ಅಂತಾರಾಷ್ಟ್ರೀಯ ಗಾಲ್ಫ್ ಆಟಗಾರ ಟೈಗರ್ ವುಡ್ಸ್ ( Tiger Woods) ಕಾರು ಅಪಘಾತ : ಸ್ಥಿತಿ ಗಂಭೀರ
ಕ್ಯಾಲಿಫೋರ್ನಿಯಾ : ಖ್ಯಾತ ಅಂತಾರಾಷ್ಟ್ರೀಯ ಗಾಲ್ಫ್ ಆಟಗಾರ ಟೈಗರ್ ವುಡ್ಸ್ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ಸದ್ಯ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದೆ.
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಈ ಘಟನೆ ನಡೆದಿದ್ದು, ಟೈಗರ್ ವುಡ್ಸ್ ನಿಯಂತ್ರಣ ತಪ್ಪಿ ಕಾರು ಕಂದಕಕ್ಕೆ ಉರುಳಿದೆ.
ಈ ವೇಳೆ ಕಾರಿನಲ್ಲಿದ್ದ ಟೈಗರ್ ವುಡ್ಸ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಟೈಗರ್ ವುಡ್ ಅವರ ಕಾಲಿಗೆ ಅನೇಕ ಗಾಯಗಳಾಗಿವೆ ಎಂದು ವರದಿಯಾಗಿದ್ದು, ಅವರ ಕಾಲಿಗೆ ಸರ್ಜರಿ ಮಾಡಲಾಗಿದೆ ಎಂದು ಅವರ ಏಜೆಂಟ್ ಮಾರ್ಕ್ ಸ್ಟೈನ್ ಬರ್ಗ್ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇನ್ನು ಟೈಗರ್ ವುಡ್ಸ್ ಈ ಹಿಂದೆ 2 ಬಾರಿ ಅಪಘಾತದಲ್ಲಿ ಗಾಯಗೊಂಡು ಚೇತರಿಸಿಕೊಂಡಿದ್ದರು. 2009ರಲ್ಲಿ ಇದಕ್ಕಿಂತಲೂ ಭೀಕರವಾಗಿ ಅಪಘಾತ ನಡೆದಿತ್ತು.
