ಬೀದರ್: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಬೇಧಿಸಿದ ಪೊಲೀಸರು 9 ಜನರನ್ನು ಬಂಧಿಸಿರುವ ಘಟನೆ ನಡೆದಿದೆ.
ಗಾಂಜಾ, ದರೋಡೆ, ಮನೆಗಳ್ಳತನ ಸೇರಿದಂತೆ ಒಟ್ಟು ಐದು ಪ್ರಕರಣಗಳನ್ನು ಪೊಲೀಸರು ಭೇದಿಸಿದ್ದು, ಅಂತರ್ ರಾಜ್ಯ 9 ದರೋಡೆಕೋರರನ್ನು ಬಂಧಿಸಿದ್ದಾರೆ. ಅಲ್ಲದೇ, ಬಂಧಿತರಿಂದ 94 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಕಂಟೇನರ್ ಚಾಲಕನಿಗೆ ಮತ್ತು ಬರುವ ಇಂಜೆಕ್ಷನ್ ಚುಚ್ಚಿ ಲಾರಿ ಕದ್ದಿದ್ದ ಆರೋಪಿಗಳನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ. ಲಾರಿಯಲ್ಲಿ ಸಾಗಿಸುತ್ತಿದ್ದ 50 ಲಕ್ಷ 76 ಸಾವಿರ ಮೌಲ್ಯದ 694 ಫ್ಯಾನ್ ಬಾಕ್ಸ್ ಲಾರಿ ವಶಕ್ಕೆ ಪಡೆಯಲಾಗಿದೆ. 12 ಲಕ್ಷ 82 ಸಾವಿರ ಮೌಲ್ಯದ 180 ಗ್ರಾಂ ಬಂಗಾರದ ಆಭರಣ, ಎರಡು ಕೆಜಿಯಷ್ಟು ಬೆಳ್ಳಿಯ ಆಭರಣ ಒಂದು ಬೈಕ್ 20 ಸಾವಿರ ರೂ. ನಗದು ಹಣ ವಶಕ್ಕೆ ಪಡೆಯಲಾಗಿದೆ.