ನಡುರಸ್ತೆಯಲ್ಲೇ ತಂದೆಗೆ ಬ್ಯಾಟ್ ನಿಂದ ಹೊಡೆಯಲು ಯತ್ನಿಸಿದ ಮಗ
ತಂದೆ-ತಾಯಿ ಪ್ರತ್ಯಕ್ಷ ದೇವರು. ಅಪ್ಪ ಅಂದರೆ ಹಾಗೆ, ಹೀಗೆ ಎಂದು ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಾರೆ. ಆದರೆ ಕೆಲವೊಂದು ಸಾರಿ ಆಸ್ತಿ ವಿಚಾರಕ್ಕೆ ಮಕ್ಕಳು ಜಗಳವಾಡುತ್ತಾರೆ. ಇಂತಹ ಆಸ್ತಿ ಸಲುವಾಗಿ ತಂದೆ-ಮಕ್ಕಳ ಜಗಳವನ್ನು ನಾವು ಪ್ರತಿನಿತ್ಯ ನೋಡುತ್ತೇವೆ. ಆಸ್ತಿ ವಿಚಾರಕ್ಕೆ ಮಗ ತಂದೆಯತ್ನೇ ಕೊಲೆ ಮಾಡುವ ಹಂತಕ್ಕೆ ಹೋಗಿರುತ್ತಾನೆ. ಹುಟ್ಟಿದಾಗಿನಿಂದ ಯೌನಾವಸ್ಥೆವರೆಗು ಸಲುಹಿ, ಸಾಕಿ ಮಕ್ಕಳನ್ನು ಒಂದು ಹಂತಕ್ಕೆ ತರುತ್ತಾರೆ.
ಆದರೆ ಮಕ್ಕಳು ಆಸ್ತಿ ವಿಚಾರಾಕ್ಕೆ ಹೀನ ಕೃತ್ಯ ಎಸಗುತ್ತಾರೆ. ಅದೇ ರೀತಿಯಾಗಿ ರಾಜಸ್ಥಾನದ ಜೋಧ್ಪುರದಲ್ಲಿ ವೃದ್ಧ ತಂದೆಗೆ ಮಗ ನಡು ರಸ್ತೆಯಲ್ಲಿ ಬ್ಯಾಟಿನಿಂದ ಹೊಡೆಯಲು ಯತ್ನಿಸಿದ್ದಾನೆ. ವರದಿಗಳ ಪ್ರಕಾರ, ವ್ಯಕ್ತಿಯು ತನ್ನ ತಂದೆಯೊಂದಿಗೆ ಮನೆಯ ವಿಷಯಗಳಿಗೆ ಸಂಬಂಧಿಸಿದಂತೆ ಆಗಾಗ್ಗೆ ಜಗಳವಾಡುತ್ತಾನೆ. ಭಾನುವಾರವೂ ತನ್ನ ತಂದೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ.
ಅಲ್ಲದೇ ತಂದೆಯನ್ನು ಅರೆಬೆತ್ತಲೆ ಸ್ಥತಿಯಲ್ಲಿ ನಡುರಸ್ತೆಯಲ್ಲಿ ನಿಲ್ಲಿಸಿ ತಂದೆಯೊಂದಿಗೆ ಜಗಳವಾಡಿ ಹಲ್ಲೆ ಮಾಡಿದ್ದಾನೆ. ತಂದೆಗೆ ಮಗ ಥಳಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ಭಾರೀ ವೈರಲ್ ಆಗಿದ್ದು, ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಪೊಲೀಸರು ಮಗನನ್ನು ಬಂಧಿಸಿದ್ದಾರೆ. ಸಿಆರ್ಪಿಸಿ 151ರ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಇಂಡಿಯಾಡಾಟ್ ಕಾಮ್ ವರದಿ ಮಾಡಿದೆ.