Womens DaY : ಮಹಿಳಾ ದಿನಾಚರಣೆ ಹಿನ್ನೆಲೆ ಏನು..?? ಪ್ರಾರಂಭವಾಗಿದ್ದು ಹೇಗೆ ಗೊತ್ತಾ..??
ಮಗಳಾಗಿ , ಪತ್ನಿಯಾಗಿ , ತಾಯಿಯಾಗಿ , ಗುರುವಾಗಿ , ಗೆಳತಿಯಾಗಿದೆ , ಎಲ್ಲರನ್ನೂ ನಗಿಸುತ್ತಾ , ಇತರರ ಖುಷಿಯಲ್ಲಿ ತನ್ನ ಶ್ರಮ , ನೋವು ಎಲ್ಲವನ್ನೂ ಮರೆಯುವ , ಕರುಣಾಮಯಿ , ಕ್ಷಮಯಾಧರಿತ್ರಿ ಸ್ತ್ರೀ…
ಎಲ್ಲ ಕಷ್ಟಗಳನ್ನು ಮೆಟ್ಟಿ ನಿಲ್ಲುವ ಗಟ್ಟಿಗಿತ್ತಿ ಮಹಿಳೆ… ಸಾಮಾಜದಲ್ಲಿ ಪುರುಷರಿಗಿಂತ ತಾವು ಯಾವ ಕ್ಷೇತ್ರದಲ್ಲೂ ಕಡಿಮೆಯಿಲ್ಲ ಎಂಬುದನ್ನ ತೋರಿಸಿಕೊಟ್ಟಿರುವ ಸಾಧಕಿಯೂ ಕೂಡ.. ಹೆಣ್ಣು ಸಮಾಜದ ಕಣ್ಣು..
ಇಂದು ಮಾರ್ಚ್ 8 … ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ,, ಮಹಿಳೆಯರಿಗೆ ಎಲ್ಲರೂ ಒಂದು ಸಲಾಂ ಹೇಳಬೇಕು.. ಈ ಬಾರಿ 2022ರಲ್ಲಿ ಸುಸ್ಥಿರ ನಾಳೆಗಾಗಿ ಇಂದು ಲಿಂಗ ಸಮಾನತೆ ಎನ್ನುವ ಧ್ಯೇಯವಾಕ್ಯದೊಂದಗೆ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. (Gender Equality Today for a Sustainable Tomorrow)..
ಸ್ತ್ರೀ…. ನಿನಗೆ ಬೇರೆ ಹೆಸರು ಬೇಕೆ ಸ್ತ್ರೀ ಎಂದರೆ ಅಷ್ಟೇ ಸಾಕೇ… ಎಲ್ಲಾ ಕಷ್ಟದ ದಿನಗಳನ್ನು ಎದುರಿಸಿ ಇಂದು ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಛಾಪು ಮೂಡಿಸಿರುವ ಮಹಿಳೆಯ ಆತ್ಮಸ್ಥೈರ್ಯಕ್ಕೆ ಅವರೇ ಸಾಟಿ.. ಮಹಿಳೆಯರು ಮನಸ್ಸು ಮಾಡಿದ್ರೆ ,,, ಏನ್ ಬೇಕಾದ್ರೂ ಮಾಡಬಹುದು.. ಅಂದ್ಹಾಗೆ 45 ವರರ್ಷಗಳಿಂದ ಆಚರಿಸಿಕೊಂಡು ಬರಲಾಗಿರುವ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆ ಏನು..?? ಆವಾಗ ಆಚರಣೆಗೆ ಬಂತು.??
1908ರ ಫೆಬ್ರವರಿಯಲ್ಲಿಯೇ ಜಾಗತಿಕ ಮಟ್ಟದಲಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಗಿತ್ತು. ಆದ್ರೆ ಅಧಿಕೃತವಾಗಿ ಇದನ್ನ ಜಾರಿಗೆ ತಂದಿದ್ದು ಮಾತ್ರ 1975ರಲ್ಲಿ… ಹೌದು ಮೊದಲ ಬಾರಿಗೆ ವಿಶ್ವಸಂಸ್ಥೆ 1975ರಲ್ಲಿ ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನ ಆಚರಣೆಗೆ ತಂದಿತ್ತು..
1908ರಲ್ಲಿ ಅಮೆರಿಕದಲ್ಲಿ ಕಾರ್ಮಿಕ ಚಳವಳಿ ನಡೆದಿತ್ತು. ಕೆಲಸ ಮಾಡುತ್ತಿದ್ದ ಮಹಿಳೆಯರು ತಮ್ಮ ಹಕ್ಕಿಗಾಗಿ ಹೋರಾಟ ನಡೆಸಿದ್ದರು.. ಈ ಚಳುವಳಿಯಲ್ಲಿ ಸುಮಾರು 15,000 ಮಹಿಳೆಯರು ನ್ಯೂಯಾರ್ಕ್ ಬೀದಿಗಳಲ್ಲಿ ಮೆರವಣಿಗೆ ನಡೆಸಿದ್ದರು. ತಮ್ಮ ಕೆಲಸದ ಅವಧಿಯನ್ನು ಕಡಿಮೆ ಮಾಡಿ ವೇತನದ ಶ್ರೇಣಿಯನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದ್ದರು.. ಜೊತೆಗೆ ಮಹಿಳೆಯರಿಗೂ ಮತದಾನದ ಹಕ್ಕು ನೀಡಬೇಕೆಂದು ಆಗ್ರಹಿಸಿದ್ದರು.
ಅಂದಿನ ಅಮೆರಿಕಾ ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಿತು. ಹೋರಾಟದ ಒಂದೇ ವರ್ಷಕ್ಕ ಅಂದ್ರೆ 1909 ರಲ್ಲಿ ಫೆಬ್ರವರಿ 28ರಂದು ಮಹಹಿಳಾ ದಿನವನ್ನಾಗಿ ಘೋಷಣೆ ಮಾಡಿತ್ತು..
ನಂತರ 1975 ರಲ್ಲಿ ವಿಶ್ವಸಂಸ್ಥೆಯು ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲು ಅಧಿಕೃತವಾಗಿ ಘೋಷಣೆ ಮಾಡಿತು.
ಆದ್ರೆ ಫೆಬ್ರಿ 28 ಇದ್ದದ್ದು ಮಾರ್ಚ್ 8 ಆಗಿದ್ದು ಹೇಗೆ..??
ಆದ್ರೆ 1909 – 1975 ರ ನಡುವೆ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಹಲವಾರು ಹೋರಾಟಗಳನ್ನ ಮಾಡಿದರು..
ಮುಖ್ಯವಾಗಿ 1917 ರಲ್ಲಿ ಅಂದ್ರೆ ಮೊದಲ ಮಹಾಯುದ್ಧದ ಸಮಯದಲ್ಲಿ ರಷ್ಯಾದ ಮಹಿಳೆಯರು ಆಹಾರಕ್ಕಾಗಿ ಚಳುವಳಿ ನಡೆಸಿದ್ದರು. ಅದಾಗಿ ಕೆಲವು ದಿನಗಳ ನಂತರ ಚಕ್ರವರ್ತಿ ನಿಕೋಲಸ್ ರಾಜೀನಾಮೆ ನೀಡಿದರು. ಈ ವೇಳೆ ಮಹಿಳೆಯರು ಮತದಾನದ ಹಕ್ಕನ್ನು ಪಡೆದರು. ಇದರ ಹಿನ್ನಲೆಯಲ್ಲಿ ಯುರೋಪ್‌ನಲ್ಲಿ ಮಹಿಳೆಯರು ಕೆಲವು ದಿನಗಳ ನಂತರ ಮಾರ್ಚ್ 8 ರಂದು ಶಾಂತಿ ಕಾರ್ಯಕರ್ತರನ್ನು ಬೆಂಬಲಿಸಲು ಜಾತಾಗಳನ್ನ ಕೈಗೊಂಡಿದ್ದರು.. ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು.. ಅದಾಗಿನಿಂದಲೇ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಾರ್ಚ್ 8 ರಂದು ಪ್ರಾರಂಭಿಸಲಾಯಿತು..