Bengaluru : ನಕಲಿ ದಾಖಲೆ ನೀಡಿ 3 ಕೋಟಿ ವಿಮೆ ಕ್ಲೈಮ್ ಮಾಡಿದ್ದ ಪತ್ನಿ ವಿರುದ್ಧ ದೂರು
ಮೃತಪಟ್ಟ ಗಂಡನ ನಕಲಿ ದಾಖಲೆ ನೀಡಿ ಮಹಿಳೆಯೊಬ್ಬಳು 3 ಕೋಟಿ ವಿಮೆ ಕ್ಲೈಮ್ ಮಾಡಿಕೊಂಡಿದ್ದು, ಆಕೆಯ ವಿರುದ್ಧ ಇದೀಗ ಇನ್ಶ್ಯೂರೆನ್ಸ್ ಕಂಪನಿ ದೂರು ದಾಖಲಿಸಿದೆ..
ಕೋರಮಂಗಲ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.. ಕೃಷ್ಣಪ್ರಸಾದ್ ಗಾರಲಪಟ್ಟಿ ಎಂಬುವರು ಟಾಟಾ ಎ ಐ ಎ ಲೈಪ್ ಇನ್ಶ್ಯೂರೆನ್ಸ್ ಕಂಪನಿಯಲ್ಲಿ ವಿಮೆ ಪಡೆದಿದ್ದರು. ವಾರ್ಷಿಕ 51,777 ರೂಗಳು ಕಟ್ಟುವ ಪಾಲಿಸಿ ಪಡೆದಿದ್ದರು. ಆದರೆ ಮೂರು ವರ್ಷ ಪಾಲಿಸಿ ಕಟ್ಟುವ ಮುನ್ನ ಕೃಷ್ಣ ಪ್ರಸಾದ್ ಮೃತಪಟ್ಟಿದ್ದರು.
ಕೃಷ್ಣಪ್ರಸಾದ್ ಹೆಂಡತಿ ಸುಪ್ರಿಯಾರನ್ನ ನಾಮಿನಿ ಮಾಡಿದ್ದರು. ಈ ಹಿನ್ನಲೆ ಅನ್ಲೈನ್ ನಲ್ಲಿ ಸುಪ್ರಿಯಾ ಇನ್ಸ್ಯುರೆನ್ಸ್ ಕ್ಲೈಮ್ ಮಾಡಿದ್ದರು.. ಇನ್ಸ್ಯೂರೆನ್ಸ್ ಕಂಪನಿ 3 ಕೋಟಿ ಹಣವನ್ನ ಸುಪ್ರಿಯಾರಿಗೆ ವರ್ಗಾವಣೆ ಮಾಡಿತ್ತು.
Hijab Controvercy : ನ್ಯಾಯಾಲಯದ ಅದೇಶ ಏನು ಬರುತ್ತೋ ಅದನ್ನ ಪಾಲನೆ ಮಾಡೋಣ : ಆರಗ ಜ್ಞಾನೇಂದ್ರ
ಸುಪ್ರಿಯಾ , ಕೃಷ್ಣಪ್ರಸಾದ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ದಾಖಲೆ ಸಿಲ್ಲಿಸಿದ್ದರು. ಆದರೆ ಕೃಷ್ಣಪ್ರಸಾದ್ ಕ್ಯಾನ್ಸರ್ ನಿಂದ ಮೃತಪಟ್ಟಿದ್ದರು. ಕ್ಯಾನ್ಸರ್ ನಿಂದ ಮೃತಪಟ್ಟರೆ ವಿಮೆ ಆನ್ವಯ ಆಗಲ್ಲ. ಹೀಗಾಗಿ ನಕಲಿ ದಾಖಲೆ ನೀಡಿ ವಿಮೆ ಕ್ಲೈಮ್ ಮಾಡಿರುವ ಸುಪ್ರಿಯಾ ವಿರುದ್ಧ ಕೇಸ್ ಫೈಲ್ ಮಾಡಲಾಗಿದೆ. ಸುಪ್ರಿಯಾಗಾಗಿ ಕೋರಮಂಗಲ ಪೊಲೀಸರು ಹುಡುಕಾಟ ನಡೆಸಿದ್ದಾರೆ.