಹಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸಕ್ಕರೆಯ ಮಟ್ಟವನ್ನ ಕಡಿಮೆ ಮಾಡಿಕೊಳ್ಳಲು ಸರಿಯಾದ ಆಹಾರ ಕ್ರಮದ ಅವ ಶ್ಯಕತೆ ಇರುತ್ತದೆ. ಇದರ ನಡುವೆ ಇನ್ಸುಲಿನ್ ಉತ್ಪಾದನೆ ಯನ್ನ ಹೆಚ್ಚಿಸುವ ಸಸ್ಸ್ಯವು ಇದೆ ಎಂಬುದು ನಿಮಗೆ ಗೊತ್ತಾ ?
ನಮ್ಮ ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ನಿಂತು ಹೋದಾಗ, ಹೊರಗಿನಿಂದ ಇನ್ಸುಲಿನ್ ಡಾಟ್ ತೆಗೆದುಕೊಳ್ಳಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಈ ಇನ್ಸುಲಿನ್ ಸಸ್ಯವು ನಿಮಗೆ ತುಂಬಾ ಪ್ರಯೋಜನ ನೀಡುತ್ತದೆ.
ಇದರ ವೈಜ್ಞಾನಿಕ ಹೆಸರು ಕಾಸ್ಟಸ್ ಇಗ್ನಿಯಸ್ ಎಂದು ಸಾಮಾನ್ಯವಾಗಿ ಭಾರತದಲ್ಲಿ ಇದನ್ನ ಇನ್ಸುಲಿನ್ ಸಸ್ಯ ಎಂದು ಕರೆಯಲಾಗುತ್ತದೆ, ಇದು ಕೋಸ್ಟೇಸಿ ಕುಟುಂಬಕ್ಕೆ ಸೇರಿದ ಗಿಡ. ಇದರ ಎಲೆಗಳ ಸೇವನೆಯು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ನಂಬಲಾಗಿದೆ. ಈ ಗಿಡದಲ್ಲಿರುವ ನೈಸರ್ಗಿಕ ರಾಸಾಯನಿಕಗಳನ್ನು ಬಳಸಿಕೊಂಡು ರಕ್ತದಲ್ಲಿನ ಸಕ್ಕರೆಯನ್ನು ಗ್ಲೂಕೋಸ್ ಆಗಿ ದೇಹ ಪರಿವರ್ತಿಸುತ್ತದೆ.
ಇನ್ಸುಲಿನ್ ಸಸ್ಯದಲ್ಲಿರುವ ಗುಣಗಳು ಬಿಪಿ, ಹೃದಯ ಸಂಬಂಧಿ ಸಮಸ್ಯೆಗಳು, ಕಣ್ಣು, ಕರುಳುಗಳಿಗೂ ಪ್ರಯೋಜನಕಾರಿಯಾಗಿದೆ. ಇನ್ಸುಲಿನ್ ಸಸ್ಯದ ಎಲೆಗಳಲ್ಲಿ ಪ್ರೋಟೀನ್ಗಳು, ಫ್ಲೇವನಾಯ್ಡ್ಗಳು, ಉತ್ಕರ್ಷಣ ನಿರೋಧಕ ಆಸ್ಕೋರ್ಬಿಕ್ ಆಮ್ಲ, ಬೀಟಾ-ಕ್ಯಾರೋಟಿನ್, ಕಾರ್ಸೋಲಿಕ್ ಆಮ್ಲ, ಟೆರ್ಪೆನಾಯ್ಡ್ಗಳು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿವೆ.
Insulin plants: This insulin plant is a panacea for diabetes – can be grown at home…








