Interenational News : ಪಾಕ್ ಗೆ ಇದೆಂಥಾ ಸ್ಥಿತಿ…. ಹೆದ್ದಾರಿ ಅಡವಿಟ್ಟು , ಸಾಲ ಪಡೆದ ಇಮ್ರಾನ್ ಸರ್ಕಾರ…!!!
ಪಾಕಿಸ್ತಾನದ ಬಂಡವಾಳ ಇಡೀ ವಿಶ್ವಕ್ಕೆ ಗೊತ್ತಿಲ್ಲದೇ ಇರೋದೇನೆಲ್ಲ.. ಕತ್ತೆ ಮಾರಿ ದೇಶ ನಡೆಸುವ ಉದಾಹರಣೆಯೂ ಇದೆ.. ಚೀನಾ ಕೈ ಕೊಟ್ಟರೆ ,,, ಪಾಕ್ ಇಷ್ಟೊತ್ತಿಗೆ ದಿವಾಳಿಯಾಗಿರಬೇಕಿತ್ತು.. ಆದ್ರೂ ಸಾಲದ ಮೇಲೆ ದೇಶ ನಿಂತಿದೆ..
ಆದ್ರೆ ಪ್ರಧಾನಿ ಇಮ್ರಾನ್ ಖಾನ್ ಮಾತ್ರ ನಮ್ಮಲ್ಲಿ ಯಾವುದೇ ಆರ್ಥಿಕ ಸಮಸ್ಯೆ ಇಲ್ಲ.. ನಮ್ಮ ಆರ್ಥಿಕತೆ ಭಾರತಕ್ಕಿಂತ ಚೆನ್ನಾಗಿದೆ ಎಂದು ಬೀಗಿದ್ದು ಮಾತ್ರ ಸುಳ್ಳಲ್ಲ.. ಆದ್ರೀಗ ತಮ್ಮ ದೇಶದ ಹೆದ್ದಾರಿಯನ್ನು ಅಡವಿಟ್ಟು ದುಬಾರಿ ಬಡ್ಡಿಗೆ ಸಾಲವನ್ನು ಪಡೆದುಕೊಂಡಿದೆ ಪಾಕಿಸ್ತಾನ..
ಈ ಮೂಲಕ ಇಡೀ ವಿಶ್ವದಲ್ಲಿ ಮತ್ತೊಮ್ಮೆ ಪಾಕ್ ಬಂಡವಾಳ ಬಟಾ ಬಯಲಾಗಿದೆ. ಪಾಕಿಸ್ತಾನ ಈಗ 7 ವರ್ಷ ಅವಧಿಯ ಇಸ್ಲಾಮಿಕ್ ಬಾಂಡ್ ಮೂಲಕ 1 ಶತಕೋಟಿ ಡಾಲರ್ ಅಂದ್ರೆ 17,600 ಪಾಕಿಸ್ತಾನ ರೂಪಾಯಿ ಸಾಲವನ್ನು ಪಡೆದುಕೊಂಡಿದೆ. ಈ ಸಾಲಕ್ಕೆ ಶೇ.7.95 ಬಡ್ಡಿದರ ಅಲ್ಲದೇ ಲಾಹೋರ್-ಇಸ್ಲಾಮಾಬಾದ್ ಹೆದ್ದಾರಿಯ ಸ್ವಲ್ಪ ಭಾಗವನ್ನು ಅಡವಿಡಲಾಗಿದೆ.
ಇಸ್ಲಾಮಿಕ್ ಬಾಂಡ್ ನಡಿ ಪಡೆದ ಸಾಲಕ್ಕೆ ಇಷ್ಟು ಹೆಚ್ಚು ಪ್ರಮಾಣದ ಬಡ್ಡಿ ಪಾವತಿ ಮಾಡುತ್ತಿರುವುದು ಪಾಕಿಸ್ತಾನದ ಇತಿಹಾಸದಲ್ಲೇ ಇದೇ ಮೊದಲು ಎಂದು ಮಾಧ್ಯಮಗಳು ತಿಳಿಸಿವೆ.
ಸೌದಿ ಅರೇಬಿಯಾದಿಂದ ಪಡೆದಿರುವ 3 ಬಿಲಿಯನ್ ಡಾಲರ್ 52,800 ಕೋಟಿ ರೂ. ಪೈಕಿ 35,200 ಕೋಟಿ ರೂ. ಅನ್ನು ಪಾಕ್ ಈಗಾಗಲೇ ವೆಚ್ಚ ಮಾಡಿದೆ. ಇದರಿಂದಾಗಿ ಜ.14ರ ವೇಳೆಗೆ ಪಾಕಿಸ್ತಾನದ ವಿದೇಶಾಂಗ ವಿನಿಮಯ ಮೀಸಲು 17 ಬಿಲಿಯನ್ ಡಾಲರ್‌ನಿಂದ ಕುಸಿತವಾಗಿದೆ.
pakisthan took loan over their national highway