IOCL Recruitment 2025 – ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಇಲಾಖೆಯಿಂದ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ.
ಉದ್ಯೋಗ ವಿವರಗಳು
ಇಲಾಖೆ ಹೆಸರು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL)
ಹುದ್ದೆಗಳ ಹೆಸರು ಅಪ್ರೆಂಟಿಸ್‌ಗಳು
ಒಟ್ಟು ಹುದ್ದೆಗಳು 457 (ಕರ್ನಾಟಕ – 3 )
ಅರ್ಜಿ ಸಲ್ಲಿಸುವ ಬಗೆ ಆನ್ಲೈನ್ (Online)
ಉದ್ಯೋಗ ಸ್ಥಳ – ಭಾರತಾದ್ಯಂತ
ಹುದ್ದೆಗಳ ವಿವರ:
ತಾಂತ್ರಿಕ ಅಪ್ರೆಂಟೀಸ್ (ಮೆಕಾನಿಕಲ್)
ತಾಂತ್ರಿಕ ಅಪ್ರೆಂಟೀಸ್ (ವಿದ್ಯುತ್)
ತಾಂತ್ರಿಕ ಅಪ್ರೆಂಟೀಸ್ (ದೂರಸಂಪರ್ಕ ಮತ್ತು ಉಪಕರಣ)
ಟ್ರೇಡ್ ಅಪ್ರೆಂಟೀಸ್ (ಅಸಿಸ್ಟೆಂಟ್ – ಮಾನವ ಸಂಪತ್ತು)
ಟ್ರೇಡ್ ಅಪ್ರೆಂಟೀಸ್ (ಅಕೌಂಟೆಂಟ್)
ಡೇಟಾ ಎಂಟ್ರಿ ಆಪರೇಟರ್ (ಹೊಸಬರು/ಕೌಶಲ್ಯ ಪ್ರಮಾಣಪತ್ರ ಹೊಂದಿರುವ ಅಭ್ಯರ್ಥಿಗಳು)
ವಿದ್ಯಾರ್ಹತೆ :
ತಾಂತ್ರಿಕ ಅಪ್ರೆಂಟೀಸ್ (ಮೆಕಾನಿಕಲ್) – ಅಭ್ಯರ್ಥಿಗಳು 12ನೇ ತರಗತಿ ಪಾಸಾಗಿರಬೇಕು ಅಥವಾ ಮೆಕಾನಿಕಲ್/ಆಟೋಮೊಬೈಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾ ಪಡೆದಿರಬೇಕು.
ತಾಂತ್ರಿಕ ಅಪ್ರೆಂಟೀಸ್ (ವಿದ್ಯುತ್) – ಅಭ್ಯರ್ಥಿಗಳು 12ನೇ ತರಗತಿ ಪಾಸಾಗಿರಬೇಕು ಅಥವಾ ಎಲೆಕ್ಟ್ರಿಕಲ್/ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾ ಪಡೆದಿರಬೇಕು.
ತಾಂತ್ರಿಕ ಅಪ್ರೆಂಟೀಸ್ (ದೂರಸಂಪರ್ಕ ಮತ್ತು ಉಪಕರಣ) – ಅಭ್ಯರ್ಥಿಗಳು 12ನೇ ತರಗತಿ ಪಾಸಾಗಿರಬೇಕು ಅಥವಾ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್, ಎಲೆಕ್ಟ್ರಾನಿಕ್ಸ್ & ಟೆಲಿಕಮ್ಯುನಿಕೇಶನ್, ಎಲೆಕ್ಟ್ರಾನಿಕ್ಸ್ & ರೇಡಿಯೋ ಕಮ್ಯುನಿಕೇಶನ್, ಇನ್ಸ್ಟ್ರುಮೆಂಟೇಶನ್ & ಕಂಟ್ರೋಲ್, ಇನ್ಸ್ಟ್ರುಮೆಂಟೇಶನ್ & ಪ್ರೊಸೆಸ್ ಕಂಟ್ರೋಲ್ ಅಥವಾ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾ ಪಡೆದಿರಬೇಕು.
ಟ್ರೇಡ್ ಅಪ್ರೆಂಟೀಸ್ (ಅಸಿಸ್ಟೆಂಟ್ – ಮಾನವ ಸಂಪತ್ತು) – ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಪದವಿ (Graduation) ಪಡೆದಿರಬೇಕು.
ಟ್ರೇಡ್ ಅಪ್ರೆಂಟೀಸ್ (ಅಕೌಂಟೆಂಟ್) – ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಪದವಿ (Graduation) ಪಡೆದಿರಬೇಕು.
ಡೇಟಾ ಎಂಟ್ರಿ ಆಪರೇಟರ್ (ಹೊಸಬರು/ಕೌಶಲ್ಯ ಪ್ರಮಾಣಪತ್ರ ಹೊಂದಿರುವ ಅಭ್ಯರ್ಥಿಗಳು) – ಅಭ್ಯರ್ಥಿಗಳು 12ನೇ ತರಗತಿ ಪಾಸಾಗಿರಬೇಕು.
ವಯೋಮಿತಿ:
ಅಭ್ಯರ್ಥಿಯು 28-ಫೆಬ್ರವರಿ-2025 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 24 ವರ್ಷಗಳನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆ:
ಒಬಿಸಿ (ಎನ್‌ಸಿಎಲ್) ಅಭ್ಯರ್ಥಿಗಳು: 03 ವರ್ಷಗಳು
ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು: 05 ವರ್ಷಗಳು
ಅಂಗವಿಕಲ (ಸಾಮಾನ್ಯ) ಅಭ್ಯರ್ಥಿಗಳು: 10 ವರ್ಷಗಳು
ಅರ್ಜಿ ಶುಲ್ಕ:
ಅರ್ಜಿ ಶುಲ್ಕ ಇರುವುದಿಲ್ಲ.
ಆಯ್ಕೆ ವಿಧಾನ:
ಅರ್ಹತಾ ಪಟ್ಟಿ
ದಾಖಲೆಗಳ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
ಪ್ರಾರಂಭ ದಿನಾಂಕ 10-ಫೆಬ್ರುವರಿ-2025
ಕೊನೆಯ ದಿನಾಂಕ 03-ಮಾರ್ಚ್-2025








