ಈ ಕೆರೆಯಲ್ಲಿ ಇಳಿದ್ರೆ ಯಾರೇ ಆದ್ರೂ ಕ್ಷಣಾರ್ಧದಲ್ಲಿ ಕಲ್ಲಾಗ್ತಾರೆ..!!! Random Facts

1 min read

ಈ ಕೆರೆಯಲ್ಲಿ ಇಳಿದ್ರೆ ಯಾರೇ ಆದ್ರೂ ಕ್ಷಣಾರ್ಧದಲ್ಲಿ ಕಲ್ಲಾಗ್ತಾರೆ..!!! Random Facts

ಉತ್ತರ ತಂಜಾನಿಯಾದಲ್ಲಿನ  ಕೆರೆಯೊಂದರಲ್ಲಿ ಕಾಲಿಟ್ಟರೆ , ಕ್ಷಣಾರ್ಧದಲ್ಲಿ ಜೀವಿಗಳು ಕಲ್ಲಾಗುತ್ತವೆ..ಮನುಷ್ಯರರೇ ಇರಲಿ , ಪ್ರಾಣಿ ಪಕ್ಷಿಗಳಿರಲಿ.. ಈ ಕೆರೆಯ ಹೆಸರು ಲೇಕ್ ನಾಟ್ರೋನ್..  ಈ ಕೆರೆ ಸುತ್ತಲೂ ಅನೇಕ ಪಕ್ಷಿ ಪ್ರಾಣಿಗಳು ಕಲ್ಲಾಗಿ ಬಿದ್ದಿರುವ ಶವಗಳು ಕಂಡುಬರುತ್ತವೆ..  ಈ ಕೆರೆಯಲ್ಲಿ ಸೋಡಿಯಮ್ , ಕಾರ್ಬೋನೇಟ್ ಸೇರಿದಂತೆ ಅನೇಕ ಅಪಾಯಕಾರಿ ರಾಸಾಯಣಿಕಳಿವೆ.. ಹೀಗಾಗಿಯೇ ಈ ಕೆರೆಯಲ್ಲಿ ಮುಳುಗಿದ್ರೆ ಕಲ್ಲಾಗುತ್ತಾರೆ..

ಟೆಕ್ಸಾಸ್ ನಲ್ಲಿ ಒಂದು ಪ್ರಜಾತಿ ಹಸು ಇಡೀ ವಿಶ್ವದ ಜನರನ್ನ ಶ್ಚರ್ಯ ಚಕಿತರನ್ನಾಗಿಸುತ್ತದೆ.. ಕಾರಣ  ಆ ಹಸುವಿನ ಕೊಂಬು.. ಈ ರೀತಿಯ ಹಸುಗಳ ಕೊಂಬು ಸುಮಾರು 7 ಫೀಟ್ ವರೆಗೂ ಉದ್ದವಿರುತ್ತದೆ.. ಈ ಹಸುಗಳ ಬೆಲ ತುಂಬಾನೇ ದುಬಾರಿಯಾಗಿರುತ್ತದೆ.. ಇತ್ತೀಚೆಗೆಷ್ಟೇ ಈ ಪ್ರಜಾತಿಯ ಹಸು 70 ಸಾವಿರ ಡಾಲರ್ ಗಳಿಗೆ ಮಾರಾಟವಾಗಿತ್ತು..

ವಧು ಮಂಡಿ / ಜಾತ್ರೆ – ಬಲ್ಗೇರಿಯಾದಲ್ಲಿನ ಸ್ಟಾರಾ ಜಾಗೋರ್ ಎಂಬಲ್ಲಿ ಪ್ರತಿ ವರ್ಷ 4 ಬಾರಿ ವಧು ಮಂಡಿಯನ್ನ ಯೋಜಿಸಲಾಗುತ್ತದೆ.. ಈ ಮಂಡಿಗೆ ರೋಮಾ ಸಮುದಾಯದ ಜನರು ತಮ್ಮ ಮದುವೆಯಾಗದ ಹೆಣ್ಣುಮಕ್ಕಳನ್ನ ಕಲರೆತಂದು ಮಾರಾಟಕ್ಕೆ ನಿಲ್ಲಿಸುತ್ತಾರೆ.. ಯಾವ ವ್ಯಕ್ತಿ ಅತಿ ಹೆಚ್ಚು ಹಣ ನೀಡ್ತಾರೋ ಅವರಿಗೆ ತಮ್ಮ ಮಕ್ಕಳನ್ನ ಕೊಟ್ಟು ಮದುವೆ ಮಾಡ್ತಾರೆ..

ಇಟಲಿಯ ಕ್ಯಾಲೇಬ್ರಿಯಾ ಸಿಟಿಯಲ್ಲಿ ಸ್ಥಿತವಾಗಿರುವ ಅತ್ಯಂತ ಸುಂದರ ಹಳ್ಳಿಯಿಂದ ಬಹುತೇಕ ಜನರು ವಲಸೆ ಹೋಗಿದ್ದು, ಈ ಹಳ್ಳಿ ಖಾಲಿ ಖಾಲಿಯಾಗಿದೆ.. ಆದ್ರೆ ಇಟಲಿ ಸರ್ಕಾರ  ಜಾಗವನ್ನ ಮತ್ತೆ ಪುನರುತ್ಥಾನ ಮಾಡುವ ನಿರ್ಧಾರ ಮಾಡಿದ್ದು, ಇಲ್ಲಿಗೆ ವಾಸ ಮಾಡಲು ಬರುವ ಜನರಿಗೆ ಖುದ್ದು ಸರ್ಕಾರವೇ 25 ಲಕ್ಷ ರೂಪಾಯಿ ಹಣವನ್ನ ನೀಡುವ ಯೋಜನೆ ತಂದಿದೆ.. ಈ ಯೋಜನೆಯಲ್ಲಿನ ಶರತ್ತಿನಂತೆ , ಇಲ್ಲಿಗೆ ಬಂದವರು ತಾವು ಬಂದ 90 ದಿನಗಳಲ್ಲಿ ಹೊಸ ಬ್ಯುಸಿನೆಸ್ ಶುರುಮಾಡಬೇಕು.. ಇಲ್ಲಿಗೆ  ವಾಸ ಮಾಡಲು ಬರುವ ಪರಿವಾರದ ಮುಖ್ಯಸ್ಥರ ವಯಸ್ಸು 25 ವರ್ಷದಿಂದ  40 ವರ್ಷಗಳ ಳಗಿರಬೇಕು..

ಗೋಸಿಯಾಮಿ ಥಾಮ್ರಾ ಎಂಬ ಸೌತ್ ಆಫ್ರಿಕಾದ ಮಹಿಳೆಯೊಬ್ರು ಸುಮಾರು 10 ಮಕ್ಕಳಿಗೆ ಒಟ್ಟಿಗೆ ಜನ್ಮ ನೀಡಿದ್ರು ಎಂಬ ವಿಚಾರ ವಿಶ್ಯಾದ್ಯಂತ ಸಂಚಲನ ಸೃಷ್ಟಿಸಿತ್ತು.. ಆದ್ರೆ ಈ ವಿಚಾರವನ್ನ ಗಂಭೀರವಾಗಿ ತೆಗೆದುಕೊಂಡ ಸೌತ್ ಆಫ್ರಿಕಾದ ಸರ್ಕಾರದ ದೇಶದಂತೆ ಅಧಿಕಾರಿಗಳು ತನಿಖೆ ನಡೆಸಿದಾಗ  ಮಹಿಳೆಯ ಬಳಿ ಯಾವ ಮಗುವೂ ಕೂಡ ಪತ್ತೆಯಾಗಿರಲಿಲ್ಲ.. ಅಸಲಿಗೆ ಈ ಮಹಿಳೆಯು ಗರ್ಭವತಿಯೇ ಆಗಿರಲಿಲ್ಲ.. ಫೇಮಸ್ ಆಗಲಿಕ್ಕೆ ಮಾಡಿದ್ದ ನಾಟಕವಷ್ಟೇ ಎಂಬ ವಿಚಾರ ಬಯಲಾಗಿದೆ.. ಅಷ್ಟೇ ಅಲ್ಲದೇ ಈ ಮಹಿಳೆಯು ಮಾನಸಿಕವಾಗಿ ಅಸ್ವಸ್ಥೆಯೂ ಆಗಿದ್ದು, ಇವರನ್ನ ಈಗ ಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ..

ಸ್ಕಾಟ್ ಲ್ಯಾಂಡ್ ನಲ್ಲಿ ಎಲೀಸಿಯಾ ಹಾರ್ಪರ್ ಎಂಬ ಮಹಿಳೆಯ ಅದೃಷ್ಟ ಕೇವಲ ನೂರು ರೂಪಾಯಿಗಳಿಂದ ಬದಲಾಗಿತ್ತು.. ಬ್ಯಾಂಕ್ ಖಾತೆಯಲ್ಲಿ ಈಕೆ ಬಳಿಯಲ್ಲಿ ಕೇವಲ 100 ರೂಪಾಯಿಗಳು ಮಾತ್ರ ಉಳಿದಿದ್ದಾಗ  ಮಹಿಳೆಯು ಅದೇ ದೊಡ್ಡಿಯಿಂದ ಲಾಟ್ರಿ ಟಿಕೆಟ್ ಸೇಲ್ ಲಾಕ್ ಆಗುವ 10 ನಿಮಿಷ ಮುಂಚೆ ಲಾಟ್ರಿ ಟಿಕೆಟ್ ಖರೀದಿಸಿದ್ರು.. ಅದೃಷ್ಟ ಅಂದ್ರೆ  ಆ ಲಾಟ್ರಿ ಇಂದಲೇ ಮಹಿಳೆಗೆ 10 ಕೋಟಿ ಬಹುಮಾನ ಒಲಿದುಬಂದಿತ್ತು..

ಸೌತ್ ಕೊರಿಯಾದ ಪಾಪ್ ಸಿಂಗರ್ ಟಟೈಲ್ ಮೂನ್ ಕೇವಲ ಒಂದೇ ಒಂದು ಗಂಟೆಯ ಅಂತರದೊಳಗೆ ಇನ್ಸ್ಟಾಗ್ರಾಮ್ ನಲ್ಲಿ 2 ಮಿಲಿಯನ್ ಗಿಂತಲೂ  ಹೆಚ್ಚು  ಫಾಲೋವರ್ ಗಳನ್ನ ಗಳಿಸಿ ವಿಶ್ವ ದಾಖಲೆ ಬರೆದಿದ್ದಾರೆ.. ಅಷ್ಟೇ ಅಲ್ಲ ವಿಶ್ವದಲ್ಲೇ ಅತಿ  ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಫಾಲೋವರ್ಸ್ ನ ಗಳಿಸಿದಕ್ಕೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಬುಕ್ ನಲ್ಲಿಯೂ ಸ್ಥಾನ ಪಡೆದಿದ್ದಾರೆ..

ಅಮೆರಿಕಾದ ಗುವಾನ್ ನಲ್ಲಿರುವ ಒಂದು ಆದಿ ಸಮುದಾಯದಲ್ಲಿ ವಿಚಿತ್ರ ನಿಯಮವಿದೆ.. ಈ ಜನಾಂಗದ  ವಿಚಿತ್ರ ನಿಯಮದ ಅನುಸಾರ ಯುವತಿಯರು ಮದುವೆಗೂ ಮುನ್ನವೇ ದೈಹಿಕ ಸಂಪರ್ಕ ಹೊಂದಿರುವುದು ಕಡ್ಡಾಯವಾಗಿರುತ್ತದೆ.. ಕನ್ಯೆಯಾಗಿ ಉಳಿದಿರುವ ವರೆಗೂ ಯುವತಿಯರನ್ನೂ ಯಾರೂ ಸಹ ಮದುವೆಯಾಗುವುದಿಲ್ಲ ನ್ನಲಾಗಿದೆ.. ಇನ್ನೂ ಶಾಕಿಂಗ್ ಫ್ಯಾಕ್ಟ್ ಅಂದ್ರೆ ಈ ಯುವತಿಯರು ತಾವು ವರಿಸುವವರ ಜೊತೆಗಲ್ಲ ಬದಲಾಗಿ ಬೇರೆಯವರೊಂದಿಗೆ ದೈಹಿಕ ಸಂಪರ್ಕ ಬೆಳೆಸುವುದು ಅನಿವಾರ್ಯವಂತೆ.. ಇನ್ನೂ ಆಶ್ಚರ್ಯ ಅಂದ್ರೆ ಈ ಹುಡುಗಿಯರು ಬೇರೆ ಪುರುಷರಿಗೆ ಹಣ ಕೊಟ್ಟು ಅವರ ಜೊತೆಗೆ ದೈಹಿಕ ಸಂಪರ್ಕ ಬೆಳೆಸುತ್ತಾರೆ.. ಆನಂತರವೇ ಇವರ ಮದುವೆಯಾಗುತ್ತದೆ..

ಡಿವೋರ್ಸ್ ಗಾಗಿ ಕಾನೂನು ಇರದ ದೇಶ ಫಿಲಿಫೈನ್ಸ್.. ಈ ದೇಶದ ಕ್ರಿಶ್ಚಿಯನ್ ಜನರು ಒಮ್ಮೆ ಮದುವೆಯಾದ್ರೆ ಮುಗೀತು ಡಿವೋರ್ಸ್ ಪಡೆಯುವ ಅವಕಾಶವಿರೋದಿಲ್ಲ.

ಸ್ಪೇನ್ ನ ಕ್ಯಾನರಿ ಐಲ್ಯಾಂಡ್ ನಲ್ಲಿ  ಐದೇ ದಿನಗಳ ಅಂತರದಲ್ಲಿ 4 ಸಾವಿರಕ್ಕಿಂತ ಹೆಚ್ಚು ಬಾರಿ ಭೂಕಂಪನ ಸಂಭವಿಸಿದೆ..  ಇದೇ ಭೂಕಂಪನದ ಕಾರಣಕ್ಕೆ ಅಅಲ್ಲಿನ ಸರ್ಕಾರ 85 ಸಾವಿರ ಜನರು ವಾಸವಾಗಿದ್ದ  ದ್ವೀಪವನ್ನ ಸಂಪೂರ್ಣವಾಗಿ ಖಾಲಿ ಮಾಡಿಸಿತ್ತು.. ಇಷ್ಟೊಂದು ಸಲ ಭೂಕಂಪನದ ಪರಿಣಾಮದಿಂದಾಗಿ ದ್ವೀಪದಲ್ಲಿದ್ದ ಜ್ವಾಲಾಮುಖಿ ಸ್ಪೋಟಿಸುವುದು ಖಚಿತೊವಾದ ಬಳಿಕವೇ ಜನರನ್ನ ಅಲ್ಲಿಂದ ಸುರಕ್ಷಿತ ಸ್ಥಳಗಳಿಗೆ ರವಾನೆ ಮಾಡಲಾಗಿತ್ತು..

2011ರಲ್ಲಿ ಜಾರ್ಜಿಯಾದ 75 ವರ್ಷದ ಮಹಿಳೆಗೆ ಜಮೀನಿನ ಅಡಿ ಒಂದು ತಾಮ್ರದ ಉದ್ದದ ತಂತಿಯೊಂದು ಕಂಡುಬಂದಿತ್ತು..  ವೃದ್ಧ ಮಹಿಳೆ ತಂತಿಯನ್ನ ಕಟ್ ಮಾಡಿ ಅದನ್ನ ಗುಜುರಿವರಿಗೆ ಮಾರಾಟ ಮಾಡಿದ್ರು.. ಆದ್ರ, ಅಸಲಿಗೆ ಆ ತಂತಿ ಫೈಬರ್ ಆಪ್ಟಿಕ್ ಕೇಬಲ್ ಆಗಿತ್ತು.. ಈ ಕೇಬಲ್ ನ ಸಹಯದಿಂದ ಜಾರ್ಜಿಯಾ ಮತ್ತು ಅರ್ಮೇನಿಯಾದಲ್ಲಿ ಇಂಟರ್ ನಟ್ ಸರಬರಾಜಾಗುತ್ತಿತ್ತು.. ಆದ್ರೆ ಈ ಮಹಿಳೆ ಮಾಡಿದ  ಕೆಲಸದಿಂದ ಎರೆಡೂ ದೇಶದಲ್ಲಿ 5 ಗಂಟೆಗಳ ಕಾಲ ಇಂಟರ್ ನೆಟ್ ಸ್ಥಿಗಿತಗೊಂಡಿತ್ತು.. ಇದರಿಂದ ರೆಡೂ ದೇಶಗಳಿಗೂ ಕೋಟ್ಯಾಂತರ ರೂಪಾಯಿಗಳ ನಷ್ಟ ಉಂಟಾಗಿತ್ತು..

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd