ಆರ್ಡರ್ ಮಾಡಿದ ಕೆಲವೇ ನಿಮಿಷಗಳಲ್ಲಿ ಬರುತ್ತೆ ಆಪಲ್ iPhone 14
ಆಪಲ್ ಆನ್‌ಲೈನ್ ಸ್ಟೋರ್ ಅಥವಾ ಇತರ ಜನಪ್ರಿಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಹೊಸ iPhone 14 ಸರಣಿ ಸ್ಮಾರ್ಟ್ ಫೋನ್ ತರಿಸಿಕೊಳ್ಳಲು ಸಾಧ್ಯವಾಗದಿದ್ದ ಚಿಂತಿಸಬೇಕಿಲ್ಲ. ಪುಡ್ ಆರ್ಡರ್ ಮಾಡಿದಂತೆ ಕೆಲವೇ ಕ್ಷಣಗಳಲ್ಲಿ ಐಪೋನ್ 14 ಅನ್ನ ತರಿಸಿಕೊಳ್ಳಬಹುದು.
Zomato-ಮಾಲೀಕತ್ವದ Blinkit, ಸಾಮಾನ್ಯವಾಗಿ ಆಹಾರ ಅಥವಾ ದಿನಸಿ ವಿತರಣಾ ಸೇವೆಯನ್ನ ಒದಗಿಸುತ್ತಿದ್ದು, Apple ಮರು ಮಾರಾಟಗಾರ ಯೂನಿಕಾರ್ನ್ ಜೊತೆಗೆ ತನ್ನ ಪ್ಲಾಟ್‌ಫಾರ್ಮ್ ಮೂಲಕ ಐಫೋನ್ 14-ಸರಣಿಯ ಮೊಬೈಲ್ ಗಳನ್ನ ಮಾರಾಟ ಮಾಡಲು ಪಾಲುದಾರಿಕೆ ಮಾಡಿಕೊಂಡಿದೆ.
ಮುಂಬೈ ಮತ್ತು ದೆಹಲಿಯಲ್ಲಿರುವ Blinkit ಅಪ್ಲಿಕೇಶನ್‌ನ ಬಳಕೆದಾರರು ಆಪ್ ಮೂಲಕ iPhone 14, iPhone 14 Plus, iPhone 14 Pro ಮತ್ತು iPhone 14 Pro Max ನ್ನು ಸರಳವಾಗಿ ಖರೀದಿಸಬಹುದು. ವಿತರಣಾ ವ್ಯಾಪ್ತಿಯ ಒಳಗಿದ್ದರೆ ತಮ್ಮ ಹೊಸ ಫೋನ್ ಇನ್ನೂ ವೇಗವಾಗಿ ಪಡೆಯಬಹುದು.
Blinkit ನ ಸಂಸ್ಥಾಪಕ ಅಲ್ಬಿಂದರ್ ದಿಂಡ್ಸಾ ಇತ್ತೀಚೆಗೆ ಟ್ವಿಟರ್‌ನಲ್ಲಿ ಈ ಫೀಚರ್ಸ ನ್ನ ಘೋಷಿಸಿದ್ದಾರೆ.
ಈ ಅಪ್ಲಿಕೇಶನ್ Android ಮತ್ತು iOS ಎರಡರಲ್ಲೂ ಲಭ್ಯವಿದ್ದರೂ, ಬಳಕೆದಾರರು iPhone ಅನ್ನು ಖರೀದಿಸಲು ಸಾಧ್ಯವಾಗುಬೇಕಾದರೆ ಇತ್ತೀಚಿನ ಆವೃತ್ತಿಗೆ update ಮಾಡಿಕೊಂಡಿರಬೇಕು.
iPhone 14 ಸರಣಿ: ಹೊಸತೇನಿದೆ?
Apple iPhone 14 ಸರಣಿಯ ಮೊಬೈಲ್ ಗಳು ಈ ವರ್ಷ iPhone 14, 14 Plus ಮತ್ತು Pro ಮತ್ತು Pro Max ಸೇರಿದಂತೆ ನಾಲ್ಕು ರೂಪಾಂತರಗಳಲ್ಲಿ ಬರುತ್ತದೆ. ಪ್ರೊ ಮತ್ತು ಪ್ರೊ ಅಲ್ಲದ ಮಾದರಿಗಳ ನಡುವೆ ಹಲವಾರು ವ್ಯತ್ಯಾಸಗಳಿವೆ.
ಪ್ರೊ-ಅಲ್ಲದ ಮಾಡೆಲ್ ಗಳಲ್ಲಿ (iPhone 14 ಮತ್ತು iPhone 14 Plus) ಹಳೆಯ A15 ಚಿಪ್ ಅನ್ನು ಒಳಗೊಂಡಿರುತ್ತವೆ ಮತ್ತು ಡ್ಯುಯಲ್ ಫೇಸಿಂಗ್ ಕ್ಯಾಮೆರಾದೊಂದಿಗೆ ಬರುತ್ತವೆ
ಪ್ರೊ-ಮಾಡೆಲ್‌ಗಳು (iPhone 14 Pro ಮತ್ತು iPhone 14 Pro Max) ಹೊಸ, ಹೆಚ್ಚು ಶಕ್ತಿಶಾಲಿ A16 ಬಯೋನಿಕ್ ಚಿಪ್ ಜೊತೆಗೆ ಹೊಸ 48MP ಮುಖ್ಯ ಕ್ಯಾಮೆರಾ ಮತ್ತು ಹೊಸ ಡೈನಾಮಿಕ್ ಐಲ್ಯಾಂಡ್ ನಾಚ್‌ನೊಂದಿಗೆ ಬರುತ್ತವೆ.