ಬೆಂಗಳೂರು : ರಾಜ್ಯದಲ್ಲಿ ಲಾಕ್ ಡೌನ್ ಸಡಿಲಗೊಂಡು ಅನ್ ಲಾಕ್ 1 ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಬಸ್ ಸಂಚಾರ ಪ್ರಾರಂಭವಾಗಿದೆ. ಪ್ರಾರಂಭದಲ್ಲಿ ಅಂತರ್ ಜಿಲ್ಲೆಗಳಿಗೆ ಮಾತ್ರ ಬಸ್ ಸಂಚಾರವಿತ್ತು. ಇದೀಗ ಹಂತ ಹಂತವಾಗಿ ಅಂತರ್ ರಾಜ್ಯ ಬಸ್ ಸಂಚಾರ ಪ್ರಾರಂಭವಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಸಾರಿಗೆ ಇಲಾಖೆ, ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಸಾರಿಗೆಗಳು ಜೂನ್ 17 ರಂದು ಆಂದ್ರಪ್ರದೇಶಕ್ಕೆ ಸಂಚಾರ ಪ್ರಾರಂಭ ಮಾಡುತ್ತವೆ. ಬೆಂಗಳೂರಿನಿಂದ ಅನಂತಪುರ, ಹಿಂದುಪುರ, ಕದ್ರಿ, ಪುಟ್ಟಪರ್ತಿ, ಕಲ್ಯಾಣದುರ್ಗ, ರಾಯದುರ್ಗ, ಕಡಪ, ಪ್ರೂದತ್ತೂರು, ಮಂತ್ರಾಲಯ, ತಿರುಪತಿ, ಚಿತ್ತೂರು, ಮದನಪಲ್ಲಿ, ನೆಲ್ಲೂರು, ಮತ್ತು ವಿಜಯವಾಡಕ್ಕೆ ಬಸ್ ಸಂಚಾರ ಪ್ರಾರಂಭವಾಗಿದೆ. ಬಳ್ಳಾರಿಯಿಂದ ವಿಜಯವಾಡ, ಅನಂತಪುರ, ಕರ್ನೂಲ್, ಮಂತ್ರಾಲಯ , ರಾಯಚೂರು ಗೆ ಬಸ್ ತೆರಳುತ್ತದೆ. ಇನ್ನೂ ಶಾಹಪುರ ದಿಂದ ಮಂತ್ರಾಲಯ ಮತ್ತು ಕರ್ನೂಲ್ ಗೆ ಬಸ್ ಸಂಚಾರವಿರುತ್ತದೆ. ಆದರೆ ಹವಾನಿಯಂತ್ರಿತ ರಹಿತ ಬಸ್ಸುಗಳು ಮಾತ್ರ ಕಾರ್ಯಚರಣೆ ನಡೆಸಲಿವೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.








