ನಂದವಂಶ ನಿರ್ಣಾಮ ಮಾಡಿದ ಮಹಾನ್ ಜ್ಞಾನಿ ಚಾಣಕ್ಯನ ಜೀವನಕಥೆ..!
ಮಹಾನ್ ಜ್ಞಾನ ಸಂಪಾದಿಸಿ ತಮ್ಮ ಹೆಸರು ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೇ ಉಳಿಯುವಂತೆ ಮಹಾನ್ ಕಾರ್ಯಗಳನ್ನ ಮಾಡಿರುವ ಜ್ಞಾನಿಗಳು, ಸಂತರು , ಮಹಾನ್ ವ್ಯಕ್ತಿಗಳು ಜನಿಸಿರುವ ದೇಶ ನಮ್ಮ ಹೆಮ್ಮಯ ಭಾರತ. ಬುದ್ದಿವಂತರು, ಮಹಾನ್ ಪಂಡಿತರು, ಜ್ಞಾನಿಗಳು ಅಂದ ಅಂದ ತಕ್ಷಣ ನಮ್ಮ ತಲೆಗೆ ಬರುವ ಮೊದಲ ಹೆಸರು ಆಚಾರ್ಯ ಚಾಣಕ್ಯರದ್ದು.
ಹೌದು ಚಾಣಕ್ಯನ ನೀತಿಗಳನ್ನ ಜನರು ಇಂದಿಗೂ ಅನುಸರಿಸುತ್ತಾರೆ. ಶಿಕ್ಷಕ, ಫಿಲಾಸಫರ್, ಅರ್ಥಶಾಸ್ತ್ರಜ್ಞ, ರಾಜ ಆಡಳಿತದ ಸಲಹೆಗಾರನಾಗಿದ್ದ ಚಾಣಕ್ಯ ಛಲಕ್ಕೆ, ಬುದ್ದಿವಂತಿಕೆಗೆ ಮಾದರಿ, ಸ್ಫೂರ್ತಿ. ಅಷ್ಟೇ ಅಲ್ಲ ಇವತ್ತಿಗೂ ಇಡೀ ವಿಶ್ವದಲ್ಲೇ ಮಹಾನ್ ರಾಜಕಾರಣಿ ಅಂತಲೂ ಚಾಣಕ್ಯರನ್ನೇ ಬಿಂಬಿಸಲಾಗುತ್ತದೆ. ತನ್ನ ನಿಪುಣತೆ, ರಾಜತಾಂತ್ರಿಕತೆ ಬುದ್ದಿವಂತಿಕೆ, ಛಲವಂತಿಕೆಯಿಂದ, ತನಗೆ ನಂದ ವಮಶದವರು ಮಾಡಿದ ಅಪಮಾನಕ್ಕೆ ಯಾವ ರೀತಿ ಚಾಣಕ್ಯ ಸೇಡು ತೀರಿಸಿಕೊಂಡಿದ್ದರು ಅನ್ನೋ ವಿಚಾರ ಅನೇಕರಿಗೆ ಗೊತ್ತೇ ಇರುತ್ತೆ.
‘ಪ್ರೀಸ್ಟ್ ‘ ಆಗುವ ಕನಸುಕಂಡಿದ್ದ ಹಿಟ್ಲರ್ ಮಹಾನ್ ಕ್ರೂರಿ ಸರ್ವಾಧಿಕಾರಿಯಾಗಿದ್ದು ಹೇಗೆ : LIFE STORY
ನಿಮಗೆ ಗೊತ್ತಿರಬಹುದು. ಇಲ್ಲ ಅನೇಕರು ಸಲಹೆ ನೀಡಿರಬಹುದು. ಇವತ್ತಿಗೂ ಜನರು ಸಫಲತೆಗೆಗಾಗಿ ಚಾಣಾಕ್ಯನ ಸೂತ್ರಗಳನ್ನ ಅನುಸರಿಸುತ್ತಾರೆ. ಅಂತ ಮಹಾನ್ ಜ್ಞಾನಿ ಆಚಾರ್ಯ ಚಾಣಾಕ್ಯನ ಲೈಫ್ ಹಿಸ್ಟರಿ ಹೇಗೆ ನಂದ ವಂಶ ನಿರ್ಣಾಮ ಮಾಡಿದರು ಅನ್ನೋದನ್ನ ಇವತ್ತು ತಿಳಿಯೋಣ. ಆದ್ರೆ ಚಾಣಕ್ಯನ ಬಗ್ಗೆ , ವಿವಿಧ ಪುಸ್ತಕಗಳು ಲೆಖನಗಳನ್ನ ಅನೇಕರು ರಚಿಸಿದ್ದಾರೆ. ಒಂದೊಂದರಲ್ಲೂ ಒಂದೊಂದು ವಿಭಿನ್ನತೆಗಳು ಇವೆ.
ಗಲ್ಲಿಗೇರಿಸುವುದಕ್ಕು ಮುನ್ನ ಜಲ್ಲಾದ್ ಖೈದಿಯ ಕಿವಿಯಲ್ಲಿ ಹೇಳೋ ಆ ಮಾತು ಏನು ಗೊತ್ತಾ..!
ಚಣಕ ಎಂಬ ಒಂದು ಚಿಕ್ಕ ಹಳ್ಳಿಯಲ್ಲಿ ಚಾಣಾಕ್ಯನ ಜನನವಾಗಿತ್ತು. ಚಾಣಾಕ್ಯನನ್ನ ಜನರು ವಿಷ್ಣುಗುಪ್ತ ಹಾಗೂ ಕೌಟಿಲ್ಯ ಎಂಬ ಹೆಸರುಗಳಿಂದಲೂ ಕರೆಯುತ್ತಿದ್ದರು. ಚಾಣಕ್ಯನ ಬಾಲ್ಯದಿಂದಲೇ ಅತ್ಯಂತ ಬುದ್ದಿವಂತರಾಗಿದ್ದರು ಎನ್ನಲಾಗಿದೆ. ಇದೇ ಬುದ್ದಿವಂತಿಯನ್ನ ಗಮನಿಸಿದ್ದ ಅವರ ತಂದೆ ಅದೇ ಊರಿನಲ್ಲಿ ತಕ್ಷಶಿಲಾ ಗುರುಕುಲಕ್ಕೆ ಚಾಣಾಕ್ಯರನ್ನ ಸೇರಿಸಿದ್ದರು. ಬಳಿಕ ವಿದ್ಯಾಭ್ಯಾಸ ಮುಗಿಸಿದ ಚಾಣಕ್ಯ ಅಲ್ಲೇ ಶಿಕ್ಷಕರಾಗಿಯೂ ಕೆಲಸ ಮಾಡಿದ್ದರು. ಚಾಣಕ್ಯರ ಸಮಯದಲ್ಲಿ ಪಾಟಲಿಪುತ್ರವೆಂಬ ಸ್ಥಳವಿತ್ತು. ಇದೇ ಪಾಟಲಿಪುತ್ರ ಇಂದು ಪಟ್ನಾವಾಗಿ ಗುರುತಿಸಿಕೊಂಡಿದೆ. ಈ ಪಾಟಲಿಪುತ್ರ ಆಗಿನ ಶಕ್ತಿಸಾಲಿ ಸಾಮ್ರಾಜ್ಯವಾಗಿದ್ದ ಮಗದ್ ನ ರಾಜದಾನಿಯಾಗಿತ್ತು. ಆಗ ಮಗದ್ ನಲ್ಲಿ ನಂದವಂಶದ ಆಳ್ವಿಕೆಯಿತ್ತು. ಅಲ್ಲಿನ ರಾಜ ಧನಾನಂದ್.
ಭಾರತದ ಬದ್ಧ ವೈರಿ ದೇಶ ಪಾಕಿಸ್ತಾನದ ಬಗ್ಗೆ : INTERESTING FACTS
ಒಂದು ದಿನ ಧನಾನಂದ್ ಮಗದ್ ನಲ್ಲಿ ದೊಡ್ಡ ಹೋಮವನ್ನ ಆಯೋಜನೆ ಮಾಡಿದ್ದರು. ಈ ಯಜ್ಞ ನಡೆಯುವಾಗ ಚಾಣಕ್ಯ ಅಲ್ಲಿ ಉಪಸ್ಥಿತರಿದ್ದರು. ಬಳಿಕ ಬ್ರಹ್ಮ ಭೋಜನಕ್ಕೆ ತೆರಳಿದ್ದರು. ಈ ವೇಳೆ ಬ್ರಹ್ಮಭೋಜನದ ಸ್ಥಳಕ್ಕೆ ತೆರಳಿದ್ದ ರಾಜ ಧನಾನಂದ್ ಚಾಣಾಕ್ಯನ ವೇಷ ಭೂಷಣವನ್ನ ನೋಡಿ ತುಂಬಿದ ಭವನದಲ್ಲಿ ಲೇವಡಿ ಮಾಡಿ ಹಾಸ್ಯಮಾಡಿ ಚಾಣಕ್ಯನನ್ನ ಅವಮಾನಿಸಿದ್ದರು. ಅಲ್ದೇ ಬ್ರಹ್ಮ ಭೋಜನದಿಂದ ಮಧ್ಯದಲ್ಲೇ ಎದೇಳುವಂತೆ ಆದೆಶ ನೀಡಿದ್ರು. ಈ ಅವಮಾನದಿಂದ ಕೋಪಗೊಂಡ ಚಾಣಕ್ಯರು ತಕ್ಷಣವೇ ಸಿಟ್ಟಿನಲ್ಲಿ ತಾವು ಕಟ್ಟಿದ್ದ ಜಡೆಯನ್ನ ಬಿಚ್ಚಿ ಧನಾಂನಂದನಿಗೆ ಸವಾಲ್ ಹಾಕ್ತಾರೆ. ನಂದವಂಶದ ನಿರ್ಣಾಮ ಮಾಡುವ ವರೆಗೂ ತನ್ನ ಕೂದಲನ್ನು ಕಟ್ಟುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಅಲ್ಲಿಂದ ಹೊರಟು ಹೋಗ್ತಾರೆ.
ಇಲ್ಲಿಂದಲೇ ಚಾಣಕ್ಯನ ಜೀವನದ ಏಕಮಾತ್ರ ಉದ್ದೇಶ, ಗುರಿ ನಂದ ವಂಶದ ನಿರ್ಣಾಮ ಮಾಡಿ ತಾನು ಆಯ್ಕೆ ಮಾಡಿದವನನ್ನ ರಾಜನಾಗಿ ಮಾಡುವುದು. ಇದೇ ಪ್ರತಿಜ್ಞೆಯಲ್ಲೇ ವಿಂಧ್ಯಾ ಎನ್ನುವ ಕಾಡಿಗೆ ಹೋದ ಚಾಣಕ್ಯ ಅಲ್ಲಿ ಚಿನ್ನದ ನಾಣ್ಯಗಳನ್ನ ತಯಾರಿಸೋದಕ್ಕೆ ಶುರುಮಾಡ್ತಾರೆ. ಇದು ಅಂತಿತ ನಾಣ್ಯಗಳಾಗಿರಲಿಲ್ಲ. ಬದಲಾಗಿ ಒಂದು ಸೀಕ್ರೇಟ್ ಟೆಕ್ ನಿಕ್ ನಿಂದ ತಯಾರಿಸಲಾಗಿದ್ದ ನಾಣ್ಯಗಳು. ಅಂದ್ರೆ 1 ನಾಣ್ಯದಿಂದ 8 ನಾಣ್ಯಗಳನ್ನಾಗಿ ಪರಿವರ್ತಿಸುವ ಕ್ಷಮತೆಯನ್ನ ಹೊಂದಿತ್ತು. ಈ ರೀತಿ ಒಟ್ಟು 800 ಮಿಲಿಯನ್ ನಾಣ್ಯಗಳನ್ನ ತಯಾರಿಸಿದ ಚಾಣಕ್ಯ ಅವನ್ನೆಲ್ಲ ಒಂದು ಮರದ ಕೆಳಗೆ ಗುಂಡಿ ತೋಡಿ ಬಚ್ಚಿಟ್ಟಿದ್ದರು.
ವಿಶ್ವದ ಶಕ್ತಿಶಾಲಿ ಕರೆನ್ಸಿ ಯಾವುದು : ಅಮೆರಿಕನ್ ಡಾಲರ್ ಅಲ್ವೇ ಅಲ್ಲ – ವಿಶ್ವದ ದುಬಾರಿ ಕರೆನ್ಸಿಗಳು..!
ಬಳಿಕ ನಂದ ವಂಶದ ಸಾಮ್ರಾಜ್ಯವನ್ನ ಉರುಳಿಸಿ ರಾಜನಾಗಿ ಆಡಳಿತ ನಡೆಸುವ ಯೋಗ್ಯತೆಯಿರುವ ವ್ಯಕ್ತಯ ಹುಡುಕಾಟದಲ್ಲಿ ಹೊರಟ ಚಾಣಕ್ಯನಿಗೆ ಅಂತಹ ಬಾಲಕ ಕೊನೆಗೂ ಸಿಕ್ಕಿದ್ದ. ಆತನೇ ಚಂದ್ರಗುಪ್ತ ಮೌರ್ಯ. ಆತ ಇತರೇ ಬಾಲಕರ ಜೊತೆ ಹೊಡೆದಾಡಿಕೊಳ್ಳುತ್ತಿದ್ದನನ್ನ ಗಮನಿಸಿದ ಚಾಣಾಕ್ಯ ಆತನ ಬಗ್ಗೆ ಮಾಹಿತಿ ಕಲೆ ಹಾಕುತ್ತಾರೆ. ನಂತರ ಆತ ಮೌರ್ಯ ಸಾಮ್ರಾಜ್ಯದ ರಾಜಕುಮಾರ ಎಂಬ ವಿಚಾರ ಗೊತ್ತಾಗುತ್ತೆ. ರಾಜ್ಯದ ದುರಾಸೆಯಿಂದ ಮೌರ್ಯ ಸಾಮ್ರಾಜ್ಯದ ರಾಜ, ಚಂದ್ರಗುಪ್ತನ ತಂದೆಯ ಹತ್ಯೆಯಾಗಿದ್ದ ಬಳಿಕ ಆತನನ್ನ ರಾಜ್ಯದಿಂದ ಹೊರಗಟ್ಟಿದ್ದ ವಿಚಾರವೂ ಚಾಣಕ್ಯರಿಗೆ ತಿಳಿಯುತ್ತೆ. ಮತ್ತೊಂಂದೆಡೆ ಧನಾನಂದನ ಮಗ ಬಗ್ಭಾತನ ಜೊತೆಗೆ ಸ್ನೇಹವನ್ನ ಬೆಳೆಸಿಕೊಂಡಿದ್ದರು ಚಾಣಕ್ಯ. ಇಬ್ಬರ ನಡುವೆ ಯಾರು ಉತ್ತಮ ಆಡಳಿತಗಾರನಾಗಬಹುದು ಎಂಬ ಆಲೋಚನೆ ಮಾಡಿದ ಚಾಣಾಕ್ಯ ಇಬ್ಬರಿಗೂ ಒಂದು ಪರೀಕ್ಷೆ ನೀಡ್ತಾರೆ. ಇಬ್ಬರಿಗೂ ಒಂದೊಂದು ತಾಯಿತಗಳನ್ನ ಕೊಟ್ಟ ಚಾಣಕ್ಯ ಕತ್ತಿನಲ್ಲಿ ಧರಿಸುವಂತೆ ತಿಳಿಸಿದ್ದರು. ಹೀಗೆ ಒಂದು ದಿನ ಚಾಣಕ್ಯ ಬಗ್ಬಾತನಿಗೆ ಚಾಣಕ್ಯನ ಕತ್ತಿನಿಂದ ಆ ತಾಯತ ತರಲು ಹೆಳ್ತಾರೆ. ಗಾಢ ನಿದ್ರೆಯಲ್ಲಿದ್ದ ಚಾಣಕ್ಯನ ಬಳಿ ತೆರಳಿದ ಬಗ್ಭಾತ ಎಷ್ಟೇ ಪ್ರಯತ್ನ ಪಟ್ಟರು ತಾಯಿತ ತೆಗೆಯಲು ಸಾಧ್ಯವಾಗದೇ ವಿಫಲನಾಗ್ತಾನೆ.
ಪ್ರಪಂಚದಲ್ಲಿ ಅತಿ ಹೆಚ್ಚು ಸ್ಯಾಲರಿ ಕೊಡೋ ದೇಶಗಳಿವು…! INTERESTING FACTS
ಆದ್ರೆ ಇದೇ ಪರೀಕ್ಷೆಯನ್ನ ಚಾಣಕ್ಯ ಚಂದ್ರಗುಪ್ತನಿಗೆ ನೀಡಿದಾಗ ಆ ಬಾಲಕ ತಾಯಿತ ತರುವಲ್ಲಿ ಯಶಸ್ವಿಯಾಗ್ತಾನೆ. ತನ್ನ ತಲ್ವಾರ್ ನಿಂದ ಬಗ್ಭಾತನನ್ನ ಹತ್ಯೆಗೈದು ತಾಯಿತ ತಂದು ಚಾಣಕ್ಯರಿಗೆ ಕೊಡ್ತಾನೆ. ಇಲ್ಲಿಂದ ಚಂದ್ರಗುಪ್ತನಿಗೆ ರಾಜನೀತಿ, ತಲ್ವಾರ್ ಬಾಜಿ, ರಾಜನೈತಿಕತೆಯ ಶಿಕ್ಷಣವನ್ನ ನೀಡಲಿಕ್ಕೆ ಚಾಣಕ್ಯ ಪ್ರಾರಂಭಿಸುತ್ತಾರೆ. ಬಳಿಕ ಬಚ್ಚಿಟ್ಟಿದ್ದ ಚಿನ್ನದ ನಾಣ್ದಯಗಳನ್ನ ತೆಗೆದು ಒಂದು ವಿಶಾಲವಾದ ಸೇನೆಯನ್ನ ತಯಾರು ಮಾತಡಾರೆ. ಚಾಣಕ್ಯ ಬಳಿಕ ಮಗದ್ ಗೆ ದಂಡೆತ್ತಿ ಹೋಗಿ ನಂದವಂಶವನ್ನ ಸೋಲಿಸಿ ರಾಜ್ಯವನ್ನ ವಶಕ್ಕೆ ಪಡೆಯುತ್ತಾರೆ. ಹೀಗೆ ತನಗಾದ ಅಪಮಾನಕ್ಕೆ ಸೇಡುತೀರಿಸಿಕೊಂಡ ಚಾಣಕ್ಯ ಕೊನೆಯ ಕ್ಷಣದ ವರೆಗೂ ಮಗದ್ ನಲ್ಲಿ ಚಂದ್ರಗುಪ್ತನ ಆ ಸ್ಥಾನದಲ್ಲಿ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು.