ಅಂತರಾಷ್ಟ್ರೀಯ ಚಹಾ ದಿನ – ದಿನಾಂಕ ,ಇತಿಹಾಸ, ಮಹತ್ವ ತಿಳಿಯಿರಿ.
ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ವಿಯೆಟ್ನಾಂ, ಇಂಡೋನೇಷಿಯಾ, ಕೀನ್ಯಾ, ಮಲಾವಿ, ಮಲೇಷ್ಯಾ, ಉಗಾಂಡಾ ಮತ್ತು ತಾಂಜಾನಿಯಾ ಸೇರಿದಂತೆ ಅನೇಕ ರಾಷ್ಟ್ರಗಳು ಡಿಸೆಂಬರ್ 15 ರಂದು ಅಂತರರಾಷ್ಟ್ರೀಯ ಚಹಾ ದಿನವನ್ನು ಆಚರಿಸುತ್ತವೆ. ಆದರೆ ವಿಶ್ವ ಸಂಸ್ಥೆ ಮೇ 21 ನ್ನ ಅಂತರಾಷ್ಟ್ರೀಯ ಟೀ ದಿನ ಎಂದು ಆಚರಿಸುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆಹೊಂದಿರುವ ಪರಿಮಳಯುಕ್ತ ಪಾನೀಯ ಟೀ.
ಕುಡಿಯುವ ನೀರಿನ ನಂತರ, ವಿಶ್ವದ ಎರಡನೇ ಅತ್ಯಂತ ಜನಪ್ರಿಯ ಪಾನೀಯ ಎಂಬ ಖ್ಯಾತಿಗೆ ಟೀ ಪಾತ್ರವಾಗಿದೆ. ಕೆಲವು ಜನರ ಜೀವನದಲ್ಲಿ ಚಹಾ ಒಂದು ಪ್ರಮುಖ ಪಾತ್ರವನ್ನೇ ವಹಿಸಿದೆ. ಚೀನಾ ಪ್ರಸ್ತುತ ವಿಶ್ವದ ಅತಿದೊಡ್ಡ ಚಹಾ ರಫ್ತುದಾರ. 2007 ರಲ್ಲಿ ಟೀ ಬೋರ್ಡ್ ಆಫ್ ಇಂಡಿಯಾ ನಡೆಸಿದ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ಉತ್ಪಾದನೆಯಾಗುವ ಒಟ್ಟು ಚಹಾದ ಸುಮಾರು 80% ಭಾಗವನ್ನ ದೇಶೀಯ ಜನರೆ ಸೇವಿಸುತ್ತಾಸರೆ.
ಅಂತಾರಾಷ್ಟ್ರೀಯ ಟೀ ದಿನ 2022: ಇತಿಹಾಸ
2005 ರಲ್ಲಿ, ಮೊದಲ ITD ಅನ್ನು ಭಾರತದ ನವದೆಹಲಿಯಲ್ಲಿ ನಡೆಸಲಾಯಿತು. ಮತ್ತೊಂದೆಡೆ, ಭಾರತ ಸರ್ಕಾರವು UN ಆಹಾರ ಮತ್ತು ಕೃಷಿ ಸಂಸ್ಥೆಗೆ 2015 ರಲ್ಲಿ ಅಂತರರಾಷ್ಟ್ರೀಯ ಚಹಾ ದಿನವನ್ನು ಪ್ರಪಂಚದಾದ್ಯಂತ ವಿಸ್ತರಿಸಲು ಶಿಫಾರಸು ಮಾಡಿತು.
ವಿಶ್ವಸಂಸ್ಥೆಯು ಮೇ 21 ರಂದು ಅಂತರರಾಷ್ಟ್ರೀಯ ಚಹಾ ದಿನ ಎಂದು ಗೊತ್ತುಪಡಿಸಿತು ಏಕೆಂದರೆ ಹೆಚ್ಚಿನ ಚಹಾ-ಉತ್ಪಾದಿಸುವ ದೇಶಗಳಲ್ಲಿ ಚಹಾ ಕೊಯ್ಲು ಅವಧಿಯು ಮೇ ತಿಂಗಳಲ್ಲಿ ಪ್ರಾರಂಭವಾಗುತ್ತದೆ.
ಅಂತಾರಾಷ್ಟ್ರೀಯ ಟೀ ದಿನ 2022: ಮಹತ್ವ
ಚಹಾ ಕೃಷಿಗೆ ಹೆಚ್ಚಿನ ಗಮನ ಮತ್ತು ಶ್ರಮದ ಅಗತ್ಯವಿದೆ. ಪ್ರತಿ ವರ್ಷ, ಚಹಾ ಉತ್ಪಾದನೆಯನ್ನು ಎದುರಿಸುತ್ತಿರುವ ಸವಾಲುಗಳು ಮತ್ತು ಜಾಗತಿಕ ಚಹಾ ವ್ಯಾಪಾರವು, ಚಹಾ ತೋಟಗಳು, ಸ್ಥಳೀಯ ಚಹಾ ಬೆಳೆಗಾರರು ಮತ್ತು ಗ್ರಾಹಕರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಸರ್ಕಾರ ಮತ್ತು ಸಾರ್ವಜನಿಕರ ಗಮನವನ್ನು ಸೆಳೆಯಲು ಅಂತರರಾಷ್ಟ್ರೀಯ ಚಹಾ ದಿನವನ್ನು ಸ್ಮರಿಸಲಾಗುತ್ತದೆ.
ವಿಶ್ವಸಂಸ್ಥೆಯ ಪ್ರಕಾರ, ಟೀ ಚಿಕಿತ್ಸಕ ಮೌಲ್ಯವನ್ನು ಹೊಂದಿದೆ ಮತ್ತು ಜನರ ಆರೋಗ್ಯಕ್ಕೆ ಸಹಾಯ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಕಾಶ್ಮೀರಿ ಕಹ್ವಾ, ಜಿಂಜರ್ ಟೀ, ತುಳಸಿ ಟೀ, ಸುಲೈಮಾನಿ ಟೀ, ರೋಂಗಾ ಸಾಹ್, ಮಸಾಲಾ ಟೀ, ಲೆಮನ್ಗ್ರಾಸ್ ಟೀ, ಏಲಕ್ಕಿ ಟೀ, ಲೆಂಬು ಚಾಯ್, ಗ್ರೀನ್ ಟೀ, ಗುರ್ ಗುರ್ ಚಾಯ್/ಬೆಣ್ಣೆ ನೀವು ರುಚಿನೋಡಬೇಕಾದ ಕೆಲವು ಚಹಾಗಳಾಗಿವೆ.