ಅಂತರ್ಜಾತಿ ವಿವಾಹವಾಗಿದ್ದ ನವದಂಪತಿಯ ಮೇಲೆ ಭೀಕರ ಹಲ್ಲೆ..!
ಹೈದರಾಬಾದ್: ಅಂತರ್ಜಾತಿ ವಿವಾಹವಾಗಿದ್ದ ನವದಂಪತಿಯ ಮೇಲೆ ಭೀಕರ ಹಲ್ಲೆ ನಡೆಸಲಾಗಿರುವ ಘಟನೆ ತೆಲಂಗಾಣದ ಮಿರಿಯಾಲಗುಡದಲ್ಲಿ ನಡೆದಿದೆ. 24 ವರ್ಷದ ಸಂದೀಪ್ ಮತ್ತು 22 ವರ್ಷದ ಮಾಧವಿ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ. ಇವರಿಬ್ಬರ ಜಾತಿ ಬೇರೆ ಬೇರೆ ಅನ್ನೋ ಕಾರಣಕ್ಕೆ ಹುಡುಗಿಯ ಮನೆಯಿಂದ ಪ್ರೀತಿಗೆ ವಿರೋಧ ವ್ಯಕ್ತವಾಗಿತ್ತು. ಆದ್ರೂ ಈ ಜೋಡಿ ಮದುವೆಯಾದ ಹಿನ್ನೆಲೆಯಲ್ಲಿ ಮಾಧವಿಯ ತಂದೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ.
ತನ್ನ ತಂಗಿ ಮಗನೊಂದಿಗೆ ಮಾಧವಿ ಮದುವೆ ಮಾಡಲು ಆಕೆಯ ತಂದೆ ನಿರ್ಧರಿಸಿದ್ದರು. ಆದರೆ, ಮಾಧವಿ ಮದುವೆಗೆ ಒಪ್ಪಿರಲಿಲ್ಲ. ಈ ನಡುವೆ ಆಕೆ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿ 10 ದಿನಗಳ ಹಿಂದೆ ಆರ್ಯ ಸಮಾಜದಲ್ಲಿ ಮದುವೆಯಾಗಿದ್ದಾರೆ. ಇದರಿಂದ ಆಕ್ರೋಶಗೊಂಡ ಆಕೆಯ ತಂದೆ ಕರೆ ಮಾಡಿ ಉಡುಗೊರೆ ನೀಡೋದಾಗಿ ಮನೆ ಬಳಿ ಕರೆಸಿಕೊಂಡು ನಂತರ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








