ಐಫೋನ್ ಖರೀದಿಯಲ್ಲಿ ಫ್ಲಿಪ್‌ಕಾರ್ಟ್ ಬಂಪರ್ ಡಿಸ್ಕೌಂಟ್ – ಇಂದೇ ಕೊನೆ ದಿನ..
ಹೋಳಿ ಹಬ್ಬದ ಪ್ರಯುಕ್ತ ಬಂಪರ್ ಆಫರ್ ಒಂದನ್ನ ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ಪ್ರಾರಂಭಿಸುತ್ತಿದೆ. ಮಾರ್ಚ್ 3 ರ ರಿಂದಲೇ ಈ ಆಫರ್ ಗಳು ಶುರುವಾಗಿವೇ ಆಫರ್ ಮುಗಿಯಲು ಇಂದೇ ಕೊನೆ ದಿನ.
ಆಪಲ್ ಐಫೋನ್, ಏರ್‌ಪಾಡ್‌ಗಳು, ಮ್ಯಾಕ್‌ಬುಕ್‌ಗಳು ಸೇರಿದಂತೆ ಹೆಚ್ಚಿನ ಶ್ರೇಣಿಯ ಉತ್ಪನ್ನಗಳ ಮೇಲೆ ಗಮನಾರ್ಹ ರೀತಿಯಲ್ಲಿ ರಿಯಾಯಿತಿಯನ್ನ ಘೋಷಿಸಲಾಗಿದೆ. 1 ಸಾವಿರಕ್ಕೂ ಹೆಚ್ಚು ಬ್ರಾಂಡ್ ಗಳ ಮೇಲೆ 1 ಲಕ್ಷಕ್ಕೂ ಹೆಚ್ಚು ಉತ್ಪನ್ನಗಳ ಮೇಲೆ 80 % ರಿಯಾಯಿತಿಯನ್ನ ನೀಡಲಾಗುತ್ತಿದೆ.
ಆಪಲ್ ಐಫೋನ್ 13 ನ ಫ್ಲಿಪ್‌ಕಾರ್ಟ್ ಬೆಲೆ 69,000 ರೂ ಇದೆ. ಖರೀದಿದಾರರು ಹಳೆಯ ಸ್ಮಾರ್ಟ್‌ಫೋನ್ ವಿನಿಮಯದ ಮೂಲಕ 23,000 ರೂ.ಗಳವರೆಗೆ ಹೆಚ್ಚುವರಿ ರಿಯಾಯಿತಿಯನ್ನ ಪಡೆಯಬಹುದು. ಇಷ್ಟೆ ಅಲ್ಲದೇ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್‌ನಲ್ಲಿ 5% ಕ್ಯಾಶ್‌ಬ್ಯಾಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ನಿಂದ EMI ಸೌಲಭ್ಯ ಪಡೆಯಬಹುದು.
ಆಪಲ್ ಐಫೋನ್ 14 ಮೇಲೆ ಪ್ರಸ್ತುತ 7,901 ರಿಯಾಯಿತಿ ನೀಡಲಾಗಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ ಇದರ ಬೆಲೆ 71,999 ರೂ. ಇದೆ. ಇದರ ಜೊತೆಗೆ, ಹಳೆಯ ಸ್ಮಾರ್ಟ್‌ಫೋನ್ ವಿನಿಮಯದ ಮೂಲಕ 23,000 ವರೆಗೆ ರಿಯಾಯಿತಿಯನ್ನ ಪಡೆಯಬಹುದು. ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಇಎಂಐ ವಹಿವಾಟುಗಳಲ್ಲಿ ಹೆಚ್ಚುವರಿ 4,000 ರೂ ರಿಯಾಯಿತಿ ಪಡೆಯಬಹುದು.
iPhone : Flipkart Holi Sale 2023 iPhone Big Sale offers